ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿದ 19 ಸಂಸದರು 1 ವಾರದ ಮಟ್ಟಿಗೆ ಅಮಾನತ್ತು.

ಹೊಸ ದೆಹಲಿ – ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಘೋಷಣೆಗಳನ್ನು ಕೂಗಿದ ಪ್ರಕರಣದಲ್ಲಿ 19 ಸಂಸದರನ್ನು ಒಂದು ವಾರಕ್ಕಾಗಿ ಅಮಾನತ್ತುಗೊಳಿಸಲಾಗಿದೆ. ಈ ಹಿಂದೆಯೇ ಲೋಕಸಭೆಯ 4 ಸಂಸದರನ್ನು ಅಮಾನತ್ತುಗೊಳಿಸಲಾಗಿದೆ. ಅಧಿವೇಶನದಲ್ಲಿ ವಸ್ತು ಮತ್ತು ಜಿ.ಎಸ್.ಟಿ, ಬೆಲೆ ಏರಿಕೆ ಮುಂತಾದ ಅಂಶಗಳ ಮೇಲೆ ವಿರೋಧಿಗಳು ಗದ್ದಲ ಹಾಕಿದರು. ವಿರೋಧಿ ಪಕ್ಷ ಅಧಿವೇಶನದ ಕಾರ್ಯಕಲಾಪದಲ್ಲಿ ಅಡ್ಡಿ ಮಾಡುತ್ತಿದೆಯೆಂದು ಸರಕಾರ ಹೇಳುತ್ತಿದೆ. ಹಾಗಿದ್ದರೆ ಸರಕಾರ ಈ ಪ್ರಶ್ನೆಗಳ ಮೇಲೆ ಚರ್ಚೆ ಮಾಡಲು ಏಕೆ ಹಿಂದೆಮುಂದೆ ನೋಡುತ್ತಿದೆಯೆಂದು ವಿರೋಧಿಗಳು ಆರೋಪ ಮಾಡಿದ್ದಾರೆ. ಈ ಅಧಿವೇಶನ 12 ಅಗಸ್ಟ ವರೆಗೆ ಜರುಗಲಿದೆ.

ಸಂಪಾದಕೀಯ ನಿಲುವು

ಕೇವಲ ಅಮಾನತ್ತು ಬೇಡ, ಅವರಿಂದ ಅಧಿವೇಶನದ ಸಮಯವನ್ನು ವ್ಯರ್ಥಗೊಳಿಸಿದ ಬಗ್ಗೆ ದಂಡವನ್ನು ವಸೂಲು ಮಾಡಬೇಕು. ಇದರೊಂದಿಗೆ ಅವರಿಗೆ ಕೊಡಲಾಗುವ ವೇತನ ಮತ್ತು ಭತ್ಯೆಯನ್ನು ಹಿಂಪಡೆದುಕೊಳ್ಳಬೇಕು.