‘ಘರ-ಘರ ತಿರಂಗಾ’ ಅಭಿಯಾನಕ್ಕೆ ಮೆಹಬೂಬಾ ಮುಪ್ತಿ ಅಡ್ಡಿ !

ಶ್ರೀನಗರ (ಜಮ್ಮು-ಕಾಶ್ಮೀರ) – ಪ್ರಧಾನಿ ನರೇಂದ್ರ ಮೋದಿ ಇವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಎಲ್ಲಾ ನಾಗರಿಕರಿಗೆ ಆಗಸ್ಟ್ ೧೨ ರಿಂದ ೧೫ ವರೆಗೆ ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಕರೆ ನೀಡಿದ್ದಾರೆ. ಭಾರತ ಸರಕಾರ ಘರ-ಘರ ತಿರಂಗಾಯೋಜನೆಯ ಅಂತರ್ಗತ ದೇಶದಲ್ಲಿ ೨೦ ಕೋಟಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುವುದೆಂದು ಅಂದಾಜು ಮಾಡಿದೆ. ಆದರೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಇವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಇವರ ಬಗ್ಗೆಯೂ ಟೀಕೆ ಮಾಡಿದ್ದರು. ‘ಸಂವಿಧಾನವನ್ನು ತುಳಿಯಲು ಅನುವು ಮಾಡಿಕೊಟ್ಟಿರುವುದೇ ಮಾಜಿ ರಾಷ್ಟ್ರಪತಿಗಳ ಉಯಿಲು’ ಎಂಬ ಆರೋಪವನ್ನು ಮುಫ್ತಿ ಟ್ವೀಟ್ ಮಾಡಿದ್ದರು.

ಬೇರೆ ಒಂದು ಟ್ವೀಟ್ ನಲ್ಲಿ ಮೆಹಬೂಬಾ ಇವರು ಕಲಂ ೩೭೦ ಇರಲಿ, ಸಮಾನ ನಾಗರಿಕ ಸಂಹಿತೆ ಇರಲಿ ಅಥವಾ ಅಲ್ಪಸಂಖ್ಯಾತ ಮತ್ತು ದಲಿತರ ಮೇಲೆ ನಡೆದಿರುವ ದಾಳಿ ಇರಲಿ, ಅವರು ಸಂವಿಧಾನದ ಹೆಸರಿನಲ್ಲಿ ಭಾಜಪ ರಾಜಕೀಯ ಕಾರ್ಯ ಸೂಚಿ (ಅಜೆಂಡ) ಪೂರ್ಣಗೊಳಿಸಿದ್ದಾರೆ ಎಂದು ಮುಪ್ತಿ ಅವರು ಟೀಕಿಸಿದ್ದರು.

ಸಂಪಾದಕೀಯ ನಿಲುವು

ಇಂತಹವರ ಮೇಲೆ ದೇಶದ್ರೋಹದ ದೂರ ದಾಖಲಿಸಿ ಅವರನ್ನು ಜೈಲಿಗಟ್ಟುವ ಧೈರ್ಯ ಕೇಂದ್ರ ಸರಕಾರ ತೋರಿಸಬೇಕು !