ಹೀಜಾಬ್ ಧರಿಸಿ ಬರುವುದಕ್ಕಾಗಿ ಕರ್ನಾಟಕದಲ್ಲಿ ಮುಸಲ್ಮಾನರು ಖಾಸಗಿ ಮಹಾವಿದ್ಯಾಲಯಗಳನ್ನು ತೆರೆಯುವರು !

೧೩ ಹೊಸ ಮಹಾವಿದ್ಯಾಲಯಗಳಿಗಾಗಿ ಅರ್ಜಿ

ಬೆಂಗಳೂರು – ಕರ್ನಾಟಕ ವಿಧಾನಸಭೆ ಚುನಾವಣೆಯ ಮೊದಲು ಹಿಜಾಬ ವಿವಾದ ಮತ್ತೊಮ್ಮೆ ಗರಿಗೇದರಿದೆ. ರಾಜ್ಯದ ದಕ್ಷಿಣ ಜಿಲ್ಲೆಯಲ್ಲಿ ಮುಸಲ್ಮಾನ ಸಂಘಟನೆಗಳು ರಾಜ್ಯದಲ್ಲಿ ೧೩ ಹೊಸ ಖಾಸಗಿ ಮಹಾವಿದ್ಯಾಲಯಗಳನ್ನು ತೆರೆಯಲು ಅರ್ಜಿ ಸಲ್ಲಿಸಿದೆ. ಈ ಮಹಾವಿದ್ಯಾಲಯಗಳಲ್ಲಿ ಹಿಜಾಬ ಮೇಲೆ ನಿಷೇಧ ಹೇರಲಾಗುವುದಿಲ್ಲ. ರಾಜ್ಯದಲ್ಲಿ ಎಲ್ಲಾ ಸರಕಾರಿ ಶೈಕ್ಷಣಿಕ ಸಂಸ್ಥೆಯಲ್ಲಿ ಹಿಜಾಬ್ ಮೇಲೆ ನಿಷೇಧ ಹೇರಲಾಗಿದೆ.

ಕರ್ನಾಟಕದ ಹಿಂದಿನ ಕಾಂಗ್ರೆಸ್ ಸರಕಾರ ಸರಕಾರಿ ಶೈಕ್ಷಣಿಕ ಸಂಸ್ಥೆಗಳಿಗೆ ವಸ್ತ್ರ ಸಂಹಿತೆ ಅನಿವಾರ್ಯ ಮಾಡಿತ್ತು. ಖಾಸಗಿ ಶಾಲೆಗೆ ಅದರ ಸ್ವಂತದ ಸಮವಸ್ತ್ರ ನಿರ್ಧರಿಸುವ ಸ್ವಾತಂತ್ರ್ಯ ಇದೆ. ಈಗ ಸರಕಾರಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಧಾರ್ಮಿಕ ಚಿಹ್ನೆಗಳ ಮೇಲೆ ನಿಷೇಧ ಹೇರಲಾದರೂ ಹಿಜಾಬ್‌ಗೆ ಅನುಮತಿ ನೀಡಬೇಕೋ ಅಥವಾ ಬೇಡವೋ ? ಇದು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬಿಸಿದೆ. ಆದ್ದರಿಂದ ಮುಸಲ್ಮಾನ ಸಂಘಟನೆಗಳು ತಮ್ಮದೇ ಆದ ಮಹಾವಿದ್ಯಾಲಯಗಳು ತೆರೆಯುವ ನಿರ್ಣಯ ತೆಗೆದುಕೊಂಡಿದೆ.
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಕಳೆದ ೫ ವರ್ಷಗಳಲ್ಲಿ ಮುಸಲ್ಮಾನ ಸಂಘಟನೆಗಳು ಮಹಾವಿದ್ಯಾಲಯ ತೆರೆಯುವುದಕ್ಕಾಗಿ ಒಂದೇ ಒಂದು ಅರ್ಜಿ ಸಲ್ಲಿಸಿರಲಿಲ್ಲ. ಅರ್ಜಿದಾರರಿಗೆ ಮಹಾವಿದ್ಯಾಲಯ ತೆರೆಯುವುದಕ್ಕಾಗಿ ಎಲ್ಲಾ ಮಾನದಂಡಗಳು ಪೂರ್ಣಗೊಳಿಸಿದರೆ ಆಗ ಅವರಿಗೆ ಮಾನ್ಯತೆ ಸಿಗಬಹುದು.

