ಅಮರನಾಥದಲ್ಲಿ ಮೇಘಸ್ಫೋಟದಿಂದ ಸ್ವಲ್ಪದರಲ್ಲಿ ಪಾರಾದ ಶಾಸಕ ಟಿ. ರಾಜಾಸಿಂಗ ಮತ್ತು ಕುಟುಂಬದವರು !

ಭಾಗ್ಯನಗರ – ಅಮರನಾಥ ಗುಹೆಯ ತಪ್ಪಲಿನಲ್ಲಿರುವ ಯಾತ್ರಾಸ್ಥಳದ ಬಳಿ ಜುಲೈ ೮ ರಂದು ಸಂಭವಿಸಿದ ಮೇಘಸ್ಫೋಟದಲ್ಲಿ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ನೇತಾರ ಹಾಗೂ ಬಿಜೆಪಿ ಶಾಸಕ ಶ್ರೀ ಟಿ ರಾಜಾಸಿಂಗರವರ ಕುಟುಂಬ ಸಿಲುಕಿಕೊಂಡಿತ್ತು. ಅವರು ಬಿಕ್ಕಟ್ಟಿನಿಂದ ಸ್ವಲ್ಪದರಲ್ಲೇ ಪಾರಾದರು. ಸಿಂಗ ವಿಶೇಷ ರಕ್ಷಣೆಯಲ್ಲಿದ್ದ ಕಾರಣ ಭಾರತೀಯ ಸೇನೆಯು ಅವರನ್ನು ಮತ್ತು ಅವರ ಕುಟುಂಬವನ್ನು ಶ್ರೀನಗರಕ್ಕೆ ಸ್ಥಳಾಂತರಿಸಿತು.

ಟಿ. ರಾಜಾಸಿಂಗ ಅವರು ಅವರ ಪವಾಡಸದೃಶ ಅನುಭವದ ಬಗ್ಗೆ ಹೇಳುವಾಗ ‘ಅಮರನಾಥ ದೇವರ ದರ್ಶನ ಮುಗಿಸಿ ಕೆಳಗಿಳಿದು ಬರುವಾಗ ವಾತಾವರಣ ಹದಗೆಡುತ್ತಿರುವುದನ್ನು ನಾವು ನೋಡಿದೆವು. ಆದ್ದರಿಂದ ಹೆಲಿಕಾಪ್ಟರ ಬದಲಾಗಿ ನಾವು ಕುದುರೆಗಳ ಸಹಾಯದಿಂದ ಕೆಳಗಿಳಿದೆವು. ಒಂದು ಕೀಲೊಮೀಟರ ದೂರದಲ್ಲಿ ನಾನು ಮೇಘ ಸ್ಫೋಟವನ್ನು ಕಣ್ಣುಗಳಿಂದ ನೋಡಿದೆ’. ಸೇನೆಯಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯನ್ನು ಕೂಡಾ ಅವರು ಶ್ಲಾಘಿಸಿದರು.