ಹೇಗೆ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಹೆಚ್ಚಾಗುತ್ತಾ ಹೋಗುತ್ತದೆಯೋ, ಹಾಗೆ ಅವನ ಆಧ್ಯಾತ್ಮಿಕ ವಿಚಾರ, ಮಾರ್ಗದರ್ಶನ, ಆಧ್ಯಾತ್ಮಿಕ ಕಾರ್ಯ ಬದಲಾಗುತ್ತದೆ. ಅದರೊಂದಿಗೆ ಅವನ ದೇಹದ ಮೇಲೆ ದೇವತ್ವದ ಸಂಕೇತಗಳು ಕಾಣಿಸತೊಡಗುತ್ತವೆ. ಸೆಪ್ಟಂಬರ್ ೨೦೧೮ ರಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಹಣೆಯ ಮೇಲೆ ‘ॐ, ದಂತಹ ಸ್ಪಷ್ಟ ಆಕಾರವು ಮೂಡಿರುವುದು ಕಂಡುಬಂದಿತು. ೧೦.೬.೨೦೨೧ ರಂದು ಗೋವಾದಲ್ಲಿನ ರಾಮನಾಥಿಯ ಸನಾತನ ಆಶ್ರಮದಲ್ಲಿ ಶ್ರೀತ್ರಿಪುರಾಸುಂದರಿ ಯಾಗವನ್ನು ಮಾಡಲಾಯಿತು. ಆ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿಯಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಹಣೆಯ ಮೇಲೆ ಹಣತೆಯಂತಹ ಆಕಾರ ಕಾಣಿಸಿತು. ೨೬.೧೦.೨೦೧೫ ರಂದು ಪರಾತ್ಪರ ಗುರು ಡಾ. ಆಠವಲೆರವರ ಇನ್ನೋರ್ವ ಆಧ್ಯಾತ್ಮಿಕ ಉತ್ತರಾಧಿಕಾರಿಯಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಣೆಯ ಮೇಲೆ ತ್ರಿಶೂಲದಂತಹ ಆಕಾರವು ಸ್ಪಷ್ಟವಾಗಿ ಕಾಣಿಸಿತು. ಸನಾತನದ ಗುರುಪರಂಪರೆಯರ ಹಣೆಯ ಮಧ್ಯದಲ್ಲಿ ಕಾಣಿಸಿದ ಈ ಶುಭಚಿಹ್ನೆಗಳ ಆಧ್ಯಾತ್ಮಿಕ ವಿಶ್ಲೇಷಣೆಯನ್ನು ಇಂದು ನಾವು ನೋಡುವವರಿದ್ದೇವೆ.
೧. ಮೂವರೂ ಗುರುಗಳ ಹಣೆಯ ಮಧ್ಯದಲ್ಲಿ ಶುಭಚಿಹ್ನೆಗಳು ಮೂಡುವುದರ ಹಿಂದಿನ ಅಧ್ಯಾತ್ಮಶಾಸ್ತ್ರ
ಯಾವಾಗ ಆಧ್ಯಾತ್ಮಿಕ ಗುರುಗಳ ಕಾರ್ಯವು ಜ್ಞಾನಶಕ್ತಿಯ ಬಲದಲ್ಲಿ ನಡೆದಿರುತ್ತದೆಯೋ, ಆಗ ಅವರ ಸಹಸ್ರಾರಚಕ್ರದ ಕಡೆಗೆ ಈಶ್ವರೀ ಜ್ಞಾನದ ಪ್ರವಾಹವು ಬರುತ್ತದೆ ಮತ್ತು ಅದು ಅವರ ಆಜ್ಞಾಚಕ್ರದ ಮೂಲಕ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಆದುದರಿಂದ ಯಾವಾಗ ಜ್ಞಾನಶಕ್ತಿಯ ಪ್ರವಾಹವು ಆಜ್ಞಾಚಕ್ರದಿಂದ ಸಮಷ್ಟಿಯ ಕಡೆಗೆ ಹೋಗುತ್ತದೆಯೋ, ಆಗ ಈ ದೈವೀಪ್ರಕ್ರಿಯೆಯ ಅನುಭವವನ್ನು ನೀಡಲು ಈಶ್ವರೇಚ್ಛೆಯಿಂದ ಆಧ್ಯಾತ್ಮಿಕ ಉನ್ನತರ ಹಣೆಯ ಮೇಲೆ ವಿವಿಧ ರೀತಿಯ ದೈವೀ ಚಿಹ್ನೆಗಳು ಮೂಡುತ್ತವೆ. ಇದರಿಂದ ಆಧ್ಯಾತ್ಮಿಕ ಗುರುಗಳ ಮಹಾತ್ಮೆಯನ್ನು ಜಗತ್ತಿಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ. ಅದೇ ರೀತಿ ಸನಾತನದ ಮೂವರು ಗುರುಗಳು ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಣೆಯ ಮಧ್ಯದಲ್ಲಿ ಮೂಡಿದ ದೈವೀ ಚಿಹ್ನೆಗಳಿಂದ ನಮಗೆ ಅವರ ದೈವೀ ಕಾರ್ಯದ ಮಾಹಿತಿ ಸಿಗುತ್ತದೆ.
೨. ಶಕ್ತಿಯ ವಿಧ, ಅವಳ ಸೂಕ್ಷ್ಮತೆ, ಅವಳ ಅಧಿಪತ್ಯ ದೇವತೆ ಮತ್ತು ಅವಳಿಗೆ ಸಂಬಂಧಪಟ್ಟ ಕುಂಡಲಿನಿಚಕ್ರಗಳು
೩. ಮೂವರು ಗುರುಗಳ ಹಣೆಯ ಮೇಲೆ ಮೂಡಿದ ಶುಭಚಿಹ್ನೆಗಳ ಭಾವಾರ್ಥ
೩ ಅ. ಪರಾತ್ಪರ ಗುರು ಡಾ. ಆಠವಲೆಯವರ ಹಣೆಯ ಮಧ್ಯದಲ್ಲಿ ॐ ಮೂಡಿರುವುದು : ಪರಾತ್ಪರ ಗುರು ಡಾ. ಆಠವಲೆಯವರಿಂದ ನಿರ್ಗುಣ-ಸಗುಣ ಸ್ತರದಲ್ಲಿನ ಜ್ಞಾನಶಕ್ತಿ ಮತ್ತು ಧರ್ಮಶಕ್ತಿಯ ಪ್ರಕ್ಷೇಪಣೆ ಆಗುವುದರಿಂದ ಅವರ ಹಣೆಯ ಮಧ್ಯದಲ್ಲಿ ನಿರ್ಗುಣವಾಚಕ ಮತ್ತು ಧರ್ಮಸೂಚಕವಾಗಿರುವ ‘ॐ ಈ ಶುಭಚಿಹ್ನೆಯು ಮೂಡಿದೆ. ಆದುದರಿಂದ ಸ್ಥೂಲದಲ್ಲಿ ಸಮಾಜದಲ್ಲಿ ಸಾಧಕರಿಂದ ‘ಜ್ಞಾನಶಕ್ತಿ ಅಭಿಯಾನವನ್ನು ನಡೆಸಲಾಯಿತು. ಈ ಅಭಿಯಾನದ ಅಂತರ್ಗತ ಸಮಾಜದಲ್ಲಿ ಸನಾತನದ ಗ್ರಂಥಗಳ ವಿತರಣೆಯು ದೊಡ್ಡ ಪ್ರಮಾಣದಲ್ಲಾಗಿ ಸಮಾಜದಲ್ಲಿ ಧರ್ಮ ಮತ್ತು ಅಧ್ಯಾತ್ಮ ಜ್ಞಾನದ ಪ್ರಸಾರವಾಯಿತು. ಇದರಿಂದಾಗಿ ಅನೇಕ ಸಾತ್ತ್ವಿಕ ಜೀವಗಳು ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ಪ್ರಾರಂಭಿಸಿದವು. ಇದರಿಂದ ಸಮಾಜದ ಸಾತ್ತ್ವಿಕತೆ ಹೆಚ್ಚಾಗಲು ಸಹಾಯವಾಯಿತು.
೩ ಆ. ಆಶ್ರಮದಲ್ಲಿ ಆಗಿರುವ ಶ್ರೀತ್ರಿಪುರಾಸುಂದರಿ ಯಾಗದ ಸಮಯದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾಅಕ್ಕನವರ ಹಣೆಯ ಮೇಲೆ ಹಣತೆಯಂತಹ ಆಕಾರವು ಕಾಣಿಸುವುದು : ತ್ರಿಪುರಾಸುಂದರಿದೇವಿಯಲ್ಲಿ ಶಕ್ತಿ ಮತ್ತು ಜ್ಞಾನದ ಸುಂದರ ಸಂಗಮವಿದೆ, ಹಾಗೆಯೇ ಅವಳು ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ತುಂಬಾ ಪೂರಕವಾಗಿದ್ದು ಅವಳು ಧರ್ಮರಾಜ್ಯವನ್ನು ನಡೆಸಲು ದೈವೀ ಮಾರ್ಗದರ್ಶಕಳಾಗಿದ್ದಾಳೆ. ಸನಾತನದ ರಾಮನಾಥಿ ಆಶ್ರಮದಲ್ಲಿ ಶ್ರೀತ್ರಿಪುರಾಸುಂದರಿದೇವಿಯ ಯಾಗವಾದಾಗ ದೇವಿಯಿಂದ ತೇಜತತ್ತ್ವದ ಸ್ತರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಯ ಪ್ರಕ್ಷೇಪಣೆಯಾಯಿತು. ಇದರ ಪ್ರತೀಕವೆಂದು ಶ್ರೀಸತ್‌ಶಕ್ತಿ (ಸೌ.) ಬಿಂದಾಅಕ್ಕನವರ ಹಣೆಯ ಮೇಲೆ ಹಣತೆಯಂತಹ ಆಕಾರ ಬಂತು.
ಈ ಆಕಾರದಿಂದ ತೇಜೋಮಯ ಕ್ರಿಯಾಶಕ್ತಿಯ ಪ್ರಕ್ಷೇಪಣೆಯಾಗಿ ಧರ್ಮ ಮತ್ತು ಅಧ್ಯಾತ್ಮದ ಪ್ರಸಾರ ಕಾರ್ಯವನ್ನು ಮಾಡುವ ಸಮಷ್ಟಿ ಜೀವಗಳಿಗೆ ಶ್ರೀತ್ರಿಪುರಾದೇವಿಯಿಂದ ಪ್ರಕ್ಷೇಪಿಸಿದ ಧರ್ಮತೇಜವು ಲಭಿಸಿತು. ಹಾಗಾಗಿ ಅವರ ಸಮಷ್ಟಿ ಕಾರ್ಯಕ್ಕೆ ವೇಗವು ಸಿಕ್ಕಿತು.
೩ ಇ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಹಣೆಯಲ್ಲಿ ತ್ರಿಶೂಲದಂತಹ ಆಕಾರವು ಕಾಣಿಸುವುದು :
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ ಶ್ರೀದುರ್ಗಾದೇವಿಯ ಮಾರಕ ಕ್ರಿಯಾಶಕ್ತಿಯು ಕಾರ್ಯನಿರತವಾಗಿ ಅದು ಭಾರತದ ದೇವಸ್ಥಾನಗಳು, ತೀರ್ಥಕ್ಷೇತ್ರಗಳು ಮತ್ತು ಸಾಧಕರ ಮೇಲಾಗುವ ಸಮಷ್ಟಿ ಸ್ತರದಲ್ಲಿನ ಆಕ್ರಮಣಗಳನ್ನು ಹಿಮ್ಮೆಟ್ಟಿಸಲು ಪ್ರಕ್ಷೇಪಿಸಿತು. ಆದುದರಿಂದ ಶ್ರೀದುರ್ಗಾದೇವಿಯ ಕೈಯಲ್ಲಿನ ತ್ರಿಶೂಲದ ಶುಭಚಿಹ್ನೆಯು ಅವರ ಹಣೆಯ ಮೇಲೆ ಮೂಡಿತು. ಈ ಶುಭಚಿಹ್ನೆಯಿಂದ ಪ್ರಕ್ಷೇಪಿಸಿದ ಶ್ರೀದುರ್ಗಾದೇವಿಯ ಮಾರಕ ಶಕ್ತಿಯು ಸಾಧಕರನ್ನು ಅಧರ್ಮಿ ಶಕ್ತಿಗಳಿಂದ ರಕ್ಷಿಸಿತು.