ಏನಿದು ಹಿಜಾಬ್ ವಿವಾದ ?

ಜನವರಿ ೨೦೨೨ ನಲ್ಲಿ ಉಡುಪಿಯ ಒಂದು ಮಹಾವಿದ್ಯಾಲಯದಲ್ಲಿ ಹಿಜಾಬ್ ಧರಿಸಿ ಬಂದಿರುವ ೬ ವಿದ್ಯಾರ್ಥಿನಿಯರಿಗೆ ಮಹಾವಿದ್ಯಾಲಯದಲ್ಲಿ ಬರಲು ಅನುಮತಿ ನಿರಾಕರಿಸಲಾಯಿತು. ಈ ಬಗ್ಗೆ ಜಿಹಾದಿ ಭಯೋತ್ಪಾದಕ ಸಂಘಟನೆ, ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ವಿದ್ಯಾರ್ಥಿ ಶಾಖೆ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ದಿಂದ ರಾಜ್ಯದ್ಯಂತ ವಿವಾದ ಹೆಚ್ಚಿಸಿದರು. ಕೆಲವು ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದಕ್ಕಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಿದರು. ಈ ಬಗ್ಗೆ ಫೆಬ್ರವರಿ ೨೦೨೨ ರಂದು ನ್ಯಾಯಾಲಯವು ವಿದ್ಯಾರ್ಥಿನಿಯರ ಬೇಡಿಕೆ ಅಸಂವಿಧಾನಿಕವಾಗಿದೆ ಎಂದು ಹೇಳಿ ನಿರಾಕರಿಸಿತು. ಅದನ್ನು ವಿರೋಧಿಸುತ್ತಾ ಅನೇಕ ಮುಸಲ್ಮಾನ್ ವಿದ್ಯಾರ್ಥಿನಿಯರು ಶಾಲೆಯಲ್ಲಿ ಪರೀಕ್ಷೆ ಬರೆಯಲಿಲ್ಲ ಎಂದು ಹೇಳಲಾಯಿತು. ‘ಮುಸಲ್ಮಾನ ಹುಡುಗಿಯರು ಶಾಲೆಗೆ ಹೋಗದಿರುವ’ ಮತ್ತು ‘ಹಿಜಾಬ್ ಇಲ್ಲದೆ ಪರೀಕ್ಷೆ ಬರೆಯುವುದನ್ನು ನಿರಾಕರಿಸುವುದು’ ಕೂಡ ಒಂದು ಚಳುವಳಿಯ ಭಾಗವಾಗಿತ್ತು.

ಸಂಪಾದಕೀಯ ನಿಲುವು

ಕಳೆದ ೭೫ ವರ್ಷಗಳಲ್ಲಿ ಎಲ್ಲಾ ಪಕ್ಷದ ಸರಕಾರಗಳು ಮುಸಲ್ಮಾನರಿಗೆ ಮುಖ್ಯ ವಾಹಿನಿಗೆ ತರುವುದಕ್ಕಾಗಿ ಅನೇಕ ಓಲೈಕೆಗಳನ್ನು ಮಾಡಿದ್ದಾರೆ. ಆದರೂ ‘ನಾಯಿ ಬಾಲ ಡೊಂಕು’ ಎಂದು ಇದರಿಂದ ಗಮನಕ್ಕೆ ಬರುತ್ತದೆ !