ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸ್ವಾತಂತ್ರ್ಯ ಯಾವಾಗ ? – ರಾಷ್ಟ್ರೀಯ ಸ್ವಯಂಸೇವಕ ಸಂಘ

ಜಮ್ಮು (ಜಮ್ಮು – ಕಾಶ್ಮೀರ) – ಪಾಕಿಸ್ತಾನದ ವಶದಲ್ಲಿರುವ ಜಮ್ಮು ಕಾಶ್ಮೀರ ಭಾಗದ ಜನರು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗೆ ಬಲಿಯಾಗುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಅವರು ಭಾರತದತ್ತ ಆಸೆಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಅವರಿಗೆ ಸ್ವಾತಂತ್ರ್ಯ ಎಂದು ? ಎಂಬ ಪ್ರಶ್ನೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಚಿವ ದತ್ತಾತ್ರೇಯ ಹೊಸಬಾಳೆ ಇವರು ಕೇಳಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ, ಪಾಕಿಸ್ತಾನವು ೧೯೪೭ರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನೆ, ಪ್ರತ್ಯೇಕತೆ ಮತ್ತು ಯುದ್ಧ ಇವುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಸೈನ್ಯ ಮತ್ತು ಪೊಲೀಸ್ ಕಳೆದ ಅನೇಕ ವರ್ಷಗಳಿಂದ ಇದರ ವಿರುದ್ಧ ಹೋರಾಡುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಜನರು ಭಾರತೀಯ ಸೈನ್ಯೆಯೊಂದಿಗೆ ಸೇರಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡುತ್ತಿದ್ದಾರೆ. ನಾನು ಅವರನ್ನು ಗೌರವಿಸುತ್ತೇನೆ.

ಶಿವಶಂಕರನು ಭಾರತದಲ್ಲಿರುವಾಗ ಮಾತೆ ಶಾರದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೇಗಿರಲು ಸಾಧ್ಯ ? – ರಕ್ಷಣಾ ಸಚಿವರಾದ ರಾಜನಾಥ ಸಿಂಹ

ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಜಮ್ಮುವಿನ ಗುಲ್ಶನ್ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಕಾರ್ಗಿಲ್ ಯುದ್ಧದಲ್ಲಿ ವೀರಗತಿ ಪಡೆದಿರುವ ಸೈನಿಕರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಆ ಸಮಯದಲ್ಲಿ ರಕ್ಷಣಾ ಸಚಿವರಾದ ರಾಜನಾಥ ಸಿಂಹ ಇವರು ಶಿವರೂಪ ಬಾಬಾ ಅಮರನಾಥ ನಮ್ಮ ಹತ್ತಿರ ಮತ್ತು ತಾಯಿ ಶಾರದೆ ಶಕ್ತಿ ಸ್ವರೂಪಿಣಿ ನಿಯಂತ್ರಣ ರೇಖೆಯ ಆಚೆಗೆ (ಪಾಕ್ ಆಕ್ರಮಿತ ಕಾಶ್ಮೀರದಲ್ಲಿ) ಹೇಗೆ ಇರಲು ಸಾಧ್ಯ ? ಎಂಬ ವಿಚಾರ ಮಂಡಿಸಿದರು.