ಮೇರಠ ಮಾಲ್ ಒಂದರಲ್ಲಿ ನಮಾಜ ಸಲ್ಲಿಕೆ : ಪೊಲೀಸರಿಂದ ಉತ್ತರ ಕೇಳಿದ ಪೊಲೀಸ ಮಹಾನಿರ್ದೇಶಕರು

ಮೇರಠ (ಉತ್ತರಪ್ರದೇಶ) – ಲಕ್ಷ್ಮಣಪುರಿಯಲ್ಲಿ ಲುಲು ಮಾಲ್ ನಲ್ಲಿ ನಮಾಜ ಸಲ್ಲಿಸಿದ ಘಟನೆ ಬಿಸಿ ಇರುವಾಗಲೇ ಈಗ ಮೇರಠನ ಮಾಲ್ ಒಂದರಲ್ಲಿ ನಮಾಜ್ ಸಲ್ಲಿಸಲಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜುಲೈ ೨೪ ರಂದು ಪ್ರಸಾರವಾಗಿದೆ. ಈ ವೀಡಿಯೋದಲ್ಲಿ ಓರ್ವ ಯುವಕ ನಮಾಜ ಮಾಡುವಾಗ ಕಾಣುತ್ತಾನೆ. ಈ ವೀಡಿಯೋ ಪ್ರಸಾರವಾದ ನಂತರ ಅದರ ಬಗ್ಗೆ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರು ಮೇರಠ ಪೊಲೀಸರಿಂದ ಉತ್ತರ ಕೇಳಿದ್ದಾರೆ. (ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಮಾಡುವ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಉತ್ತರ ಪ್ರದೇಶ ಭಾಜಪ ಸರಕಾರದಿಂದ ಜನರ ಅಪೇಕ್ಷೆಯಾಗಿದೆ ! – ಸಂಪಾದಕರು)

ಭಾಜಪದ ಮಾಹಿತಿ ತಂತ್ರಜ್ಞಾನ ಇಲಾಖೆ ಯ ಜಿಲ್ಲಾ ಸಂಯೋಜಕ ದಿಗ್ವಿಜಯ್ ಸಿಂಹ ಇವರು ಈ ಪ್ರಕರಣದಲ್ಲಿ ಮೇರಠ ಪೊಲೀಸ್, ಪೋಲೀಸ್ ಮಹಾನಿರ್ದೇಶಕರು ಮತ್ತು ಜಿಲ್ಲಾಧಿಕಾರಿ ಇವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಪೊಲೀಸರು ಮಾಲ್ ನಲ್ಲಿ ನಮಾಜ ಮಾಡುವ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ, ಎಂದು ನೌಚಂಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದರು.