ಇಬ್ಬರು ಪುರುಷರು ಮತ್ತು ಓರ್ವ ಸ್ತ್ರೀ ಇವರೆಲ್ಲರ ಛಾಯಾಚಿತ್ರವನ್ನು ಒಟ್ಟಿಗೆ ತೆಗೆಯುವಾಗ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಸ್ತ್ರೀಯು ಇಬ್ಬರು ಪುರುಷರ ಪಕ್ಕದಲ್ಲಿ ನಿಲ್ಲದೇ ಮಧ್ಯಭಾಗದಲ್ಲಿ ನಿಂತುಕೊಳ್ಳುವುದು ಯೋಗ್ಯ

ಶ್ರೀ. ರಾಮ ಹೊನಪ

೧. ಇಬ್ಬರು ಸಾಧಕರ ಪಕ್ಕದಲ್ಲಿ ಸಾಧಕಿಯನ್ನು ನಿಲ್ಲಿಸಿದಾಗ ಸಾಧಕನ ಮನಸ್ಸು ಅಸ್ಥಿರವಾಗುವುದು ಮತ್ತು ಸಾಧಕಿಯನ್ನು ಇಬ್ಬರು ಸಾಧಕರ ನಡುವೆ ನಿಲ್ಲಿಸಿದಾಗ ಸಾಧಕನ ಮನಸ್ಸಿಗೆ ಸ್ಥಿರತೆಯ ಅರಿವಾಗುವುದು 

‘೧.೧೧.೨೦೧೮ ರಂದು ಜ್ಞಾನ ಪ್ರಾಪ್ತ ಮಾಡಿಕೊಳ್ಳುವ ಮೂವರು ಸಾಧಕರ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟು ಆಗಿರುವುದನ್ನು ಘೋಷಿಸಲಾಯಿತು. ಈ ಕಾರ್ಯಕ್ರಮದ ನಂತರ ಛಾಯಾಚಿತ್ರವನ್ನು ತೆಗೆಯಲು ನಾವು, ಶ್ರೀ. ನಿಷಾದ ದೇಶಮುಖ, ನಾನು ಮತ್ತು ನನ್ನ ಬದಿಗೆ ಕು. ಮಧುರಾ ಭೋಸಲೆ ಈ ಕ್ರಮದಲ್ಲಿ ನಿಂತಿದ್ದೆವು. ಪರಾತ್ಪರ ಗುರು ಡಾ. ಆಠವಲೆಯವರು ಈ ಕ್ರಮವನ್ನು ಬದಲಾಯಿಸಿ ಮೊದಲು ಶ್ರೀ. ನಿಷಾದ, ಮಧ್ಯ ಭಾಗದಲ್ಲಿ ಕು. ಮಧುರಾ ಮತ್ತು ನಂತರ ನನಗೆ ನಿಲ್ಲಲು ಹೇಳಿದರು.

ಮೊದಲಿನ ಕ್ರಮದಲ್ಲಿ ನಿಷಾದ, ನಾನು ಮತ್ತು ನನ್ನ ಪಕ್ಕಕ್ಕೆ ಮಧುರಾ ನಿಂತುಕೊಂಡಿದ್ದಳು. ಆ ಸಮಯದಲ್ಲಿ ನನ್ನ ಮನಸ್ಸಿಗೆ ಅಸ್ವಸ್ಥತೆಯ ಅರಿವಾಗಿ ತೊಂದರೆದಾಯಕ ಅನಿಸುತ್ತಿತ್ತು. ಯಾವಾಗ ಪರಾತ್ಪರ ಗುರು ಡಾಕ್ಟರರು ಹೇಳಿದ ಕ್ರಮಕ್ಕನುಸಾರ, ಅಂದರೆ ಮೊದಲು ನಿಷಾದ, ನಂತರ ಮಧುರಾ ಮತ್ತು ಕೊನೆಗೆ ನಾನು ಹೀಗೆ ನಿಲ್ಲಿಸಿದಾಗ ನನ್ನ ಮನಸ್ಸು ತನ್ನಷ್ಟಕ್ಕೆ ತಾನೇ ಶಾಂತ ಮತ್ತು ಸ್ಥಿರವಾಗಿತ್ತು. ಹೀಗೆ ಘಟಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರವು ಮುಂದಿನಂತಿದೆ.

೨. ಇಬ್ಬರು ಪುರುಷರ ಮಧ್ಯದಲ್ಲಿ ಸ್ತ್ರೀ ನಿಲ್ಲುವುದು, ಇದು ಆಧ್ಯಾತ್ಮಿಕದೃಷ್ಟಿಯಿಂದ ಹೆಚ್ಚು ಪೂರಕವಾಗಿದೆ

ಸ್ತ್ರೀಯು ಶಕ್ತಿಗೆ ಸಂಬಂಧಿಸಿದ್ದು ಪುರುಷನು ಪುರುಷ ತತ್ತ್ವಕ್ಕೆ ಸಂಬಂಧಿಸಿದ್ದಾನೆ. ಸ್ತ್ರೀ ಶಕ್ತಿಯು ಪುರುಷನ ಕಾರ್ಯಕ್ಕೆ ಜೊತೆ ನೀಡುತ್ತದೆ (ಸಹಾಯ ಮಾಡುತ್ತದೆ.) ಮತ್ತು ಪುರುಷನಲ್ಲಿನ ಈಶ್ವರಿತತ್ತ್ವವು ಸ್ತ್ರೀ ಶಕ್ತಿಯನ್ನು ನಿಯಂತ್ರಿಸುತ್ತಿರುತ್ತದೆ, ಅಂದರೆ ಇಬ್ಬರೂ ಪರಸ್ಪರ ಪೂರಕವಾಗಿರುತ್ತಾರೆ. ಯಾವಾಗ ಕೆಲವು ಕಾರಣಗಳಿಂದಾಗಿ ಇಬ್ಬರು ಪುರುಷರ ಮಧ್ಯದಲ್ಲಿ ಸ್ತ್ರೀಯು ನಿಲ್ಲುತ್ತಾಳೆಯೋ, ಆಗ ಈ ಪೂರಕವು ಇಬ್ಬರು ಪುರುಷರ ಬದಿಗೆ ಸ್ತ್ರೀಯು ನಿಂತುಕೊಳ್ಳುವುದರ ತುಲನೆಯಲ್ಲಿ ಹೆಚ್ಚಿರುತ್ತದೆ.’

– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೧೧.೨೦೧೮)


ಹಿಂದೂ ಧರ್ಮವು ಜೀವನದಲ್ಲಿನ ಪ್ರತಿಯೊಂದು ವಿಷಯವನ್ನು ಅಧ್ಯಾತ್ಮಶಾಸ್ತ್ರಕ್ಕನುಸಾರ ಮಾಡಲು ಕಲಿಸಿದೆ ಮತ್ತು ಸ್ತ್ರೀಯು ಪುರುಷನ ಎಡಬದಿಗೆ ಇರಬೇಕೋ ಅಥವಾ ಬಲಬದಿಗೆ ಇರಬೇಕೋ ಎಂಬುದರ ವಿಚಾರವನ್ನು ಮಾಡಿದೆ

(ಸದ್ಗುರು) ಡಾ. ಮುಕುಲ ಗಾಡಗೀಳ

‘ಅಧ್ಯಾತ್ಮಶಾಸ್ತ್ರಕ್ಕನುಸಾರ ಸ್ತ್ರೀಯು ಶಕ್ತಿಸ್ವರೂಪ ಮತ್ತು ಪುರುಷನು ಶಿವಸ್ವರೂಪನಾಗಿದ್ದಾನೆ. ಪತಿ-ಪತ್ನಿ ಇಬ್ಬರೂ ಜೊತೆಗಿದ್ದರೆ ಹಿಂದೂ ಧರ್ಮವು ಪತ್ನಿ ಪತಿಯ ಎಡಬದಿಗೆ ಇರಬೇಕೋ ಅಥವಾ ಬಲಬದಿಗೆ ಇರಬೇಕು ಎಂಬ ನಿಯಮವನ್ನು ಅವರ ಕಾರ್ಯಕ್ಕನುಸಾರ ಮುಂದಿನಂತೆ ಹಾಕಿಕೊಟ್ಟಿದೆ.

೧. ಯಾವುದೇ ಕಾರ್ಯವನ್ನು ಮಾಡುವಾಗ

ಇಂತಹ ಸಮಯದಲ್ಲಿ ‘ಪತ್ನಿಯು ಪತಿಯ ಬಲಬದಿಗೆ ಇರಬೇಕು’, ಎಂದು ಹೇಳಲಾಗಿದೆ. ಇದರ ಕಾರಣವೆಂದರೆ ಸ್ತ್ರೀ ಶಕ್ತಿಸ್ವರೂಪವಾಗಿರುವುದರಿಂದ ಅವಳು ಪತಿಯ ಬಲಬದಿಗೆ ಇದ್ದರೆ ಪತಿಯ ಕಾರ್ಯಕ್ಕೆ ಶಕ್ತಿಯನ್ನು ಕೊಡುತ್ತಾಳೆ. ಪತ್ನಿಯು ಬಲಬದಿಗೆ ಇದ್ದರೆ ಅವಳು ಪತಿಯ ಬಲಬದಿಗೆ ಕಾರ್ಯ ನಿರತವಾಗಿರುವ ಸೂರ್ಯನಾಡಿಗೆ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತಾಳೆ. ಇದಕ್ಕಾಗಿಯೇ ಪತಿಯು ಯಾವುದಾದರೊಂದು ಧಾರ್ಮಿಕ ವಿಧಿಯನ್ನು ಮಾಡುತ್ತಿರುವಾಗ ಹಿಂದೂ ಧರ್ಮವು ಪತ್ನಿಗೆ ಅವನ ಬಲಗೈಗೆ ತನ್ನ ಬಲಗೈಯನ್ನು ತಾಗಿಸಲು ಅಥವಾ ದರ್ಭೆಯಿಂದ (ದರ್ಭೆ ಇದು ಒಂದು ರೀತಿಯ ಹುಲ್ಲಾಗಿದ್ದು, ಇದನ್ನು ಕೆಲವು ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ.) ಸ್ಪರ್ಶಿಸಲು ಹೇಳಲಾಗಿದೆ.

೨. ಯಾವುದೇ ಕಾರ್ಯವನ್ನು ಮಾಡದಿರುವಾಗ

ಇಂತಹ ಸಮಯದಲ್ಲಿ ‘ಪತ್ನಿಯು ಪತಿಯ ಎಡಬದಿಗೆ ಇರಬೇಕು’, ಎಂದು ಹೇಳಲಾಗಿದೆ. ಇದರ ಕಾರಣವೆಂದರೆ ಯಾವುದೇ ಕಾರ್ಯವನ್ನು ಮಾಡದಿರುವುದರಿಂದ ಪತ್ನಿಯಲ್ಲಿನ ಶಕ್ತಿಯ ಆವಶ್ಯಕತೆ ಇರುವುದಿಲ್ಲ. ಆದ್ದರಿಂದ ಅವಳಲ್ಲಿನ ಶಕ್ತಿಯನ್ನು ಅಕಾರ್ಯನಿರತ ಸ್ಥಿತಿಯಲ್ಲಿಡಲು ಅವಳಿಗೆ ಪತಿಯ ಎಡಬದಿಯಲ್ಲಿರಲು ಹೇಳಲಾಗಿದೆ. ವ್ಯಕ್ತಿಯ ಎಡಬದಿಯು ಚಂದ್ರನಾಡಿಗೆ ಸಂಬಂಧಿಸಿರುತ್ತದೆ. ಅಕಾರ್ಯನಿರತೆ ಮತ್ತು ಶೀತಲತೆ ಇವು ಅದರ ಗುಣಗಳಾಗಿವೆ.

ಸಂತರ, ಮಹಾನ್ ವ್ಯಕ್ತಿಗಳ, ಹಿರಿಯರ ಆಶೀರ್ವಾದವನ್ನು ಪಡೆಯುವಾಗ ಅಥವಾ ದೇವಸ್ಥಾನದಲ್ಲಿ ದರ್ಶನವನ್ನು ಪಡೆಯುವಾಗ ಪತ್ನಿಗೆ ಪತಿಯ ಎಡಬದಿಗೆ ಇರಲು ಹೇಳಲಾಗಿದೆ.

೩ .ಸ್ತ್ರೀ ಮತ್ತು ಪುರುಷರ ಛಾಯಾಚಿತ್ರವನ್ನು ಒಟ್ಟಿಗೆ ತೆಗೆಯುವಾಗಲೂ ‘ಸ್ತ್ರೀ ಎಲ್ಲಿ ನಿಂತುಕೊಳ್ಳಬೇಕು ?’, ಇದನ್ನು ಸ್ಪಂದನಗಳ ದೃಷ್ಟಿಯಿಂದ ವಿಚಾರ ಮಾಡುವುದು ಆವಶ್ಯಕ !

ಛಾಯಾಚಿತ್ರವನ್ನು ತೆಗೆಯುವಾಗಲೂ ಪತ್ನಿಯು ಪತಿಯ ಎಡಬದಿಗೆ ಇರಬೇಕು. ಮೇಲೆ ಕೊಟ್ಟಿರುವ ಪ್ರಸಂಗದಲ್ಲಿ ಛಾಯಾಚಿತ್ರವನ್ನು ತೆಗೆಯುವಾಗ ಇಬ್ಬರು ಪುರುಷರ ನಂತರ ಯಾವುದಾದರೊಬ್ಬ ಸ್ತ್ರೀಯನ್ನು ನಿಲ್ಲಿಸಿದರೆ ಅದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಯೋಗ್ಯವೆನಿಸಲಿಲ್ಲ; ಎಕೆಂದರೆ ಆಗ ಸ್ತ್ರೀಯು ಕಾರ್ಯನಿರತ ಸ್ಥಿತಿಯಲ್ಲಿರುತ್ತಾಳೆ. ತದ್ವಿರುದ್ಧ ಛಾಯಾಚಿತ್ರವನ್ನು ತೆಗೆಯುವಾಗ ಇಬ್ಬರು ಪುರುಷರ ಮಧ್ಯದಲ್ಲಿ ಸ್ತ್ರೀಯನ್ನು ನಿಲ್ಲಿಸಿದರೆ ಅದು ಯೋಗ್ಯವೆನಿಸುತ್ತದೆ; ಏಕೆಂದರೆ ಆಗ ಇಬ್ಬರು ಪುರುಷರಲ್ಲಿನ ಶಿವತತ್ತ್ವವು ಸ್ತ್ರೀಯಲ್ಲಿನ ಶಕ್ತಿಯನ್ನು ನಿಯಂತ್ರಿ ಸುತ್ತಿರುತ್ತದೆ. ಆದ್ದರಿಂದ ಈ ರೀತಿಯ ಛಾಯಾಚಿತ್ರವನ್ನು ತೆಗೆದನಂತರ ಅದು ಆಧ್ಯಾತ್ಮಿಕದೃಷ್ಟಿಯಲ್ಲಿ ಯೋಗ್ಯವೆನಿಸಿತು. ಒಬ್ಬ ಸ್ತ್ರೀ ಮತ್ತು ಒಬ್ಬ ಪುರುಷ ಇವರ ಛಾಯಾಚಿತ್ರವನ್ನು ತೆಗೆಯುವುದಿದ್ದರೆ ಸ್ತ್ರೀಯು ಪುರುಷನ ಎಡಬದಿಗಿರಬೇಕು.

ಹಿಂದೂ ಧರ್ಮವು ‘ಜೀವನದಲ್ಲಿನ ಪ್ರತಿಯೊಂದು ಚಿಕ್ಕಪುಟ್ಟ ವಿಷಯಗಳನ್ನು ಹೇಗೆ ಮಾಡಬೇಕು ?’, ಎಂಬುದನ್ನು ಅಧ್ಯಾತ್ಮಶಾಸ್ತ್ರಕ್ಕನುಸಾರ ವಿಚಾರ ಮಾಡಿದೆ ಮತ್ತು ಅವುಗಳ ಶಾಸ್ತ್ರವನ್ನು ಹೇಳಿದೆ. ಅದಕ್ಕಾಗಿ ಆಚಾರಧರ್ಮವನ್ನು ಹೇಳಲಾಗಿದೆ. ಇದರಿಂದ ಹಿಂದೂ ಧರ್ಮವು ಎಷ್ಟು ಶ್ರೇಷ್ಠವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ.’

– ಸದ್ಗುರು ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨.೧.೨೦೨೩)