ರಾಜಸ್ಥಾನದ ಮನ್ಸೂರ ಅಲಿ ಎಂಬಾತನು ದಲಿತ ಯುವತಿಯ ಮೇಲೆ ೬ ವರ್ಷಗಳ ಕಾಲ ಬಲಾತ್ಕಾರ ನಡೆಸಿದ್ದಾನೆ !

ಪೊಲೀಸರಲ್ಲಿ ನೀಡಿರುವ ದೂರು ಹಿಂಪಡೆಯುವಂತೆ ಸಂತ್ರಸ್ತೆಯ ಮೇಲೆ ಒತ್ತಡ !

ಜಯಪುರ – ರಾಜಸ್ಥಾನದ ಟೋಂಕ ಜಿಲ್ಲೆಯ ಮೇಹಂದವಾಸ ಭಾಗದ ಓರ್ವ ಯುವತಿಯ ಮೇಲೆ ಮನ್ಸೂರ ಅಲಿ ಎಂಬ ಮುಸಲ್ಮಾನ ೬ ವರ್ಷಗಳಿಂದ ಬಲಾತ್ಕಾರ ನಡೆಸಿದ್ದಾನೆ. ಅವನು ಸಂತ್ರಸ್ತೆಯ ಅಶ್ಲೀಲ ವಿಡಿಯೋ ತಯಾರಿಸಿ ಆಕೆಗೆ ‘ಬ್ಲಾಕ್‌ಮೇಲ್’ ಮಾಡುತ್ತಾ ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದಾನೆ. ಪೊಲೀಸರು ಅವನ ವಿರುದ್ಧ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಸಂತ್ರಸ್ತೆ ನೀಡಿರುವ ಮಾಹಿತಿಯ ಪ್ರಕಾರ ಆಕೆ ೧೫ ವರ್ಷದವಳಲಾಗಿದ್ದಾಗ ಅಲಿ ಮೊದಲ ಬಾರಿ ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದಾನೆ.

ಸಂತ್ರಸ್ತೆಯು, ೨ ದಿನದ ಮೊದಲು ಹೊಲದಲ್ಲಿ ಬಂದು ಆಕೆಗೆ ಥಳಿಸಿದ್ದಾನೆ ಹಾಗೂ ಆಕೆಗೆ ಮತ್ತು ಆಕೆಯ ಕುಟುಂಬದವರನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ. ಈ ಎಲ್ಲರಿಂದ ಬೇಸತ್ತು ಆಕೆ ತನ್ನ ತಂದೆ ತಾಯಿಗೆ ಎಲ್ಲ ವಿಷಯ ತಿಳಿಸಿದ್ದಾಳೆ. ಅದರ ನಂತರ ಅವರು ಪೊಲೀಸರಲ್ಲಿ ದೂರು ನೀಡಿದರು. ಭೀಮ ಸೇನೆಯ ಜಿಲ್ಲಾಧ್ಯಕ್ಷ ಅಶೋಕ ಭೈರವ ಇವರು ಇದು ‘ಲವ್ ಜಿಹಾದ’ನ ಪ್ರಕಾರ ಇರುವುದಾಗಿ ಹೇಳಿ ಅಲಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇನೊಂದು ಕಡೆಗೆ ಅಲಿಯ ಕುಟುಂಬದವರು ಅಲಿಯ ಮೇಲಿನ ದೂರು ಹಿಂಪಡೆಯಲು ಸಂತ್ರಸ್ತೆಯ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸಂಪಾದಕೀಯ ನಿಲುವು

ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕಾಂಗ್ರೆಸ್ ಆಡಳಿತದ ರಾಜಸ್ಥಾನ !

‘ದಲಿತ ಮುಸ್ಲಿಮ್ ಭಾಯಿ ಭಾಯಿ’ ಎಂದು ದಲಿತರನ್ನು ಹಿಂದೂಗಳಿಂದ ದೂರ ಮಾಡುವವರು ಈಗ ಎಲ್ಲ ಹಿಂದೂಗಳೇ ಕಾನೂನು ಮಾರ್ಗದಿಂದ ಪಾಠ ಕಲಿಸಬೇಕು !