ಸರ್ವೋಚ್ಚ ನ್ಯಾಯಾಲಯದಿಂದ ಈಡಿ ಬಂಧನದ ಅಧಿಕಾರ ಶಾಶ್ವತ!

ಪ್ರೇವೆಂಶನ್ ಆಫ್ ಮನಿ ಲಾಂಡರಿಂಗ್ ಆಕ್ಟ (ಪಿ.ಎಂ.ಎಲ್.ಎ) ಕಾನೂನಿನಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಈಡಿಯ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಕಾನೂನಿನ ಉಪಬಂಧಗಳನ್ನು ಸಾಂವಿಧಾನಿಕವಾಗಿ ಪ್ರಶ್ನಿಸುವ ಮನವಿಗಳ ಮೇಲೆ ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ.

ಹೀಜಾಬ್ ಧರಿಸಿ ಬರುವುದಕ್ಕಾಗಿ ಕರ್ನಾಟಕದಲ್ಲಿ ಮುಸಲ್ಮಾನರು ಖಾಸಗಿ ಮಹಾವಿದ್ಯಾಲಯಗಳನ್ನು ತೆರೆಯುವರು !

ಕರ್ನಾಟಕ ವಿಧಾನಸಭೆ ಚುನಾವಣೆಯ ಮೊದಲು ಹಿಜಾಬ ವಿವಾದ ಮತ್ತೊಮ್ಮೆ ಗರಿಗೇದರಿದೆ. ರಾಜ್ಯದ ದಕ್ಷಿಣ ಜಿಲ್ಲೆಯಲ್ಲಿ ಮುಸಲ್ಮಾನ ಸಂಘಟನೆಗಳು ರಾಜ್ಯದಲ್ಲಿ ೧೩ ಹೊಸ ಖಾಸಗಿ ಮಹಾವಿದ್ಯಾಲಯಗಳನ್ನು ತೆರೆಯಲು ಅರ್ಜಿ ಸಲ್ಲಿಸಿದೆ. ಈ ಮಹಾವಿದ್ಯಾಲಯಗಳಲ್ಲಿ ಹಿಜಾಬ ಮೇಲೆ ನಿಷೇಧ ಹೇರಲಾಗುವುದಿಲ್ಲ. ರಾಜ್ಯದಲ್ಲಿ ಎಲ್ಲಾ ಸರಕಾರಿ ಶೈಕ್ಷಣಿಕ ಸಂಸ್ಥೆಯಲ್ಲಿ ಹಿಜಾಬ್ ಮೇಲೆ ನಿಷೇಧ ಹೇರಲಾಗಿದೆ.

ಮಧ್ಯಪ್ರದೇಶದ ಹಿಂದೂ ವಿದ್ಯಾರ್ಥಿಯ ದೇಹ ಎರಡು ಭಾಗವಾಗಿ ತುಂಢರಿಸಿದ ದೇಹ ಪತ್ತೆ !

ಮಧ್ಯಪ್ರದೇಶದ ರಾಯಸೇನಾ ಜಿಲ್ಲೆಯಲ್ಲಿ ಜುಲೈ ೨೪ ರ ಸಂಜೆ ನಿಶಂಕ ರಾಠೋರ ಇಂಜಿನಿಯರ್ ಶಾಖೆಯ ಒಬ್ಬ ವಿದ್ಯಾರ್ಥಿಯ ಮೃತ ದೇಹ ರೈಲ್ವೆ ಹಳಿಯ ಮೇಲೆ ಸೊಂಟದಿಂದ ಮೇಲೆ ಮತ್ತು ಕೆಳಗೆ ಈ ರೀತಿ ಎರಡು ಭಾಗಗಳಲ್ಲಿ ತುಂಢರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮದ್ಯಪಾನ ನಿಷೇಧಿತ ಗುಜರಾತಿನಲ್ಲಿ ವಿಷಯುಕ್ತ ಸರಾಯಿ ಸೇವಿಸಿದ 28 ಜನರ ಅಪಮೃತ್ಯು

ಜಿಲ್ಲೆಯ ರೋಜಿದ ಗ್ರಾಮದಲ್ಲಿ ವಿಷಯುಕ್ತ ಸರಾಯಿ ಸೇವಿಸಿದ್ದರಿಂದ ಇಲ್ಲಿಯವರೆಗೆ 28 ಜನರು ಸಾವನ್ನಪ್ಪಿದ್ದಾರೆ, ಮತ್ತು 30 ಜನರು ಈಗಲೂ ಅಸ್ವಸ್ಥರಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಔಷಧೋಪಚಾರ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು 10 ಜನರನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿದ 19 ಸಂಸದರು 1 ವಾರದ ಮಟ್ಟಿಗೆ ಅಮಾನತ್ತು.

