ಕಾಳಿಯಂತಹ ಚಿತ್ರ ತಯಾರಿಸುವವರ ಶಿರಚ್ಛೇದ ಮಾಡುವವರಿಗೆ ೨೦ ಲಕ್ಷ ರೂಪಾಯಿ ನೀಡುವೆ !

ಹರಿದ್ವಾರದ ಶ್ರೀ ಪಂಚಾಯತೀ ನಿರಂಜನೀ ಆಖಾಡಾದ ಮಹಾಮಂಡಲೇಶ್ವರ ಸ್ವಾಮಿ ವೈರಾಗಾನಂದ ಗಿರಿ ಮಹಾರಾಜರ ಘೋಷಣೆ

ಗ್ರೆಟರ ನೋಯ್ಡಾ (ಉತ್ತರಪ್ರದೇಶ ) – ‘ಕಾಳಿ’ಯಂತಹ ಚಿತ್ರಗಳ ಮೂಲಕ ಹಿಂದೂ ಧರ್ಮಕ್ಕೆ ಅಪಕೀರ್ತಿ ತರುವ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆದಿದೆ. ಕಾಳಿಮಾತೆಯ ಅವಮಾನ ಮಾಡಿದ್ದಾರೆ. ನಿರಂಜನೀ ಆಖಾಡಾದ ಸಂತನಾಗಿರುವ ನಾನು ಘೋಷಿಸುವುದೇನೆಂದರೆ, ಇಂತಹ ಚಲನಚಿತ್ರ ತೆಗೆದಿರುವವರ ಶಿರಚ್ಛೇದ ಮಾಡುವವನಿಗೆ ನಾನು ೨೦ ಲಕ್ಷ ರೂಪಾಯಿ ನೀಡುವೇನು’ ಎಂಬ ಘೋಷಣೆ ಹರಿದ್ವಾರದ ಶ್ರೀ ಪಂಚಾಯತಿ ನಿರಂಜನೀ ಆಖಾಡಾದ ಮಹಾಮಂಡಲೇಶ್ವರ ಸ್ವಾಮಿ ವೈರಾಗಾನಂದ ಗಿರಿ ಮಹಾರಾಜ (ಧರ್ಮಗುರು ಮಿರ್ಚಿ ಬಾಬಾ) ಬಾಬಾ ಇವರು ಇಲ್ಲಿ ನೀಡಿದ್ದಾರೆ. ಅವರು ಸದ್ಯ ನೋಯ್ಡಾದ ಪ್ರವಾಸದಲ್ಲಿ ಇದ್ದಾರೆ. ‘ಆಶ್ರಮ’ ಎಂಬ ವೆಬ್ ಸೀರೀಸ್ ನಿರ್ಮಾಪಕರು ಹಿಂದೂ ಧರ್ಮದ ಮೇಲೆ ಆಘಾತ ಮಾಡುತ್ತಿದ್ದಾರೆ ಎಂದು ಸಹ ಅವರು ಹೇಳಿದರು.

ಮಹಾಮಂಡಲೇಶ್ವರ ಸ್ವಾಮಿ ವೈರಾಗಾನಂದ ಗಿರಿ ಮಹಾರಾಜ ಮಾತು ಮುಂದುವರಿಸಿ, ಎಲ್ಲೆಡೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲಲ್ಲಿ ಮನವಿ ನೀಡಲಾಗುತ್ತಿದೆ. ಆದರೆ ಕಾನೂನಿನ ಪ್ರಕಾರ ಪೂರ್ಣ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಸರಕಾರ ಇಂತಹ ಜನರನ್ನು ಬಂಧಿಸಿ ಕಠೋರ ಶಿಕ್ಷೆ ನೀಡಬೇಕು.