ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಉಪಯುಕ್ತ ನಾಮಜಪಗಳ ಧ್ವನಿಮುದ್ರಣವನ್ನು ಖ್ಯಾತ ಗಾಯಕ ಪೂ. ಕಿರಣ ಫಾಟಕ್‌ರಿಂದ ಲೋಕಾರ್ಪಣೆ ಮಾಡುವ ಕಾರ್ಯಕ್ರಮದ ಸೂಕ್ಷ್ಮ ಪರೀಕ್ಷಣೆ !

ಪೂ. ಕಿರಣ ಫಾಟಕ್

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಉಪಯುಕ್ತವಿರುವ ‘ಶೂನ್ಯ’, ಮಹಾಶೂನ್ಯ ಮತ್ತು ‘ನಿರ್ಗುಣ’ ಈ ನಾಮಜಪಗಳ ಧ್ವನಿಮುದ್ರಣವನ್ನು (ಆಡಿಯೊವನ್ನು) ಡೊಂಬಿವಿಲಿಯ (ಠಾಣೆ ಜಿಲ್ಲೆ, ಮಹಾರಾಷ್ಟ್ರ) ಶಾಸ್ತ್ರೀಯ ಸಂಗೀತದ ಖ್ಯಾತ ಗಾಯಕ ಪೂ. ಕಿರಣ ಫಾಟಕ್ ಇವರ ಶುಭಹಸ್ತಗಳಿಂದ ೧೫ ಎಪ್ರಿಲ್ ೨೦೨೨ ರಂದು ಇಲ್ಲಿ ಆಯೋಜಿಸಿದ ಒಂದು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ವಿಶ್ವವಿದ್ಯಾಲಯದ ಶೇ. ೬೩ ಆಧ್ಯಾತ್ಮಿಕ ಮಟ್ಟದ ಸಂಗೀತ ಸಮನ್ವಯಕಿ ಸಂಗೀತ ವಿಶಾರದೆ ಸುಶ್ರೀ (ಕು.) ತೇಜಲ ಪಾತ್ರಿಕರರು ಈ ನಾಮಜಪ ಧ್ವನಿಮುದ್ರಿಸಿದ್ದಾರೆ.

ಸದ್ಗುರು ಡಾ. ಮುಕುಲ ಗಾಡಗೀಳ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಇತರ ಸಾಧಕರು ಮಾಡಿರುವ ಈ ಕಾರ್ಯಕ್ರಮದ ಸೂಕ್ಷ್ಮ ಪರೀಕ್ಷಣೆಯನ್ನು ಇಲ್ಲಿ ಕೊಡುತ್ತಿದ್ದೇವೆ.

೧. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸದ್ಗುರು ಡಾ. ಮುಕುಲ ಗಾಡಗೀಳರು ಮಾಡಿದ ನಾಮಜಪ ಲೋಕಾರ್ಪಣೆ ಕಾರ್ಯಕ್ರಮದ ಸೂಕ್ಷ್ಮ ಪರೀಕ್ಷಣೆ

೧ ಅ. ಲೋಕಾರ್ಪಣೆಯ ಮೊದಲು ಮತ್ತು ನಂತರ ನಾಮಜಪದಲ್ಲಿನ ಸ್ಪಂದನಗಳ ಪ್ರಮಾಣ

ಪೂ. ಕಿರಣ ಫಾಟಕ್‌ಕಾಕಾ ಇವರು ನಾಮಜಪಗಳ ಲೋಕಾರ್ಪಣೆ ಮಾಡಿರುವುದರಿಂದ ಆರಂಭದಲ್ಲಿ ನಾಮಜಪದಲ್ಲಿರುವ ಶಕ್ತಿಯ ಪ್ರಮಾಣವು ಕಡಿಮೆಯಾಯಿತು ಹಾಗೂ ಅದರಿಂದ ಪ್ರಕ್ಷೇಪಣೆಯಾಗುವ ಭಾವ, ಚೈತನ್ಯ ಮತ್ತು ಆನಂದದ ಪ್ರಮಾಣ ಹೆಚ್ಚಾಯಿತು. ಆದ್ದರಿಂದ ಶಾಂತಿಯ ಪ್ರಮಾಣವೂ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಯಿತು.

೧ ಆ. ಈ ಸಂದರ್ಭದಲ್ಲಿ ವಾತಾವರಣವು ತುಂಬಾ ಪ್ರಕಾಶಮಯವಾಗಿತ್ತು.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ ಗೋವಾ.

೨. ಸನಾತನದ ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಸೂಕ್ಷ್ಮ ಜ್ಞಾನಪ್ರಾಪ್ತಕರ್ತೆ ಸಾಧಕಿ ಕು. ಮಧುರಾ ಭೋಸಲೆ ಇವರು ಈ ನಾಮಜಪವನ್ನು ಕೇಳಿದಾಗ ಮಾಡಿದ ಸೂಕ್ಷ್ಮ ಪರೀಕ್ಷಣೆ

ಕು. ಮಧುರಾ ಭೋಸಲೆ

ಪೂ. ಕಿರಣ ಫಾಟಕ್‌ಕಾಕಾ ರವರ ಮೂಲಕ ಶ್ರೀ ಸ್ವಾಮಿ ಸಮರ್ಥರೇ ನಾಮಜಪವನ್ನು ಲೋಕಾರ್ಪಣೆ ಮಾಡಿದ್ದಾರೆ ಎಂದು ಅನಿಸಿತು. ಪೂ. ಕಾಕಾರವರ ಹಸ್ತಸ್ಪರ್ಶದಿಂದ ಅವರ ದೇಹದ ಚೈತನ್ಯವು ಐ-ಪ್ಯಾಡ್‌ನಲ್ಲಿ ಹೋಗಿ ನಾಮಜಪದಲ್ಲಿನ ಸಾತ್ತ್ವಿಕ ಧ್ವನಿಯ ಮೂಲಕ ವಾತಾವರಣದಲ್ಲಿ ಹರಡಿತು. ಅದರಿಂದ ವಾತಾವರಣವು ಚೈತನ್ಯದಾಯಕವಾಯಿತು.

೩. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕ ಶ್ರೀ. ಮನೋಜ ಸಹಸ್ರಬುದ್ಧೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ  

ಶ್ರೀ. ಮನೋಜ ಸಹಸ್ರಬುದ್ಧೆ

ಅ. ‘ಶೂನ್ಯ’ ನಾಮಜಪ ಕೇಳುವಾಗ ಸಗುಣ-ನಿರ್ಗುಣ ಸ್ಪಂದನಗಳ ಅರಿವಾಯಿತು.

ಆ. ‘ಮಹಾಶೂನ್ಯ’ ನಾಮಜಪವನ್ನು ಕೇಳುವಾಗ ನಿರ್ಗುಣ-ಸಗುಣ ಸ್ಪಂದನಗಳ ಅರಿವಾಯಿತು.

ಇ. ‘ನಿರ್ಗುಣ’ ನಾಮಜಪ ಕೇಳುವಾಗ ಹೆಚ್ಚು ನಿರ್ಗುಣ ಸ್ಪಂದನಗಳ ಅರಿವಾಯಿತು. (ಎಲ್ಲ ವಿಷಯಗಳ ದಿನಾಂಕ ೧೫ ಎಪ್ರಿಲ್ ೨೦೨೨)