ಕೇವಲ ಅಮಾನತ್ತು ಬೇಡ, ಅವರಿಂದ ಅಧಿವೇಶನದ ಸಮಯವನ್ನು ವ್ಯರ್ಥಗೊಳಿಸಿದ ಬಗ್ಗೆ ದಂಡವನ್ನು ವಸೂಲು ಮಾಡಬೇಕು. ಇದರೊಂದಿಗೆ ಅವರಿಗೆ ಕೊಡಲಾಗುವ ವೇತನ ಮತ್ತು ಭತ್ಯೆಯನ್ನು ಹಿಂಪಡೆದುಕೊಳ್ಳಬೇಕು.

ಮೇರಠ ಮಾಲ್ ಒಂದರಲ್ಲಿ ನಮಾಜ ಸಲ್ಲಿಕೆ : ಪೊಲೀಸರಿಂದ ಉತ್ತರ ಕೇಳಿದ ಪೊಲೀಸ ಮಹಾನಿರ್ದೇಶಕರು

ಲಕ್ಷ್ಮಣಪುರಿಯಲ್ಲಿ ಲುಲು ಮಾಲ್ ನಲ್ಲಿ ನಮಾಜ ಸಲ್ಲಿಸಿದ ಘಟನೆ ಬಿಸಿ ಇರುವಾಗಲೇ ಈಗ ಮೇರಠನ ಮಾಲ್ ಒಂದರಲ್ಲಿ ನಮಾಜ್ ಸಲ್ಲಿಸಲಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜುಲೈ ೨೪ ರಂದು ಪ್ರಸಾರವಾಗಿದೆ.

‘ಘರ-ಘರ ತಿರಂಗಾ’ ಅಭಿಯಾನಕ್ಕೆ ಮೆಹಬೂಬಾ ಮುಪ್ತಿ ಅಡ್ಡಿ !

ಪ್ರಧಾನಿ ನರೇಂದ್ರ ಮೋದಿ ಇವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಎಲ್ಲಾ ನಾಗರಿಕರಿಗೆ ಆಗಸ್ಟ್ ೧೨ ರಿಂದ ೧೫ ವರೆಗೆ ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಕರೆ ನೀಡಿದ್ದಾರೆ.

ಬಿಲಿಮೋರಾದ ಸೋಮನಾಥ ಮಹಾದೇವ ದೇವಸ್ಥಾನದ ಯಾತ್ರೆಯಲ್ಲಿ ಅಂಗಡಿಯನ್ನು ನಿರ್ಮಿಸಲು ಮುಸಲ್ಮಾನ ವ್ಯಕ್ತಿಗೆ ಗುತ್ತಿಗೆ

ಇಲ್ಲಿರುವ ಸೋಮನಾಥ ಮಹಾದೇವ ದೇವಸ್ಥಾನ ಯಾತ್ರೆಯಲ್ಲಿ ಮುಂಬಯಿಯ ಅನ್ವರ ಶೇಖ ಎಂಬ ಮುಸಲ್ಮಾನನಿಗೆ ಅಂಗಡಿ ಮತ್ತು ಮಕ್ಕಳಿಗಾಗಿ ಆಟದ ಪ್ರದೇಶವನ್ನು ನಿರ್ಮಿಸಲು ೪೬ ಲಕ್ಷ ರೂಪಾಯಿಗಳ ಗುತ್ತಿಗೆಯನ್ನು ನೀಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಗುತ್ತಿಗೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.

ಕಣ್ಣೂರಿನಲ್ಲಿ ಸಿಪಿಐಎಂ ಗೂಂಡಾಗಳಿಂದ ಸ್ವಯಂಸೇವಕ ಸಂಘದ ಜಿಮ್ನೇಶ್ ಹತ್ಯೆ !

ಇಲ್ಲಿನ ಕುತುಪರಂಬಾ ಪ್ರದೇಶದ ಪಾನುಂಡ ಎಂಬಲ್ಲಿ ಸಿಪಿಐಎಂನ ಗೂಂಡಾಗಳು ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಜಿಮ್ನೇಶ್ ಚಿಕಿತ್ಸೆ ಪಡೆಯುತ್ತಿದ್ದಾಗ ಮರುದಿನ ಮೃತಪಟ್ಟಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸ್ವಾತಂತ್ರ್ಯ ಯಾವಾಗ ? – ರಾಷ್ಟ್ರೀಯ ಸ್ವಯಂಸೇವಕ ಸಂಘ

ಪಾಕಿಸ್ತಾನದ ವಶದಲ್ಲಿರುವ ಜಮ್ಮು ಕಾಶ್ಮೀರ ಭಾಗದ ಜನರು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗೆ ಬಲಿಯಾಗುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಅವರು ಭಾರತದತ್ತ ಆಸೆಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯ ಎಂದು ? ಎಂಬ ಪ್ರಶ್ನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಚಿವ ದತ್ತಾತ್ರೇಯ ಹೊಸಬಾಳೆ ಇವರು ಕೇಳಿದರು.