ಕೃತಜ್ಞತೆ
‘ಶ್ರೀಗುರುಗಳ ಕೃಪೆಯಿಂದ ಸನಾತನದ ಮೂವರೂ ಗುರುಗಳ ಹಣೆಯ ಮೇಲೆ ಮೂಡಿದ ದೈವೀ ಚಿಹ್ನೆಗಳ ಭಾವಾರ್ಥವು ತಿಳಿಯಿತು ಮತ್ತು ಅದರ ಹಿಂದಿನ ಅಧ್ಯಾತ್ಮಶಾಸ್ತ್ರವೂ ತಿಳಿಯಿತು, ಇದಕ್ಕಾಗಿ ನಾನು ಮೂವರೂ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
– ಕು. ಮಧುರಾ ಭೊಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೬.೨೦೨೨)
ವಾಚಕರಿಗೆ ನಿವೇದನೆ !‘ಮುದ್ರಣದಲ್ಲಿನ ತಾಂತ್ರಿಕ ಅಡಚಣೆಗಳಿಂದಾಗಿ ಇಲ್ಲಿ ಪ್ರಕಟಿಸಿದ ಛಾಯಾಚಿತ್ರಗಳು ಹೇಗೆ ಇರುವವೋ, ಹಾಗೆಯೇ ಮುದ್ರಣವಾಗಿ ಬರುತ್ತವೆ, ಎಂದೇನಿರುವುದಿಲ್ಲ. ಇದಕ್ಕೆ ಉಪಾಯವೆಂದು ಮತ್ತು ಪ್ರತಿಯೊಬ್ಬರಿಗೂ ಈ ಬದಲಾವಣೆ ಕಾಣಿಸಬೇಕೆಂದು ಹಾಗೂ ವಿಷಯ ತಿಳಿಯಬೇಕೆಂದು ಈ ಬದಲಾವಣೆಗಳನ್ನು ಗಣಕ ಯಂತ್ರದ ಸಹಾಯದಿಂದ ಹೆಚ್ಚು ಎದ್ದುಕಾಣುವಂತೆ ಮಾಡಿದ್ದೇವೆ, ವಾಚಕರು ಇದನ್ನು ಗಮನಿಸಬೇಕು. ಮೂಲ ಛಾಯಾಚಿತ್ರಗಳನ್ನು ಸ್ಪಷ್ಟವಾಗಿ ನೋಡಲು ವಾಚಕರು ‘ಸನಾತನ ಪ್ರಭಾತದ ಜಾಲತಾಣದ ಮೇಲಿನ https://bit.ly/3NGjeXS ಈ ಮಾರ್ಗವನ್ನು ಅನುಸರಿಸಬೇಕು. (ಈ ಮಾರ್ಗದಲ್ಲಿನ ಕೆಲವು ಅಕ್ಷರಗಳು ‘ಕ್ಯಾಪಿಟಲ್ ಆಗಿವೆ.) |
ಅನುಭೂತಿ : ಅನುಭೂತಿಗಳಿಂದ ದೇವರ ಮೇಲಿನ/ಸಾಧನೆಯ ಮೇಲಿನ ಉಪಾಸಕನ ಶ್ರದ್ಧೆಯು ಹೆಚ್ಚಾಗಿ ಅವನ ಸಾಧನೆಯಲ್ಲಿ ಹೆಚ್ಚಳವಾಗಲು ಸಹಾಯವಾಗುತ್ತದೆ. * ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |