ಸರ್ವೋಚ್ಚ ನ್ಯಾಯಾಲಯದಿಂದ ಈಡಿ ಬಂಧನದ ಅಧಿಕಾರ ಶಾಶ್ವತ!

ಪಿ.ಎಂ.ಎಲ್. ಎ. ಕಾನೂನಿನ ವಿರುದ್ಧ ೨೪೨ ಜನರು ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ !

ಹೊಸ ದೆಹಲಿ – ಪ್ರೇವೆಂಶನ್ ಆಫ್ ಮನಿ ಲಾಂಡರಿಂಗ್ ಆಕ್ಟ (ಪಿ.ಎಂ.ಎಲ್.ಎ) ಕಾನೂನಿನಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಈಡಿಯ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಕಾನೂನಿನ ಉಪಬಂಧಗಳನ್ನು ಸಾಂವಿಧಾನಿಕವಾಗಿ ಪ್ರಶ್ನಿಸುವ ಮನವಿಗಳ ಮೇಲೆ ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ. ಈ ಕಾನೂನನ್ನು ಈಡಿ ಕಪ್ಪು ಹಣದ ವಿರುದ್ಧ ಕಾರ್ಯಾಚರಣೆಗಾಗಿ ಉಪಯೋಗಿಸುತ್ತಿತ್ತು. ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಇವರ ಮಗ ಕಾರ್ತಿ ಚಿದಂಬರಂ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಪ್ತಿ ಸೇರಿ ೨೪೨ ಅರ್ಜಿದಾರರು ಈ ಕಾನೂನಿನಡಿಯಲ್ಲಿ ಈಡಿಯಿಂದ ನಡೆದ ಬಂಧನ, ಆಸ್ತಿ ಜಪ್ತಿ ಮತ್ತು ಅನ್ವೇಷಣೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದರು.

ಈಡಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ಮತ್ತು ಪ್ರಥಮ ವರ್ತಮಾನ ವರದಿ (ಎಫ್ಐಆರ್) ಜೊತೆಗೆ ಜೋಡಿಸಲು ಸಾಧ್ಯವಿಲ್ಲ.

ಈ ಸಿ ಐ ಆರ್ ನ ಪ್ರತಿಯನ್ನು ಆರೋಪಿಗೆ ನೀಡುವುದು ಆವಶ್ಯಕವಲ್ಲ. ಬಂಧನದ ಸಮಯದಲ್ಲಿ ಕಾರಣ ಸ್ಪಷ್ಟಪಡಿಸುವುದು ಸಾಕು. ಈಡಿ ಎದುರು ನೀಡಿದ ಮೌಖಿಕ ಹೇಳಿಕೆ ಕೂಡ ಸಾಕ್ಷಿಯಾಗಿದೆ.
ಈಡಿ ಹತ್ತಿರ ೩ ಸಾವಿರ ಮೊಕದ್ದಮೆ, ಆದರೆ ಇಲ್ಲಿಯವರೆಗೆ ಕೇವಲ ೨೩ ಜನರು ತಪ್ಪಿತಸ್ಥರು ಕೇಂದ್ರ ಸರಕಾರ ಲೋಕಸಭೆಯಲ್ಲಿ ಒಂದು ಪ್ರಶ್ನೆಗೆ ಉತ್ತರಿಸುವಾಗ, ಪ್ರಸ್ತುತ ದೇಶದಲ್ಲಿ ಈಡಿ ಹತ್ತಿರ ತನಿಖೆಗಾಗಿ ೩ ಸಾವಿರ ಮೊಕದ್ದಮೆಗಳು ಇವೆ. ಪಿಎಂಎಲ್ಎ ಕಾನೂನು ೧೭ ವರ್ಷಗಳ ಮೊದಲು ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿಯವರೆಗೆ ಅದರಡಿಯಲ್ಲಿ ೫ ಸಾವಿರ ೪೨೨ ದೂರುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ ಕೇವಲ ೨೩ ಜನರು ತಪ್ಪಿತಸ್ಥರೆಂದು ಸಾಬೀತಾಗಿದೆ. ಈಡಿ ಯಿಂದ ಇಲ್ಲಿಯವರೆಗೆ ೧ ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಸಂಪತ್ತಿ ವಶಪಡಿಸಿಕೊಳ್ಳಲಾಗಿದ್ದು ೧೯೨ ಪ್ರಕರಣದಲ್ಲಿ ಆರೋಪ ಪತ್ರ ದಾಖಲಿಸಲಾಗಿದೆ.