ಹಿಂದೂ ದೇವತೆಗಳಲ್ಲಿ ನಂಬಿಕೆಯಿರುವ ಹಿಂದೂಯೇತರರು ದೇವಸ್ಥಾನಗಳಿಗೆ ಹೋಗುವುದನ್ನು ತಡೆಯಲು ಸಾಧ್ಯವಿಲ್ಲ! – ಮದ್ರಾಸ ಉಚ್ಚ ನ್ಯಾಯಾಲಯ

ಚೆನ್ನೈ(ತಮಿಳುನಾಡು) – ಇತರ ಧರ್ಮದ ವ್ಯಕ್ತಿಯೊಬ್ಬರು ಹಿಂದೂ ದೇವತೆಯ ಮೇಲೆ ನಂಬಿಕೆಯಿಟ್ಟು ದೇವತೆಯನ್ನು ಭೇಟಿ ಮಾಡಲು ಬಯಸಿದರೆ ಅವನನ್ನು ಆ ದೇವತೆಯ ದೇವಾಲಯಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲು ಅಥವಾ ನಿಷೇಧಿಸಲು ಆಗುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯ ಒಂದು ಮನವಿಯ ಬಗ್ಗೆ ಆಲಿಕೆ ನಡೆಸಿ ತೀರ್ಪು ನೀಡಿದೆ.

ತಿರುವತ್ತರನಲ್ಲಿರುವ ಅರುಳ್ಮಿಘು ಆದಿಕೇಶವ ಪೆರುಮಾಳ ತಿರುಕೋವಿಲನ ಕುಂಭಾಭಿಷೇಕ ಉತ್ಸವದಲ್ಲಿ ಹಿಂದೂಯೇತರರು ಭಾಗವಹಿಸದಂತೆ ಮನವಿಯಲ್ಲಿ ಕೋರಲಾಗಿತ್ತು. ಸಿ ಸೋಮನ ಅವರು ಅರ್ಜಿ ಸಲ್ಲಿಸಿದ್ದರು. ಹಬ್ಬದ ಆಮಂತ್ರಣ ಪತ್ರಿಕೆಯಲ್ಲಿ ಕ್ರೈಸ್ತ ಧರ್ಮಿಯ ಮಂತ್ರಿಯೊಬ್ಬರ ಹೆಸರು ಪ್ರಕಟವಾದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಹುಟ್ಟು ಕ್ರಿಶ್ಚಿಯನ ಗಾಯಕನಾದ ಜೇಸುದಾಸ ಇವರ ಭಕ್ತಿಗೀತೆಗಳನ್ನು ಹಲವು ದೇವಾಲಯಗಳಲ್ಲಿ ಪ್ರಸಾರಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿತು. ವೈಲಂಕನಿ ಚರ್ಚ ಮತ್ತು ನಾಗೈರ ದರ್ಗಾದಲ್ಲಿ ಅನೇಕ ಹಿಂದೂಗಳು ನಿಯಮಿತವಾಗಿ ಭೇಟಿ ನೀಡುತ್ತಾರೆ. ದೊಡ್ಡ ಧಾರ್ಮಿಕ ಉತ್ಸವದ ಸಂದರ್ಭದಲ್ಲಿ ಯಾವ ವ್ಯಕ್ತಿ ಯಾವ ಧರ್ಮಕ್ಕೆ ಸೇರಿದವರು ಎಂದು ತಿಳಿದುಕೊಳ್ಳುವುದು ಮತ್ತು ಅವರ ಪ್ರವೇಶ ನಿಷೇಧವು ಅಸಾಧ್ಯ ಎಂದು ನ್ಯಾಯಾಲಯ ತಿಳಿಸಿತು.