ಕಣ್ಣೂರಿನಲ್ಲಿ ಸಿಪಿಐಎಂ ಗೂಂಡಾಗಳಿಂದ ಸ್ವಯಂಸೇವಕ ಸಂಘದ ಜಿಮ್ನೇಶ್ ಹತ್ಯೆ !

ಕಣ್ಣೂರು (ಕೇರಳ) – ಇಲ್ಲಿನ ಕುತುಪರಂಬಾ ಪ್ರದೇಶದ ಪಾನುಂಡ ಎಂಬಲ್ಲಿ ಸಿಪಿಐಎಂನ ಗೂಂಡಾಗಳು ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಜಿಮ್ನೇಶ್ ಚಿಕಿತ್ಸೆ ಪಡೆಯುತ್ತಿದ್ದಾಗ ಮರುದಿನ ಮೃತಪಟ್ಟಿದ್ದಾರೆ. ಜುಲೈ ೨೪ ರಂದು ಸಿಪಿಐಎಂನ ಕಾರ್ಯಕರ್ತರು ಜಿಮ್ನೇಶ್ ಮತ್ತು ಇತರ ಕೆಲವು ಸ್ವಯಂಸೇವಕರ ಮೇಲೆ ಹಲ್ಲೆ ನಡೆಸಿದ್ದರು. ಇತರ ಸ್ವಯಂಸೇವಕರು ತಲಶ್ಶೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಲಗಳಿಂದ ತಿಳಿದ ಮಾಹಿತಿಯ ಪ್ರಕಾರ ಇಲ್ಲಿನ ಪಿಣರಾಯಿ ಗ್ರಾಮದಲ್ಲಿ ಟಿ. ಅಕ್ಷಯ ಎಂಬ ಸ್ವಯಂಸೇವಕನ ಮನೆಯಲ್ಲಿ ‘ಗುರುದಕ್ಷಿಣೆ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ ಸ್ವಯಂಸೇವಕರು ಮನೆಗೆ ಹಿಂದಿರುಗುತ್ತಿದ್ದಾಗ ಸಿಪಿಐಎಂನ ಗೂಂಡಾಗಳು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಇದರಲ್ಲಿ ಜಿಮ್ನೇಶ್ ಸಹಿತ ಟಿ. ಅಕ್ಷಯ, ಎ. ಆದರ್ಶ, ಪಿ.ವಿ. ಜಿಷ್ಣು ಮತ್ತು ಕೆ.ಪಿ. ಆದರ್ಶ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಜಿಮ್ನೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಕುಸಿದು ಬಿದ್ದರು ಹಾಗೂ ‘ಆಂತರಿಕ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದಾರೆ’, ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಜಿಮ್ನೇಶ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. (ಸಿಪಿಐಎಂ ರಾಜ್ಯದಲ್ಲಿ ಪೊಲೀಸರಿಂದ ಇನ್ನೇನು ನಿರೀಕ್ಷಿಸಬಹುದು ? – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದುತ್ವನಿಷ್ಠರಿಗೆ ಮಾರಕವಾಗಿರುವ ಸಿಪಿಎಂ ! ಹಿಂದೂಗಳ ರಕ್ಷಣೆಗಾಗಿ ಇಲ್ಲಿ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯವಾಗಿದೆ !

ಬಂಗಾಲ, ಕೇರಳದಂತಹ ರಾಜ್ಯಗಳು ಹಿಂದೂಗಳಿಗೆ ಹೆಚ್ಚು ಅಸುರಕ್ಷಿತವಾಗುತ್ತಿವೆ. ಈ ಪರಿಸ್ಥಿತಿಗೆ ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಪರಿಹಾರವಾಗಿದೆ, ಎಂದು ತಿಳಿಯಿರಿ !