ಮದ್ಯಪಾನ ನಿಷೇಧಿತ ಗುಜರಾತಿನಲ್ಲಿ ವಿಷಯುಕ್ತ ಸರಾಯಿ ಸೇವಿಸಿದ 28 ಜನರ ಅಪಮೃತ್ಯು

30 ಜನರು ಅಸ್ವಸ್ಥ

ಬೋಟಾದ (ಗುಜರಾತ) – ಜಿಲ್ಲೆಯ ರೋಜಿದ ಗ್ರಾಮದಲ್ಲಿ ವಿಷಯುಕ್ತ ಸರಾಯಿ ಸೇವಿಸಿದ್ದರಿಂದ ಇಲ್ಲಿಯವರೆಗೆ 28 ಜನರು ಸಾವನ್ನಪ್ಪಿದ್ದಾರೆ, ಮತ್ತು 30 ಜನರು ಈಗಲೂ ಅಸ್ವಸ್ಥರಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಔಷಧೋಪಚಾರ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು 10 ಜನರನ್ನು ವಶಕ್ಕೆ ಪಡೆದಿದ್ದಾರೆ. ಗುಜರಾತ ಭಯೋತ್ಪಾದನಾ ನಿಗ್ರಹ ದಳ ಮತ್ತು ಕರ್ಣಾವತಿ ಅಪರಾಧ ಶಾಖೆಯ ಪೊಲೀಸರು ಈ ಘಟನೆಯ ತನಿಖೆ ಮಾಡುತ್ತಿದ್ದಾರೆ. ಸರಾಯಿ ಕಳ್ಳಸಾಗಾಟಗಾರರಿಂದ ಈ ಮದ್ಯವನ್ನು ಖರೀದಿಸಲಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ.

ಮದ್ಯಪಾನ ನಿಷೇಧ ಜಾರಿಯಲ್ಲಿ ಇರುವಾಗಲೂ ಸರಾಯಿ ಉಪಲಬ್ಧವಾಗುತ್ತದೆ ಮತ್ತು ಅದನ್ನು ಸೇವಿಸಿ ಕೆಲವು ಜನರು ಸಾವನ್ನಪ್ಪುತ್ತಾರೆ, ಇದು ಪೊಲೀಸರಿಗೆ ಮತ್ತು ಸರಕಾರಕ್ಕೆ ನಾಚಿಕೆಗೇಡು. ದೇಶದಲ್ಲಿ ಎಷ್ಟೇ ಕಾನೂನು ಮತ್ತು ನಿಷೇಧಗಳನ್ನು ಹೇರಿದರೂ, ಅಪರಾಧಗಳು ನಿಲ್ಲುವುದಿಲ್ಲ. ಇದಕ್ಕೆ ಭ್ರಷ್ಟಾಚಾರ ಮುಖ್ಯ ಕಾರಣವಾಗಿದೆ. ಅದನ್ನು ನಷ್ಟಗೊಳಿಸಲು ರಾಜಕಾರಣಿಗಳು ಸಮರೋಪಾದಿಯಲ್ಲಿ ಪ್ರಯತ್ನಿಸುವುದು ಆವಶ್ಯಕವಿದೆ; ಆದರೆ `ಭ್ರಷ್ಟಾಚಾರಿಗಳಲ್ಲದ’ ರಾಜಕಾರಣಿಗಳು ದೇಶದಲ್ಲಿಯಾದರೂ ಇದ್ದಾರೆಯೇ?