ಪೂ. ನಂದಾ ಆಚಾರಿ ಗುರೂಜಿಯವರ ಬಗ್ಗೆ ಕು. ಮಧುರಾ ಭೋಸಲೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಪೂ. ನಂದಾ ಆಚಾರಿ (ಗುರೂಜಿ)
ಕು. ಮಧುರಾ ಭೋಸಲೆ

‘೩.೧೧.೨೦೨೨ ರಂದು ನನಗೆ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಲು ಕು. ಮೇಘಾ ಚವ್ಹಾಣ ಇವರಿಂದ ‘ಆಶ್ರಮದಲ್ಲಿ ಕಾರವಾರದಿಂದ ಬಂದಿರುವ ಶ್ರೀ ನಂದಾ ಆಚಾರಿ ಗುರೂಜಿಯವರ ಸಂದರ್ಶನದ ಕಾರ್ಯಕ್ರಮವು ಮಧ್ಯಾಹ್ನ ೨ ಗಂಟೆಗೆ ಇದೆ’ ಎಂಬ ಸಂದೇಶ ಬಂದಿತು. ನನಗೆ ಆಯಾಸವಾಗಿದ್ದರಿಂದ ಈ ಕಾರ್ಯಕ್ರಮಕ್ಕೆ ಸ್ಥೂಲದಿಂದ, ಅಂದರೆ ಪ್ರತ್ಯಕ್ಷ ಉಪಸ್ಥಿತ ಇರಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾನು ಅವರನ್ನು ಪ್ರತ್ಯಕ್ಷ ನೋಡಲಿಲ್ಲ; ಆದರೆ ಈ ಕಾರ್ಯಕ್ರಮದ ಸಂದೇಶ ಸಿಕ್ಕಿದ ಕೂಡಲೇ ನನಗೆ ನಂದಾ ಆಚಾರಿ ಗುರೂಜಿಯವರ ಕುರಿತು ಮುಂದಿನ ಅಂಶಗಳು ಅರಿವಾದವು.

೧. ಶ್ರೀ. ನಂದಾ ಆಚಾರಿ ಗುರೂಜಿಯವರು ಸಂತರಾಗಿದ್ದಾರೆ.

೨. ಶ್ರೀ. ನಂದಾ ಆಚಾರಿ ಗುರೂಜಿಯವರು ಹಿಂದಿನ ಜನ್ಮದಲ್ಲಿ ಶಿವನ ಉಪಾಸನೆಯನ್ನು ಮಾಡಿದುದರಿಂದ ಜನ್ಮದಿಂದಲೇ ಅವರ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇತ್ತು

೩. ಅವರ ಮೇಲಿರುವ ಅವರ ಗುರುಗಳ ಕೃಪೆಯಿಂದ ಅವರಿಗೆ ಮೂರ್ತಿಕಲೆಯಲ್ಲಿ ಪ್ರಾವೀಣ್ಯ ಪ್ರಾಪ್ತವಾಗಿದೆ. ಆದುದರಿಂದ ಅವರಿಗೆ ಈ ಕಲೆಯ ಎಲ್ಲ ರೀತಿಯ ಜ್ಞಾನ ಪ್ರಾಪ್ತವಾಗಿದೆ.

೪. ಅವರಲ್ಲಿ ಮುಖ್ಯವಾಗಿ ಅವ್ಯಕ್ತ ಭಾವವಿದ್ದು ಅವರ ಸಾಧನೆಯು ನಿರ್ಗುಣ ಸ್ತರದಲ್ಲಿ ನಡೆದಿದೆ. ಆದುದರಿಂದ ಅವರು ಸ್ಥೂಲದಿಂದ ದೇವತೆಗಳ ಮೂರ್ತಿಗಳನ್ನು ತಯಾರಿಸುತ್ತಿದ್ದರೂ, ಆ ಮೂರ್ತಿಗಳಲ್ಲಿ ಕೇವಲ ದೇವತೆಗಳ ಸಗುಣ ತತ್ತ್ವದ ಜೊತೆಗೆ, ದೇವತೆಗಳ ನಿರ್ಗುಣ ತತ್ವವೂ ಶೇ. ೧೦ ರಿಂದ ೩೦ ರಷ್ಟು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ.

೫. ವಿವಿಧ ಯೋಗ ಮಾರ್ಗಗಳಿಗನುಸಾರ ಪೂ. ನಂದಾ ಆಚಾರಿ ಗುರೂಜಿಯವರಿಂದಾಗಿರುವ ಸಾಧನೆ

೬. ಶ್ರೀ. ನಂದಾ ಆಚಾರಿ ಗುರೂಜಿಯವರು ಸಂತಪದವಿ ಪ್ರಾಪ್ತಮಾಡಿಕೊಂಡಿದ್ದನ್ನು ಘೋಷಿಸಿದ ನಂತರ ಅವರ ಆಜ್ಞಾಚಕ್ರದಿಂದ ಚೈತನ್ಯದ ಹಳದಿ ಬಣ್ಣದ ಜ್ಯೋತಿಯು ಹೊರಗೆ ಬಂದಿತು ಮತ್ತು ಅವರ ಸುತ್ತಲೂ ಜನಲೋಕದ ಹಳದಿ ಬಣ್ಣದ ತೇಜೋಮಯ ಮತ್ತು ಚೈತನ್ಯಮಯ ವಾಯುಮಂಡಲ ನಿರ್ಮಾಣವಾಯಿತು. ಆಗ ನನಗೆ ಸೂಕ್ಷ್ಮದಿಂದ ಶ್ರೀಗಂಧದ ಸುಗಂಧ ಬಂದಿತು.

೭. ಶ್ರೀ. ನಂದಾ ಆಚಾರಿ ಗುರೂಜಿಯವರ ಸಂತಪದವಿಯನ್ನು ಘೋಷಿಸಿದ ನಂತರ ಅವರ ಕಣ್ಣುಗಳಿಂದ ಅಶ್ರು ಹರಿಯತೊಡಗಿದವು. ಆಗ ಅವರ ಚಿತ್ತದಲ್ಲಿನ ಭಕ್ತಿ ಮತ್ತು ಆನಂದವು ಭಾವಾಶ್ರುಗಳ ರೂಪದಲ್ಲಿ ವ್ಯಕ್ತವಾಗಿರುವುದು ಅರಿವಾಯಿತು. ಆದುದರಿಂದ ಕಾರ್ಯಕ್ರಮದ ಸ್ಥಳದಲ್ಲಿ ವಾತಾವರಣವು ಬಹಳ ಭಾವಮಯ ಮತ್ತು ಆನಂದದಾಯಕವಾಯಿತು.

೮. ವಿನಮ್ರತೆ, ಶಾಲೀನತೆ, ಧರ್ಮಾಚರಣೆಯನ್ನು ಮಾಡುವ ತೀವ್ರ ತಳಮಳ, ಸಮರ್ಪಿತ ಭಾವ ಮತ್ತು ಸಮಷ್ಟಿಭಾವ ಹೀಗೆ ವಿವಿಧ ಗುಣಗಳ ಸಮೂಹವು ಅವರಲ್ಲಿ ನಿರ್ಮಾಣವಾಗಿದೆ.

೯. ಅವರ ಸಂತಪದ ಘೋಷಣೆಯಾದ ಮೇಲೆ ದೇವಶಿಲ್ಪಿ ವಿಶ್ವಕರ್ಮ ಮತ್ತು ಇತರ ದೇವತೆಗಳು ಶ್ರೀ ನಂದಾ ಆಚಾರಿ ಗುರೂಜಿಯವರ ಮೇಲೆ ದಿವ್ಯ ಪುಷ್ಪಗಳ ಮಳೆಗರೆದು ಅವರನ್ನು ಗೌರವಿಸಿದರು. ಆಗ ಆಶ್ರಮದ ವಾತಾವರಣವು ಬಹಳ ಶೀತಲ ಮತ್ತು ಆನಂದಮಯ ಆಗಿರುವುದು ಅರಿವಾಯಿತು.

೧೦. ಶ್ರೀ. ನಂದಾ ಆಚಾರಿ ಗುರೂಜಿಯವರಲ್ಲಿ ಭಗವಂತನ ಬಗ್ಗೆ ನಿಷ್ಕಾಮ ಭಾವವಿದೆ. ಆದುದರಿಂದ ಅವರು ಪ್ರತಿಯೋಂದು ಕರ್ಮವನ್ನು ನಿರಪೇಕ್ಷಭಾವದಿಂದ ಮಾಡುತ್ತಾರೆ. ಆದುದರಿಂದ ಹೀಗೆಯೇ ಅವರ ಆಧ್ಯಾತ್ಮಿಕ ಉನ್ನತಿಯಾಗಿ ಅವರು ಬೇಗನೆ ಸದ್ಗುರುಪದವಿಯನ್ನು ಕೂಡ ಪ್ರಾಪ್ತಮಾಡಿಕೊಳ್ಳುವವರಿದ್ದಾರೆ.

ಕೃತಜ್ಞತೆ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ನನಗೆ ಕೋಣೆಯಲ್ಲಿದ್ದು ಪೂ. ಶ್ರೀ. ನಂದಾ ಆಚಾರಿ ಗುರೂಜಿಗಳ ಸಂತ ಸಮಾರಂಭದ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವ ಸೇವೆಯನ್ನು ಮಾಡಲು ಬಂದಿತು’, ಇದಕ್ಕಾಗಿ ನಾನು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞಳಾಗಿದ್ದೇನೆ .

– ಕು. ಮಧುರಾ ಭೋಸಲೆ (ಸೂಕ್ಮದಿಂದ ಸಿಕ್ಕಿರುವ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ.(೩.೧೧.೨೦೨೨)

ಸೂಕ್ಷ್ಮ :  ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥ ಗಳಲ್ಲಿ ಉಲ್ಲೇಖವಿದೆ.