ಇಬ್ಬರು ಪುರುಷರು ಮತ್ತು ಓರ್ವ ಸ್ತ್ರೀ ಇವರೆಲ್ಲರ ಛಾಯಾಚಿತ್ರವನ್ನು ಒಟ್ಟಿಗೆ ತೆಗೆಯುವಾಗ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಸ್ತ್ರೀಯು ಇಬ್ಬರು ಪುರುಷರ ಪಕ್ಕದಲ್ಲಿ ನಿಲ್ಲದೇ ಮಧ್ಯಭಾಗದಲ್ಲಿ ನಿಂತುಕೊಳ್ಳುವುದು ಯೋಗ್ಯ

ಛಾಯಾಚಿತ್ರವನ್ನು ತೆಗೆಯುವಾಗ ಇಬ್ಬರು ಪುರುಷರ ಮಧ್ಯದಲ್ಲಿ ಸ್ತ್ರೀಯನ್ನು ನಿಲ್ಲಿಸಿದರೆ ಅದು ಯೋಗ್ಯವೆನಿಸುತ್ತದೆ; ಏಕೆಂದರೆ ಆಗ ಇಬ್ಬರು ಪುರುಷರಲ್ಲಿನ ಶಿವತತ್ತ್ವವು ಸ್ತ್ರೀಯಲ್ಲಿನ ಶಕ್ತಿಯನ್ನು ನಿಯಂತ್ರಿ ಸುತ್ತಿರುತ್ತದೆ.

ಪೂಜೆಯಲ್ಲಿನ ನಿರ್ಮಾಲ್ಯದ ಮಹತ್ವ ಮತ್ತು ಅದರಲ್ಲಿ ಚೈತನ್ಯ ಉಳಿಯುವ ಕಾಲಾವಧಿ

‘ಪೂಜೆಯಲ್ಲಿ ದೇವತೆಗೆ ಅರ್ಪಿಸಿದ ಹೂವುಗಳಲ್ಲಿ ದೇವತೆಯ ಚಿತ್ರ ಅಥವಾ ಪ್ರತಿಮೆಯಿಂದ ಪ್ರಕ್ಷೇಪಿಸುವ ಚೈತನ್ಯ ಆಕರ್ಷಿಸುತ್ತದೆ. ಆದ್ದರಿಂದ ಉತ್ತರಪೂಜೆಯ ನಂತರ ದೇವತೆಗೆ ಅರ್ಪಿಸಿದ ಹೂವುಗಳನ್ನು ಪೂಜಕರು ವಾಸನೆ ತೆಗೆದುಕೊಂಡು (ಮೂಸಿ ನೋಡಿ) ನಂತರ ಬದಿಗೆ ಇಡಬೇಕೆಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.

ಕಾರವಾರದ ಪಂಚಶಿಲ್ಪಕಾರ ಪೂ. ನಂದಾ ಆಚಾರಿ (ಗುರುಜಿ) ಇವರ ಸಂತಪದವಿಯಲ್ಲಿ ವಿರಾಜಮಾನರಾಗುವ ಸಮಾರಂಭದಲ್ಲಿ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಪೂ. ಆಚಾರಿ ಇವರ ಆಧ್ಯಾತ್ಮಿಕ ಮಟ್ಟವು ಜನ್ಮದಿಂದಲೇ ಶೇ. ೫೫ ಕ್ಕಿಂತ ಹೆಚ್ಚಿತ್ತು. ಪೂರ್ವಜನ್ಮದ ಸಾಧನೆಯಿಂದಾಗಿ ಅವರು ಶಿಷ್ಯ ಮಟ್ಟದ್ದಲ್ಲಿದ್ದರು.

ಕಾರವಾರದ ಪಂಚಶಿಲ್ಪಕಾರ ಪೂ. ನಂದಾ ಆಚಾರಿ (ಗುರುಜಿ) ಇವರ ಸಂತಪದವಿಯಲ್ಲಿ ವಿರಾಜಮಾನರಾಗುವ ಸಮಾರಂಭದಲ್ಲಿ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಪೂ. ನಂದಾ ಆಚಾರಿ (ಗುರುಜಿ) ಇವರು ತಮ್ಮ ೧೪ ನೇ ವಯಸ್ಸಿನಿಂದ ಮೂರ್ತಿಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುತ್ತಿದ್ದು ಈಗ ಅವರ ಸಾಧನೆ ನಿಷ್ಕಾಮ ಭಾವದಲ್ಲಿ ಸ್ಥಿರವಾಗಿದೆ.

ಪೂ. ನಂದಾ ಆಚಾರಿ ಗುರೂಜಿಯವರ ಬಗ್ಗೆ ಕು. ಮಧುರಾ ಭೋಸಲೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಶ್ರೀ. ನಂದಾ ಆಚಾರಿ ಗುರೂಜಿಯವರು ಹಿಂದಿನ ಜನ್ಮದಲ್ಲಿ ಶಿವನ ಉಪಾಸನೆಯನ್ನು ಮಾಡಿದುದರಿಂದ ಜನ್ಮದಿಂದಲೇ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇತ್ತು

೧೧.೬.೨೦೨೨ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಧರ್ಮಧ್ವಜದ ಪೂಜೆಯ ಕುರಿತು ಕು. ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

ಧರ್ಮಧ್ವಜದ ಪಂಚೋಪಚಾರ ಪೂಜೆಯಿಂದ ಪ್ರಭು ಶ್ರೀರಾಮನ ತತ್ವವು ಧರ್ಮತತ್ತ್ವದೊಂದಿಗೆ ಏಕರೂಪವಾಯಿತು. ತದನಂತರ ಈ ಧರ್ಮತತ್ತ್ವವು ಪೃಥ್ವಿ, ಆಪ, ತೇಜ, ವಾಯು, ಮತ್ತು ಆಕಾಶ ಈ ಪಂಚಮಹಾಭೂತಗಳ ಸ್ವರೂಪದಲ್ಲಿ ಧರ್ಮಧ್ವಜದಿಂದ ಪ್ರಕ್ಷೇಪಿತವಾಗಿ ಸಂಪೂರ್ಣ ಪೃಥ್ವಿಯ ಮೇಲೆ ಕಾರ್ಯನಿರತವಾಯಿತು.

ಯುಗಗಳಿಗನುಸಾರ ಮನುಷ್ಯನಿಗೆ ಭೋಗಿಸಬೇಕಾಗುವ ರೋಗಗಳು, ಅವುಗಳ ಸ್ವರೂಪ ಮತ್ತು ಅವುಗಳ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ !

‘ಅಧರ್ಮಾಚರಣೆ ಮತ್ತು ಅದರಿಂದ ನಿರ್ಮಾಣವಾದ ಪಾಪ, ಇದು ಪ್ರತಿಯೊಂದು ರೋಗದ ಮೂಲ ಕಾರಣವಾಗಿದೆ. ಸತ್ಯಯುಗದಲ್ಲಿ ಎಲ್ಲ ಜನರೂ ಧರ್ಮಾಚರಣಿಗಳಾಗಿದ್ದರು. ಆದುದರಿಂದ ಆಗ ಮನುಷ್ಯನಿಗೆ ದುಃಖ ಅಥವಾ ತೊಂದರೆಗಳನ್ನು ಭೋಗಿಸಬೇಕಾಗುತ್ತಿರಲಿಲ್ಲ.

ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಭ್ರೂಮಧ್ಯದಲ್ಲಿ (ಹಣೆಯ ಮಧ್ಯದಲ್ಲಿ) ದೈವೀ ಚಿಹ್ನೆಗಳು ಮೂಡುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಯಾವಾಗ ಜ್ಞಾನಶಕ್ತಿಯ ಪ್ರವಾಹವುಆಜ್ಞಾಚಕ್ರದಿಂದ ಸಮಷ್ಟಿಯ ಕಡೆಗೆ ಹೋಗುತ್ತದೆಯೋ, ಆಗ ಈ ದೈವೀಪ್ರಕ್ರಿಯೆಯ ಅನುಭವವನ್ನು ನೀಡಲು ಈಶ್ವರೇಚ್ಛೆಯಿಂದ ಆಧ್ಯಾತ್ಮಿಕ ಉನ್ನತರ ಹಣೆಯ ಮೇಲೆ ವಿವಿಧ ರೀತಿಯ ದೈವೀ ಚಿಹ್ನೆಗಳು ಮೂಡುತ್ತವೆ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಉಪಯುಕ್ತ ನಾಮಜಪಗಳ ಧ್ವನಿಮುದ್ರಣವನ್ನು ಖ್ಯಾತ ಗಾಯಕ ಪೂ. ಕಿರಣ ಫಾಟಕ್‌ರಿಂದ ಲೋಕಾರ್ಪಣೆ ಮಾಡುವ ಕಾರ್ಯಕ್ರಮದ ಸೂಕ್ಷ್ಮ ಪರೀಕ್ಷಣೆ !

ಪೂ. ಕಿರಣ ಫಾಟಕ್‌ಕಾಕಾ ರವರ ಮೂಲಕ ಶ್ರೀ ಸ್ವಾಮಿ ಸಮರ್ಥರೇ ನಾಮಜಪವನ್ನು ಲೋಕಾರ್ಪಣೆ ಮಾಡಿದ್ದಾರೆ ಎಂದು ಅನಿಸಿತು. ಪೂ. ಕಾಕಾರವರ ಹಸ್ತಸ್ಪರ್ಶದಿಂದ ಅವರ ದೇಹದ ಚೈತನ್ಯವು ಐ-ಪ್ಯಾಡ್‌ನಲ್ಲಿ ಹೋಗಿ ನಾಮಜಪದಲ್ಲಿನ ಸಾತ್ತ್ವಿಕ ಧ್ವನಿಯ ಮೂಲಕ ವಾತಾವರಣದಲ್ಲಿ ಹರಡಿತು. ಅದರಿಂದ ವಾತಾವರಣವು ಚೈತನ್ಯದಾಯಕವಾಯಿತು.

ಮಹರ್ಷಿಗಳ ಅಜ್ಞೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ತಮಿಳುನಾಡಿನ ‘ಅರಿಗನರ ಅಣ್ಣಾ ಝೂವಾಲಾಜಿಕಲ್ ಪಾರ್ಕ್’ ಈ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ಮಾಡಿದ ಸೂಕ್ಷ್ಮ ಪರೀಕ್ಷಣೆ !

ಆ ಸಿಂಹವು ಕಳೆದ ಜನ್ಮದಲ್ಲಿ ಸಾತ್ತ್ವಿಕ ಮನುಷ್ಯನಾಗಿದ್ದನು; ಆದರೆ ಅವನಿಗೆ ಶನಿಯ ಸಾಡೆಸಾತಿ ನಡೆದಿರುವಾಗ (ಶನಿಯ ತೊಂದರೆ ಪ್ರಾರಂಭವಾದುದರಿಂದ) ಅವನ ಬುದ್ಧಿಯು ಭ್ರಷ್ಟವಾಗಿ, ಅವನು ಓರ್ವ ನಿರಪರಾಧಿ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದನು.