‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಪ್ರಭು ಶ್ರೀರಾಮ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಕೃಪಾಶೀರ್ವಾದ ಸಿಗಬೇಕೆಂದು, ಸಪ್ತರ್ಷಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಒಂದು ಕಡೆ ಸಿಂಹಾಸನಾಧಿಷ್ಠಿತ (ಸಿಂಹಾಸದ ಮೇಲೆ ಕುಳಿತಿರುವ) ಶ್ರೀರಾಮ ಇನ್ನೊಂದು ಬದಿಗೆ ಶ್ರೀರಾಮನ ಸ್ವರೂಪದಲ್ಲಿನ ಪರಾತ್ಪರಗುರು ಡಾ. ಆಠವಲೆಯವರ ಚಿತ್ರವಿರುವ ಧರ್ಮಧ್ವಜದ ಪೂಜೆಯನ್ನು ಮಾಡಿ ಅದರ ಆರೋಹಣವನ್ನು ಮಾಡಲು (ಅದನ್ನು ಹಾರಿಸಲು) ಹೇಳಿದ್ದರು. ಅದರಂತೆ ೧೧.೬.೨೦೨೨ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಧರ್ಮಧ್ವಜದ ಪೂಜೆಯನ್ನು ಮಾಡಿದರು. ಆನಂತರ ಅಲ್ಲಿದ್ದ ಸನಾತನದ ಸಂತರು ಧರ್ಮಧ್ವಜಕ್ಕೆ ಹೂವುಗಳನ್ನು ಅರ್ಪಿಸಿ ನಮಸ್ಕಾರ ಮಾಡಿದರು. ನಂತರ ಧರ್ಮಧ್ವಜದ ಆರೋಹಣವನ್ನು ಮಾಡಲಾಯಿತು. ದೇವರ ಕೃಪೆಯಿಂದ ಆ ಸಮಯದಲ್ಲಿ ನನ್ನಿಂದಾದ ವಿಧಿಯ, ಸೂಕ್ಷ್ಮ ಪರೀಕ್ಷಣೆಯನ್ನು ಇಲ್ಲಿ ಕೊಡುತ್ತಿದ್ದೇನೆ.
೧. ಧರ್ಮಧ್ವಜದ ಪೂಜೆಯನ್ನು ಮಾಡುವುದರ ಮಹತ್ವ
ಧರ್ಮಧ್ವಜವು ಹಿಂದೂ ಧರ್ಮದ ಪ್ರತೀಕವಾಗಿದೆ. ಆದುದರಿಂದ ಹಿಂದೂ ಧರ್ಮದಲ್ಲಿ ಧರ್ಮಧ್ವಜದ ಪೂಜೆ ಮಾಡಲು ಹೇಳಲಾಗಿದೆ. ಪೂಜೆಯನ್ನು ಮಾಡುವುದರಿಂದ ಧರ್ಮಧ್ವಜದ ರೂಪದಲ್ಲಿ ಧರ್ಮತ್ವದ ಪೂಜೆಯಾಗಿ ಧರ್ಮಕಾರ್ಯವನ್ನು ಮಾಡುವ ಧರ್ಮವೀರರಿಗೆ ಧರ್ಮಶಕ್ತಿ ದೊರಕಿ ಧರ್ಮಸಂಸ್ಥಾಪನೆಯನ್ನು ಮಾಡಲು ಧರ್ಮಬಲ ಸಿಗುತ್ತದೆ.
೨. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಧರ್ಮಧ್ವಜದ ಪೂಜೆಯನ್ನು ಮಾಡಿದ ಮೇಲೆ ಸೂಕ್ಷ್ಮ ಸ್ತರದಲ್ಲಿ ಅರಿವಾದ ಅಂಶಗಳು
೨ ಅ. ಧರ್ಮಧ್ವಜವು ಧರ್ಮತತ್ತ್ವದಿಂದ ತುಂಬಿ ಕೊಳ್ಳುವುದು : ಧರ್ಮಧ್ವಜದೆಡೆಗೆ ಧರ್ಮಲೋಕದಿಂದ ಶಕ್ತಿ ಮತ್ತು ಚೈತನ್ಯದ ಜ್ಯೋತಿ ಬಂದಿತು. ಆದುದರಿಂದ ಧರ್ಮಧ್ವಜವು ಧರ್ಮತತ್ತ್ವದಿಂದ ತುಂಬಿಕೊಂಡಿತು.
೨ ಆ. ಧರ್ಮಧ್ವಜದಲ್ಲಿ ಪ್ರಭು ಶ್ರೀರಾಮನ ತತ್ತ್ವ ಕಾರ್ಯನಿರತವಾಗಿ ಪೃಥ್ವಿಯ ಮೇಲೆ ರಾಮರಾಜ್ಯದ ಸ್ಥಾಪನೆಯನ್ನು ಮಾಡಲು ಪ್ರಭು ಶ್ರೀರಾಮನು ಆಶೀರ್ವಾದ ಕೊಡುವುದು : ಧರ್ಮಧ್ವಜದ ಪೂಜೆಯನ್ನು ಮಾಡಿದುದರಿಂದ ಅದರ ಮೇಲಿನ ಪ್ರಭು ಶ್ರೀರಾಮನ ಚಿತ್ರದಿಂದ ಬಹಳಷ್ಟು ಪ್ರಮಾಣದಲ್ಲಿ ಶ್ರೀರಾಮನ ತತ್ತ್ವವು ಕಾರ್ಯನಿರತವಾಗಿ ಪ್ರಕ್ಷೇಪಿತವಾಯಿತು. ಆಗ ಧರ್ಮಧ್ವಜದಿಂದ ರಾಮತತ್ತ್ವಯುಕ್ತ ನೀಲಿ ಬಣ್ಣದ ಪ್ರಕಾಶ ಕಿರಣಗಳ ಪ್ರಕ್ಷೇಪಣೆಯಾಯಿತು.
ಧರ್ಮಧ್ವಜದ ಪೂಜೆಯಾದುದರಿಂದ ಮುಂದೆ ಬರುವ ಕೆಲವು ವರ್ಷಗಳಲ್ಲಿ ಭಾರತ ಮತ್ತು ಸಂಪೂರ್ಣ ಪೃಥ್ವಿಯ ಮೇಲೆ ರಾಮರಾಜ್ಯದ ಲಘುರೂಪವಾಗಿರುವ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದರ ಕೃಪಾಶೀರ್ವಾದವನ್ನು ಪ್ರಭು ಶ್ರೀರಾಮನು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತ ಹಿಂದುತ್ವನಿಷ್ಠರು, ಸಾಧಕರು ಮತ್ತು ಸಂತರಿಗೆ ನೀಡಿದನು.
೨ ಇ. ಧರ್ಮಧ್ವಜದಿಂದ ಧರ್ಮತತ್ವವು ಪಂಚಮಹಾಭೂತಗಳ ಸ್ತರದಲ್ಲಿ ಪ್ರಕ್ಷೇಪಿಸುವುದು : ಧರ್ಮಧ್ವಜದ ಪಂಚೋಪಚಾರ ಪೂಜೆಯಿಂದ ಪ್ರಭು ಶ್ರೀರಾಮನ ತತ್ವವು ಧರ್ಮತತ್ತ್ವದೊಂದಿಗೆ ಏಕರೂಪವಾಯಿತು. ತದನಂತರ ಈ ಧರ್ಮತತ್ತ್ವವು ಪೃಥ್ವಿ, ಆಪ, ತೇಜ, ವಾಯು, ಮತ್ತು ಆಕಾಶ ಈ ಪಂಚಮಹಾಭೂತಗಳ ಸ್ವರೂಪದಲ್ಲಿ ಧರ್ಮಧ್ವಜದಿಂದ ಪ್ರಕ್ಷೇಪಿತವಾಗಿ ಸಂಪೂರ್ಣ ಪೃಥ್ವಿಯ ಮೇಲೆ ಕಾರ್ಯನಿರತವಾಯಿತು.
೨ ಈ. ಧರ್ಮಧ್ವಜದ ಪೂಜೆಯಿಂದ ಅದರಲ್ಲಿ ಸಗುಣ ಮತ್ತು ನಿರ್ಗುಣ ಹೀಗೆ ಎರಡೂ ಸ್ತರದಲ್ಲಿನ ಧರ್ಮತತ್ತ್ವ ಕಾರ್ಯನಿರತವಾಗುವುದು :
‘ಓಂಕಾರದಿಂದ ಮೂಲ ಧರ್ಮತತ್ತ್ವದ ನಿರ್ಮಾಣವಾಗಿದೆ. ಆದುದರಿಂದ ‘ಓಂ’ ಇದು ಹಿಂದೂ ಧರ್ಮದ ನಿರ್ಗುಣತತ್ತ್ವದ ಪ್ರತೀಕವಾಗಿದೆ ಮತ್ತು ‘ಸ್ವಸ್ತಿಕ’ವು ಹಿಂದೂ ಧರ್ಮದ ಸಗುಣ ತತ್ತ್ವದ ಪ್ರತೀಕವಾಗಿದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಧರ್ಮಧ್ವಜದ ಪೂಜೆಯನ್ನು ಮಾಡಿದಾಗ ಈ ಧ್ವಜದತ್ತ ‘ಓಂ’ನ ಶೇ. ೩೦ ರಷ್ಟು ನಿರ್ಗುಣತತ್ತ್ವ ಮತ್ತು ‘ಸ್ವಸ್ತಿಕ’ದ ಶೇ. ೨೦ ರಷ್ಟು ಸಗುಣ ತತ್ತ್ವವು ಆಕೃಷ್ಟವಾಗಿ ಕಾರ್ಯನಿರತವಾಯಿತು. ಧರ್ಮಧ್ವಜದಿಂದ ಪ್ರಕ್ಷೇಪಿತವಾಗುವ ನಿರ್ಗುಣ ಬೀಜಾತ್ಮಕ ತತ್ತ್ವದಿಂದ ಧರ್ಮಶಕ್ತಿಗೆ ಸೂಕ್ಷ್ಮ ಸ್ತರದಲ್ಲಿ ಅಧರ್ಮಿ ಶಕ್ತಿಗಳೊಂದಿಗೆ ಹೋರಾಡುವಾಗ ಯಶಸ್ಸು ಸಿಗುವುದಿದೆ.
ಅನಂತರ ಧರ್ಮಧ್ವಜದಿಂದ ಪ್ರಕ್ಷೇಪಿತವಾದ ಸಗುಣ ಬೀಜಾತ್ಮಕ ತತ್ತ್ವದಿಂದ ಧರ್ಮಶಕ್ತಿಗೆ ಸ್ಥೂಲದಿಂದ, ಅಂದರೆ ಸಗುಣಸ್ತರದಲ್ಲಿ ಪೃಥ್ವಿಯ ಮೇಲೆ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲು ಬರುವುದಿದೆ. ಈ ರೀತಿ ಧರ್ಮಧ್ವಜದ ಪೂಜೆಯಿಂದ ಧರ್ಮಶಕ್ತಿಗೆ ಸಗುಣ ಮತ್ತು ನಿರ್ಗುಣ ಹೀಗೆ ಎರಡೂ ಸ್ತರಗಳಲ್ಲಿನ ಧರ್ಮತತ್ತ್ವಗಳ ಲಾಭವಾಗಿ ಸ್ಥೂಲದಲ್ಲಿ ಪೃಥ್ವಿಯ ಮೇಲೆ ಹಿಂದೂ ರಾಷ್ಟ್ರ ಸಾಕಾರವಾಗಲಿದೆ.
೨ ಈ ೧. ಧರ್ಮಧ್ವಜದಲ್ಲಿ ಕಾರ್ಯನಿರತವಾಗಿರುವ ಸಗುಣ ಮತ್ತು ನಿರ್ಗುಣ ಈ ಎರಡೂ ಸ್ತರಗಳಲ್ಲಿನ ಧರ್ಮತತ್ತ್ವಗಳ ತುಲನಾತ್ಮಕ ಮಹತ್ವ
೩. ಸಂತರು ಧರ್ಮಧ್ವಜಕ್ಕೆ ಹೂವುಗಳನ್ನು ಅರ್ಪಿಸಿ ನಮಸ್ಕಾರ ಮಾಡುವುದು
ಸನಾತನ ಸಂಸ್ಥೆ ಮತ್ತು ಹಿಂದು ಜನಜಾಗೃತಿ ಸಮಿತಿಯ ಸಂತರು ಧರ್ಮಧ್ವಜಕ್ಕೆ ಹೂವುಗಳನ್ನು ಅರ್ಪಿಸಿ ನಮಸ್ಕಾರ ಮಾಡಿದರು. ಸಂತರಲ್ಲಿನ ಭಕ್ತಿಯಿಂದ ಮತ್ತು ಧರ್ಮ ಧ್ವಜಕ್ಕೆ ಅರ್ಪಿಸಿದ ಹೂವುಗಳಿಂದ ಧರ್ಮಧ್ವಜದಲ್ಲಿನ ಅವತಾರ ರೂಪದಲ್ಲಿನ ಶ್ರೀರಾಮ ಮತ್ತು ಗುರುರೂಪದಲ್ಲಿನ ಪರಾತ್ಪರ ಗುರು ಡಾ. ಆಠವಲೆಯವರು ಪ್ರಸನ್ನರಾದರು ಮತ್ತು ಅವರು ಪೃಥ್ವಿಯ ಮೇಲೆ ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಎಲ್ಲ ಸಂತರ ಸಮಷ್ಟಿ ಪ್ರಾರ್ಥನೆಯನ್ನು ಸ್ವೀಕರಿಸಿದರು ಮತ್ತು ಅವರಿಗೆ ‘ತಥಾಸ್ತು’ ಎಂದು ಆಶೀರ್ವಾದ ನೀಡಿದರು. ಇದರಿಂದ ‘ಭಗವಂತನ ಮನಸ್ಸನ್ನು ಕೇವಲ ಭಕ್ತನೇ ಗೆಲ್ಲಬಹುದು’, ಎಂಬ ಅಂಶವು ನನಗೆ ಕಲಿಯಲು ಸಿಕ್ಕಿತು.
೪. ಧರ್ಮಧ್ವಜದ ಪೂಜೆಯ ನಂತರ ಅದನ್ನು ಹಾರಿಸುವುದು
ಅದರ ನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಧರ್ಮಧ್ವಜವನ್ನು ಹಾರಿಸಿದರು. ಆಗ ಧರ್ಮಧ್ವಜದಲ್ಲಿ ಕಾರ್ಯನಿರತವಾಗಿರುವ ಸಗುಣ ಮತ್ತು ನಿರ್ಗುಣ ಹೀಗೆ ಎರಡೂ ಸ್ತರದಲ್ಲಿನ ಧರ್ಮಶಕ್ತಿಗಳು ತೇಜತತ್ವದ ಸ್ತರದಲ್ಲಿ ಕಾರ್ಯನಿರತವಾದವು. ಆದುದರಿಂದ ಧರ್ಮಧ್ವಜದಿಂದ ಬಹಳಷ್ಟು ಪ್ರಮಾಣದಲ್ಲಿ ಧರ್ಮತೇಜವು ವಾಯುಮಂಡಲದಲ್ಲಿ ಪ್ರಕ್ಷೇಪಿತವಾಯಿತು. ಅದರಿಂದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ಸುತ್ತಮುತ್ತಲಿನ ವಾತಾವರಣದ ಶುದ್ಧಿಯಾಯಿತು. ಹಾಗೆಯೇ ಧರ್ಮಧ್ವಜದ ಕಡೆಗೆ ಧರ್ಮಲೋಕದಿಂದ ಧರ್ಮಶಕ್ತಿ ಮತ್ತು ಧರ್ಮಚೈತನ್ಯದ ಪ್ರವಾಹ ಅಖಂಡ ಬರಲಾರಂಭಿಸಿತು. ಆದುದರಿಂದ ಸಂಪೂರ್ಣ ಪೃಥ್ವಿಯ ವಾಯುಮಂಡಲದ ಶುದ್ಧೀಕರಣದ ಪ್ರಕ್ರಿಯೆಯು ವೇಗವಾಗಿ ಆರಂಭವಾಯಿತು. ಅದರಿಂದ ಪೃಥ್ವಿಯ ಮೊದಲು ವಾಯುಮಂಡಲ ಮತ್ತು ನಂತರ ಭೂಮಿ ಪ್ರತ್ಯಕ್ಷ ಹಿಂದು ರಾಷ್ಟ್ರದ ಸ್ಥಾಪನೆಗಾಗಿ ಪೂರಕ ಮತ್ತು ಪೋಷಕವಾಗುವವು.
೫. ಧರ್ಮಧ್ವಜದ ಪೂಜೆಯ ನಂತರ ಅಲ್ಲಿ ಉಪಸ್ಥಿತರಿದ್ದ ಎಲ್ಲ ಸಂತರು ಕೃತಜ್ಞತೆಯನ್ನು ವ್ಯಕ್ತಪಡಿಸಿದ ಮೇಲೆ ಧರ್ಮದೇವತೆಯು ಅವರಿಗೆ ಆಶೀರ್ವಾದ ನೀಡುವುದು
ಧರ್ಮಧ್ವಜದ ಪೂಜೆಯ ನಂತರ ಅಲ್ಲಿ ಉಪಸ್ಥಿತರಿದ್ದ ಎಲ್ಲ ಸಂತರು ಕೃತಜ್ಞತೆಯನ್ನು ವ್ಯಕ್ತಪಡಿಸಿದ ಮೇಲೆ ಧರ್ಮದೇವತೆಯು ಅವರಿಗೆ ಆಶೀರ್ವಾದ ನೀಡಿದಳು, ಧರ್ಮದೇವತೆಯ ಉಪರೂಪಗಳಾದ ಯಮದೇವರು, ಶನಿದೇವರು ಮತ್ತು ಶ್ರೀ ಬಗಲಾಮುಖಿ ದೇವಿ ಇತ್ಯಾದಿ ದೇವತೆಗಳೂ ಪೃಥ್ವಿಯಮೇಲೆ ಹಿಂದು ರಾಷ್ಟ್ರದ ಸ್ಥಾಪನೆಗಾಗಿ ಆಶೀರ್ವಾದ ನೀಡಿರುವುದು ಅರಿವಾಯಿತು.
೬. ಕೃತಜ್ಞತೆ
ಶ್ರೀ ಗುರುಗಳ ಕೃಪೆಯಿಂದಲೇ ಧರ್ಮಧ್ವಜದ ಪೂಜೆಯ ಸಮಯದಲ್ಲಿ ಸೂಕ್ಷ್ಮಸ್ತರದಲ್ಲಿ ನಡೆದ ಪ್ರಕ್ರಿಯೆಯ ಜ್ಞಾನ ಸಿಕ್ಕಿತು ಅದಕ್ಕಾಗಿ ನಾನು ಶ್ರೀ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞಳಾಗಿದ್ದೇನೆ.
– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ) (ಆಧ್ಯಾತ್ಮಿಯ ಮಟ್ಟ ಶೇ ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೨.೬.೨೦೨೨)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. * ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ. * ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಅವರಿಗೆ ಕಣ್ಣಿಗೆ ಕಾಣಿಸದಿರುವುದು ಕಾಣಿಸುತ್ತದೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ. |