ಬಿಲಿಮೋರಾದ ಸೋಮನಾಥ ಮಹಾದೇವ ದೇವಸ್ಥಾನದ ಯಾತ್ರೆಯಲ್ಲಿ ಅಂಗಡಿಯನ್ನು ನಿರ್ಮಿಸಲು ಮುಸಲ್ಮಾನ ವ್ಯಕ್ತಿಗೆ ಗುತ್ತಿಗೆ

ವಿಹಿಂಪ ವಿರೋಧಿಸಿದ ನಂತರ ಅಂಗಡಿಯ ಬಳಿ ಮಾಂಸಾಹಾರ ಸೇವಿಸದಂತೆ ಹಾಗೂ ನಮಾಜ್ ಮಾಡದಂತೆ ಷರತ್ತು !

ಬಿಲಿಮೋರಾ (ಗುಜರಾತ) – ಇಲ್ಲಿರುವ ಸೋಮನಾಥ ಮಹಾದೇವ ದೇವಸ್ಥಾನ ಯಾತ್ರೆಯಲ್ಲಿ ಮುಂಬಯಿಯ ಅನ್ವರ ಶೇಖ ಎಂಬ ಮುಸಲ್ಮಾನನಿಗೆ ಅಂಗಡಿ ಮತ್ತು ಮಕ್ಕಳಿಗಾಗಿ ಆಟದ ಪ್ರದೇಶವನ್ನು ನಿರ್ಮಿಸಲು ೪೬ ಲಕ್ಷ ರೂಪಾಯಿಗಳ ಗುತ್ತಿಗೆಯನ್ನು ನೀಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಗುತ್ತಿಗೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದೆ. ವಿಹಿಂಪನ ಕಾರ್ಯಕರ್ತರು ದೇವಸ್ಥಾನದ ವಿಶ್ವಸ್ಥರ ಕಚೇರಿಗೆ ತೆರಳಿ ‘ಗುತ್ತಿಗೆ ರದ್ದು ಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವಸ್ಥರು ಸಭೆ ಕರೆದು ಪ್ರಕರಣವನ್ನು ಬಗೆಹರಿಸಿದ್ದಾರೆ. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಯಾತ್ರೆ ನಡೆಯುತ್ತಿದ್ದು ಇಲ್ಲಿ ಸುಮಾರು ೧೦ ಲಕ್ಷ ಭಕ್ತರು ಬರುತ್ತಾರೆ.

೧. ವಿಹಿಂಪ ಪ್ರಕಾರ, ಮುಸ್ಲಿಮರಿಗೆ ಗುತ್ತಿಗೆ ನೀಡುವ ಮೂಲಕ ಹಿಂದೂ ಯಾತ್ರಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಅಪಾಯವಿದೆ. ಗುತ್ತಿಗೆ ಪಡೆದವರು ಇಲ್ಲಿ ಮಾಂಸಾಹಾರವನ್ನು ಮಾಡಲು ವ್ಯವಸ್ಥೆ ಮಾಡಬಹುದು, ಜೊತೆಗೆ ನಮಾಜ್ ಮಾಡಬಹುದು.

೨. ಈ ಕುರಿತು ದೇವಸ್ಥಾನದ ವಿಶ್ವಸ್ಥ ಶಿವಾ ಪಟೇಲ ಅವರು ಮಾತನಾಡಿ, ನಾವು ಗುತ್ತಿಗೆ ರದ್ದು ಮಾಡುವುದಿಲ್ಲ ಮತ್ತು ಗುತ್ತಗೆದಾರರಿಗೆ ‘ಮಾಂಸ ಸೇವಿಸುವುದಿಲ್ಲ ಮತ್ತು ನಮಾಜ ಮಾಡುವುದಿಲ್ಲ’, ಎಂಬ ಷರತ್ತನ್ನು ಹಾಕಲಾಗಿದೆ. ಮುಂದಿನ ವರ್ಷ ಗುತ್ತಿಗೆಯನ್ನು ನೀಡುವಾಗ ನಾವು ಈ ಬಗ್ಗೆ ಗಮನ ನೀಡುವೆವು. ನಾವು ನಮ್ಮ ಸಮಸ್ಯೆಯನ್ನು ವಿಹಿಂಪ ಮುಂದೆ ಮಂಡಿಸಿದ ನಂತರ ಅವರು ಗುತ್ತಿಗೆಯನ್ನು ರದ್ದುಪಡಿಸದಿರಲು ಒಪ್ಪಿಕೊಂಡರು.

೩. ವಿಹಿಂಪನ ನಗರಾಧ್ಯಕ್ಷ ಹಿರೆನ ಶಹಾ ಇವರು ಮಾತನಾಡುತ್ತಾ, ‘ಈ ಯಾತ್ರೆಯಲ್ಲಿ ಎಲ್ಲಿಯೂ ಆಕ್ಷೇಪಾರ್ಹ ಘಟನೆ ನಡೆಯದಂತೆ ವಿಹಿಂಪ ನಿಗಾ ವಹಿಸಲಿದೆ. ಏನಾದರೂ ಅಹಿತಕರ ಘಟನೆ ನಡೆದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ತಗಲಿರುವ ಏಕಪಕ್ಷೀಯ ಸರ್ವಧರ್ಮಸಮಭಾವದ ನಿರ್ಮೂಲನೆ ಯಾವಾಗ ? ಅಂತಹ ಅಂಗಡಿಗಳ ನೆಪದಲ್ಲಿ ಯಾರಾದರೂ ನಾಳೆ ಯಾತ್ರೆಗೆ ಅಡ್ಡಿಪಡಿಸಲು ಪ್ರಯತ್ನಿಸಿದರೆ ಅದಕ್ಕೆ ಈ ದೇವಾಲಯದ ವಿಶ್ವಸ್ಥ ಮಂಡಳಿಯನ್ನೇ ಹೊಣೆಗಾರರನ್ನಾಗಿ ಮಾಡಬೇಕು, ಎಂದು ಹಿಂದೂಗಳು ಒತ್ತಾಯಿಸಬೇಕು !