
ನವದೆಹಲಿ – ಆದಾಯ ಮೀರಿದ ಆಸ್ತಿಗೆ ಸಂಬಂಧಿಸಿದ ‘ಮನಿ ಲಾಂಡರಿಂಗ್’ (ಕಪ್ಪು ಹಣವನ್ನು ಬಿಳಿ ಮಾಡುವುದು) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (‘ಇಡಿ’) ಆಸ್ಸಾಂ ಪೊಲೀಸರ ಮಾಜಿ ಪೊಲೀಸ್ ಉಪಮಹಾನಿರ್ದೇಶಕ ಪ್ರಶಾಂತ ಕುಮಾರ ದತ್ತಾ ಅವರ 53 ಕೋಟಿ 28 ಲಕ್ಷ ರೂಪಾಯಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ. ಗೌಹತ್ತಿಯಲ್ಲಿನ 4 ಹೋಟೆಲ್‌ಗಳು, ಹಾಗೆಯೇ ಮುಂಬಯಿಯ ಅಂಧೇರಿ (ಪಶ್ಚಿಮ)ದಲ್ಲಿನ ‘ಸಮರ್ಥ ದೀಪ್’ನಲ್ಲಿರುವ ಎರಡು ಫ್ಲ್ಯಾಟ್ ಗಳನ್ನು ಜಪ್ತಿ ಮಾಡಲಾಗಿದೆ. ದತ್ತಾ ಅವರು 2019 ರಲ್ಲಿ ಆಸ್ಸಾಂ ಪೊಲೀಸ್ ಪಡೆಯ ಉಪಮಹಾನಿರ್ದೇಶಕರ ಹುದ್ದೆಯಿಂದ ನಿವೃತ್ತರಾಗಿದ್ದರು. ದತ್ತಾ ಅವರು 1992 ರಿಂದ 2019 ರ ವರೆಗಿನ ತಮ್ಮ ಸೇವಾ ಕಾಲದಲ್ಲಿ ಘೋಷಿತ ಆದಾಯಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಆಸ್ತಿ ಗಳಿಸಿದ್ದಾರೆಂಬ ಆರೋಪವಿದೆ. ‘ಇಡಿ’ ನೀಡಿದ ಮಾಹಿತಿಯ ಪ್ರಕಾರ ದತ್ತಾ ಮತ್ತು ಅವರ ಪತ್ನಿಯ ಒಟ್ಟು ಘೋಷಿತ ಆದಾಯ 7 ಕೋಟಿ 23 ಲಕ್ಷ ರೂಪಾಯಿಗಳಾಗಿತ್ತು, ಆದರೆ ಖರ್ಚು 9 ಕೋಟಿ 4 ಲಕ್ಷ ರೂಪಾಯಿಗಳಾಗಿತ್ತು. ಹೀಗಿದ್ದರೂ ಅವರ ಬಳಿ 79 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
15 ಸಾವಿರ ಜನರನ್ನು ಕೊಲ್ಲುವ ಸಂಚು ಇತ್ತು! – ಆರೋಪಿ ಫಯ್ಯಾಜ್ ಒಪ್ಪಿಗೆ
ಶ್ರೀರಾಮಮಂದಿರದ ದಾನ ಕಳ್ಳತನ ಪ್ರಕರಣದ 8 ಆರೋಪಿಗಳ ಮನೆಗಳ ಮೇಲೆ ಪೊಲೀಸರ ದಾಳಿ
ಮುಳಗುಂದ : ಒಬ್ಬನೇ ಒಬ್ಬ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳಿಂದ ಮೊಹರಂ ಆಚರಣೆ!
೪ ವರ್ಷದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಮಾಡಿದ ೬೦ ವರ್ಷದ ಅಬ್ರಾರ್
ಶ್ರೀರಾಮ ಮಂದಿರದ ಕಾಣಿಕೆ ಕಳ್ಳತನ; 5 ಆರೋಪಿಗಳ ಮನೆಗಳು ಪರಸ್ಪರ ಹತ್ತಿರದಲ್ಲಿರುವುದು ಬಹಿರಂಗ
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !