ಮಧ್ಯಪ್ರದೇಶದ ಹಿಂದೂ ವಿದ್ಯಾರ್ಥಿಯ ದೇಹ ಎರಡು ಭಾಗವಾಗಿ ತುಂಢರಿಸಿದ ದೇಹ ಪತ್ತೆ !

ಘಟನೆಯ ಕೆಲವೇ ನಿಮಿಷಗಳ ಮೊದಲು ತಂದೆಗೆ ‘ಸರ್ ತನ್ ಸೆ ಜುದಾ’ (ತಲೆ ದೇಹದಿಂದ ಬೇರೆ) ಎಂಬ ಸಂದೇಶ ಸಿಕ್ಕಿತ್ತು !

ಭೋಪಾಲ – ಮಧ್ಯಪ್ರದೇಶದ ರಾಯಸೇನಾ ಜಿಲ್ಲೆಯಲ್ಲಿ ಜುಲೈ ೨೪ ರ ಸಂಜೆ ನಿಶಂಕ ರಾಠೋರ ಇಂಜಿನಿಯರ್ ಶಾಖೆಯ ಒಬ್ಬ ವಿದ್ಯಾರ್ಥಿಯ ಮೃತ ದೇಹ ರೈಲ್ವೆ ಹಳಿಯ ಮೇಲೆ ಸೊಂಟದಿಂದ ಮೇಲೆ ಮತ್ತು ಕೆಳಗೆ ಈ ರೀತಿ ಎರಡು ಭಾಗಗಳಲ್ಲಿ ತುಂಢರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಘಟನೆಯ ಕೆಲವು ನಿಮಿಷದ ಮೊದಲು ನಿಶಂಕನ ಸಂಚಾರ ವಾಣಿಯ ಮೂಲಕ ಅವರ ತಂದೆಯ ಸಂಚಾರ ವಾಣಿಯಲ್ಲಿ ‘ರಾಠೋರ್ ಸಾಹೇಬ್, ನಿಮ್ಮ ಮಗ ಬಹಳ ಶೂರವಾಗಿದ್ದ, ಗುಸ್ತಾಕ-ಏ-ನಬಿ ಕೀ ಏಕ ಹಿ ಸಜಾ, ಸರ್ ತನಸೇ ಜೂದಾ (ಮಹಮ್ಮದ್ ಪೈಗಂಬರ್ ಇವರನ್ನು ಅವಮಾನಿಸುವವರಿಗೆ ‘ದೇಹದಿಂದ ರುಂಡವನ್ನು ಬೇರ್ಪಡಿಸುವುದು’ ಇದೊಂದೇ ಶಿಕ್ಷೆ !)’, ಎಂಬ ಸಂದೇಶ ಬಂದಿತ್ತು. ನಿಶಂಕನ ತಂದೆ ಉಮಾಶಂಕರ ರಾಠೋರ ಇವರು, ನಿಶಂಕನ ‘ವಾಟ್ಸಪ್’ ಮತ್ತು ‘ಇನ್ಸ್ಟಾಗ್ರಾಮ್’ ಖಾತೆಯಲ್ಲಿನ ಛಾಯಾಚಿತ್ರದ ಮೇಲೆ (‘ಡಿಪಿ’ ಮೇಲೆ) ‘ಗುಸ್ತಾಕ-ಎ-ನಬಿ ಕೀ ಏಕಹೀ ಸಜಾ ಸರ್ ತನ್ ಸೆ ಜುದಾ !’, ಇದೇ ವಾಕ್ಯ ಬರೆಯಲಾಗಿತ್ತು. ನೂಪುರ ಶರ್ಮಾ ಪ್ರಕರಣದಲ್ಲಿ ದೇಶಾದ್ಯಂತ ಮತಾಂಧರು ಮಾಡಿರುವ ಆಂದೋಲನದ ಸಮಯದಲ್ಲಿ ಈ ವಾಕ್ಯವನ್ನು ಮೊಟ್ಟಮೊದಲಬಾರಿಗೆ ಘೋಷಣೆ ನೀಡಲಾಗಿತ್ತು. ಅದರ ನಂತರವೇ ಇಬ್ಬರೂ ಮತಾಂಧರಿಂದ ರಾಜಸ್ಥಾನದ ಉದಯಪೂರದಲ್ಲಿ ಕನ್ಹ್ಯೆಯಾಲಾಲ್ ಇವರ ಶಿರಚ್ಛೇದ ಮಾಡಲಾಗಿತ್ತು.

೧. ಪ್ರಾರ್ಥಮಿಕ ವಿಚಾರಣೆಯಲ್ಲಿ ಪೊಲೀಸರು ಇದು ಆತ್ಮಹತ್ಯೆಯ ಪ್ರಕರಣ ಎಂದು ಹೇಳಿದ್ದರು, ಆದರೆ ತಂದೆಯ ಸಂಚಾರವಾಣಿಗೆ ಬಂದಿರುವ ಸಂದೇಶದಿಂದ ಇದು ಆತ್ಮಹತ್ಯೆ ಇರಲು ಸಾಧ್ಯವಿಲ್ಲ’, ಎಂದು ಹೇಳಲಾಗುತ್ತಿದೆ.

೨. ಉಮಾಶಂಕರ ರಾಠೋರ ಇವರು, ನಿಶಂಕ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅವನ ಹತ್ಯೆ ಮಾಡಲಾಗಿದೆ. ಅವನು ಹಿಂದುತ್ವ ವಿಚಾರಸರಣಿಯವನು ಆಗಿರಲಿಲ್ಲ ಎಂದು ಹೇಳಿದರು.

೩. ೨೧ ವಯಸ್ಸಿನ ನಿಶಂಕ ಭೋಪಾಳದ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಅವನು ಮೂಲ ಭೋಪಾಲದ ನರ್ಮದಾಪುರ ಸಿವನಿ-ಮಾಳವಾದ ನಿವಾಸಿಯಾಗಿದ್ದನು.

೪. ಭೋಪಾಲ ಮತ್ತು ಸಿವನಿ ಮಾಳವಾ ನಡುವೆ ಇರುವ ರಾಯಸೇನ ಜಿಲ್ಲೆಯ ಬಡಖೇಡ ರೈಲು ನಿಲ್ದಾಣದ ಹತ್ತಿರ ಅವನ ಮೃತ ದೇಹ ಪತ್ತೆಯಾಗಿತ್ತು.

ಸಂಪಾದಕೀಯ ನಿಲುವು

‘ಸರ್ ತನ್ ಸೆ ಜುದಾ’ ಈ ರೀತಿಯ ಸಂದೇಶ ದೊರೆತಿದ್ದರಿಂದ ಈ ಘಟನೆಯ ಹಿಂದೆ ಮತಾಂಧ ಮುಸಲ್ಮಾನರಿರುವ ಸಾಧ್ಯತೆ ನಿರಾಕರಿಸಲಾಗುವುದಿಲ್ಲ ! ಇದರಿಂದ ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ಜೀವನವೇ ಹೆಚ್ಚೆಚ್ಚು ಅಸುರಕ್ಷಿತವಾಗುತ್ತಿರುವುದು ಸಾಕ್ಷಿಯಾಗಿದೆ !