ಮಹರ್ಷಿಗಳ ಅಜ್ಞೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ತಮಿಳುನಾಡಿನ ‘ಅರಿಗನರ ಅಣ್ಣಾ ಝೂವಾಲಾಜಿಕಲ್ ಪಾರ್ಕ್’ ಈ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ಮಾಡಿದ ಸೂಕ್ಷ್ಮ ಪರೀಕ್ಷಣೆ !

ಕು. ಮಧುರಾ ಭೋಸಲೆ

ಮಹರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ತಮಿಳುನಾಡಿನ ‘ಅರಿಗನರ ಅಣ್ಣಾ ಝೂವಾ ಲಾಜಿಕಲ್ ಪಾರ್ಕ್’ ಈ ಪ್ರಾಣಿ ಸಂಗ್ರಹಾಲಯಕ್ಕೆ ಹೋಗಲು ಹೇಳಿದ್ದರು. ಅದರಂತೆ ೧೮.೧೨.೨೦೨೧ ಈ ದಿನದಂದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅಲ್ಲಿಗೆ ಹೋದಾಗ ನನ್ನಿಂದಾದ ಸೂಕ್ಷ್ಮ ಪರೀಕ್ಷಣೆಯನ್ನು ಇಲ್ಲಿ ಕೊಡಲಾಗಿದೆ.

೧. ಸದ್ಗುರುದ್ವಯರ ಮಾಧ್ಯಮದಿಂದ ಶ್ರೀ ಮಹಾಲಕ್ಷ್ಮೀದೇವಿಯ ದೈವೀ ಶಕ್ತಿಯು ಕಾರ್ಯನಿರತವಾಗಿರುವುದರಿಂದ ಪೃಥ್ವಿಯಲ್ಲಿ ೨೦೨೫ ನೇ ಇಸವಿಯ ನಂತರ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿರುವುದು

ಪ್ರಾಣಿಸಂಗ್ರಹಾಲಯದಲ್ಲಿ ನಿಂತಿರುವ ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ
ಕು. ಮಧುರಾ ಭೋಸಲೆ ಇವರಿಗೆ ಸೂಕ್ಷ್ಮದಲ್ಲಿ ಕಾಣಿಸಿದಂತೆ ಪ್ರತ್ಯಕ್ಷ ಪ್ರಾಣಿ ಸಂಗ್ರಹಾಲಯದಲ್ಲಿರುವ ವಯೋವೃದ್ಧ ಸಿಂಹ (ಗೋಲದಲ್ಲಿ ತೋರಿಸಲಾಗಿದೆ.)

ಈಶ್ವರನ ಕೃಪೆಯಿಂದ ಶ್ರೀವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಮಾಧ್ಯಮದಿಂದ ಪೃಥ್ವಿಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ. ಪೃಥ್ವಿಯಲ್ಲಿ ಸ್ಥೂಲದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಶ್ರೀ ಮಹಾಲಕ್ಷ್ಮೀದೇವಿಯ ದೈವೀ ಶಕ್ತಿಯು ಸದ್ಗುರುದ್ವಯರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮಾಧ್ಯಮದಿಂದ ಕಾರ್ಯನಿರತವಾಗಿದ್ದು ಅವರಿಂದ ಪ್ರಕ್ಷೇಪಿತವಾಗುವ ದೈವೀ ಶಕ್ತಿ ವಾಯುಮಂಡಲದಲ್ಲಿ ಪ್ರಕ್ಷೇಪಿತವಾಗುತ್ತದೆ. ಆದುದರಿಂದ ಕಲುಷಿತಗೊಂಡ ವಾಯುಮಂಡಲದ ಶುದ್ಧಿಯಾಗಿ ದೇವತೆಗಳ ತತ್ತ್ವಲಹರಿಗಳು ಪೃಥ್ವಿಯ ಕಡೆಗೆ ಆಕರ್ಷಿತಗೊಳ್ಳುತ್ತಿವೆ. ಆದುದರಿಂದ ಪೃಥ್ವಿಯಲ್ಲಿ ೨೦೨೫ ನೇ ಇಸವಿಯ ನಂತರ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ.

೨. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದಾಗಿ ಪೃಥ್ವಿಯಲ್ಲಿನ ಸಾಧಕರಿಗೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದಾಗಿ ವಿವಿಧ ಸ್ಥಳಗಳಲ್ಲಿನ ಮನುಷ್ಯರಿಗೆ ಮತ್ತು ವಿವಿಧ ಯೋನಿಗಳಲ್ಲಿನ, ಹಾಗೆಯೇ ಶಾಪಗ್ರಸ್ತ ಜೀವಗಳಿಗೆ ಲಾಭವಾಗುವುದು

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ ಶ್ರೀ ಮಹಾಲಕ್ಷ್ಮೀದೇವಿಯ ಕಾರ್ಯನಿರತವಿರುವ ದೈವೀ ಶಕ್ತಿಯು ಅತ್ಯಂತ ಕಲ್ಯಾಣಕಾರಿಯಾಗಿದೆ. ಸದ್ಗುರುದ್ವಯರು ಸತತವಾಗಿ ಶಿವದೆಶೆಯಲ್ಲಿರುವುದರಿಂದ ಅವರ ಅಂತಃಕರಣದಲ್ಲಿ ಯಾವಾಗಲೂ ಎಲ್ಲ ಜೀವಗಳ ಉದ್ಧಾರ ಮಾಡುವ ಸಾತ್ತ್ವಿಕ ವಿಚಾರ ಕಾರ್ಯನಿರತವಾಗಿರುತ್ತದೆ. ಆದುದರಿಂದ ಯಾವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದರ್ಶನ ಮತ್ತು ಮಾರ್ಗದರ್ಶನ ಲಭಿಸುತ್ತದೋ, ಆಗ ಪೃಥ್ವಿಯಲ್ಲಿನ ವಿವಿಧ ಸಾಧಕರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಿ ಅವರ ಉದ್ಧಾರವಾಗುತ್ತದೆ. ಯಾವಾಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ದರ್ಶನ ಮತ್ತು ಮಾರ್ಗದರ್ಶನ ಲಭಿಸುತ್ತದೋ, ಆಗ ಪೃಥ್ವಿಯಲ್ಲಿನ ವಿವಿಧ ಸ್ಥಳಗಳ ಕೇವಲ ಮನುಷ್ಯರಷ್ಟೇ ಅಲ್ಲ, ಆದರೆ ಪ್ರಾಣಿಗಳಂತಹ ವಿವಿಧ ಯೋನಿಗಳಲ್ಲಿ ಸಿಲುಕಿದ ಮತ್ತು ಸೂಕ್ಷ್ಮ ಸ್ತರದಲ್ಲಿ ಕಾರ್ಯನಿರತರಾಗಿರುವ ಅನೇಕ ಶಾಪಗ್ರಸ್ತ ಜೀವಗಳಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗಿ ಅವರ ಉದ್ಧಾರವಾಗುತ್ತದೆ.

೩. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಪ್ರಾಣಿಸಂಗ್ರಹಾಲಯವನ್ನು ಪ್ರವೇಶಿಸಿದಾಗ ಅವರ ದೈವೀ ಶಕ್ತಿಯಿಂದ ಅಲ್ಲಿನ ಪ್ರಾಣಿಗಳ ಮೇಲಾದ ಪರಿಣಾಮ

೩. ಅ. ಶ್ರೀಮಹಾಲಕ್ಷ್ಮೀಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಪ್ರಕ್ಷೇಪಿತವಾದ ದೈವೀ ಶಕ್ತಿಯಿಂದ ಪ್ರಾಣಿ ಸಂಗ್ರಹಾಲಯದಲ್ಲಿನ ವಯೋವೃದ್ಧ ಸಿಂಹದ ಉದ್ಧಾರವಾಗುವುದು :

ಯಾವಾಗ ಶ್ರೀಚಿತ್‌ಶಕ್ತಿ (ಸೌ.)  ಗಾಡಗೀಳ ಇವರು ಪ್ರಾಣಿಸಂಗ್ರಹಾಲಯದಲ್ಲಿ ಪ್ರವೇಶಿಸಿದರೋ ಆಗ, ನನಗೆ ಸೂಕ್ಷ್ಮದಿಂದ, ‘ಒಂದು ಸಿಂಹಕ್ಕೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ದೈವೀ ಶಕ್ತಿಯ ಜಾಡು ತಿಳಿದ ಕಾರಣ ಅದು ಅವರ ದಾರಿ ಕಾಯುತ್ತಾ ಎಡತಾಕುತ್ತಿರುವ ದೃಶ್ಯವು ಕಾಣಿಸಿತು’. ಆ ಸಿಂಹವು ಕಳೆದ ಜನ್ಮದಲ್ಲಿ ಸಾತ್ತ್ವಿಕ ಮನುಷ್ಯನಾಗಿದ್ದನು; ಆದರೆ ಅವನಿಗೆ ಶನಿಯ ಸಾಡೆಸಾತಿ ನಡೆದಿರುವಾಗ (ಶನಿಯ ತೊಂದರೆ ಪ್ರಾರಂಭವಾದುದರಿಂದ) ಅವನ ಬುದ್ಧಿಯು ಭ್ರಷ್ಟವಾಗಿ, ಅವನು ಓರ್ವ ನಿರಪರಾಧಿ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದನು. ಆದುದರಿಂದ ಅವನಿಗೆ ಮೃತ್ಯುವಿನ  ನಂತರ ೬೦೦ ವರ್ಷಗಳ ಕಾಲ ನರಕಯಾತನೆಯನ್ನು ಭೋಗಿಸಬೇಕಾಯಿತು. ಅನಂತರ ಅವನಿಗೆ ಪೃಥ್ವಿಯಲ್ಲಿ ಸಿಂಹದ ಜನ್ಮವು ದೊರಕಿತು. ಅವನು ಕಳೆದ ಜನ್ಮದಲ್ಲಿ ಮಾಡಿದ ಕೆಲವು ಪುಣ್ಯಕರ್ಮಗಳಿಂದ ಈಶ್ವರನ ಕೃಪೆಯಿಂದ ಅವನ ಸಾತ್ತ್ವಿಕ ಬುದ್ಧಿಯು ೧೮.೧೨.೨೦೨೧ ಈ ದಿನದಂದು ಜಾಗೃತವಾಯಿತು ಮತ್ತು ಅದಕ್ಕೆ ಹಿಂದಿನ ಜನ್ಮದ ಜ್ಞಾನವು ದೊರಕಿತು. ಆದುದರಿಂದ ಅದು ತನ್ನ ‘ಸಿಂಹ’ ಯೋನಿಯಿಂದ ಮುಕ್ತವಾಗಲು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ದಾರಿಯನ್ನು ನೋಡುತ್ತಿತ್ತು. ಯಾವಾಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಪ್ರಾಣಿಸಂಗ್ರಹಾಲಯದಲ್ಲಿ ಪ್ರವೇಶಿಸಿದರೋ, ಆಗ ಅಲ್ಲಿನ ವಯೋವೃದ್ಧ ಸಿಂಹವು ಸೂಕ್ಷ್ಮದಿಂದ ಬಂದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಎಡಕಾಲಿನ ಪಾದವನ್ನು ನೆಕ್ಕಿ ಅವರಿಗೆ ೩ ಸಲ ಪ್ರದಕ್ಷಿಣೆಯನ್ನು ಹಾಕಿತು ಮತ್ತು ಅವರಿಗೆ ವಂದಿಸಿ ತನ್ನ ಉದ್ಧಾರಕ್ಕಾಗಿ ಪ್ರಾರ್ಥಿಸಿತು. ಆಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಹೃದಯದಲ್ಲಿ ಸಿಂಹದ ಬಗ್ಗೆ ಕರುಣಾಭಾವವು ಜಾಗೃತವಾಯಿತು ಮತ್ತು ಅವರ ಅನಾಹತಚಕ್ರದಿಂದ ಸಿಂಹದ ದಿಕ್ಕಿಗೆ ಕೆಂಪು ಬಣ್ಣದ ದೈವೀ ಶಕ್ತಿಯು ಪ್ರವಹಿಸಿತು ಮತ್ತು ಸಿಂಹದ ದೇಹದಲ್ಲಿ ದೈವೀ ಶಕ್ತಿಯು ಕಾರ್ಯನಿರತವಾಗಿ ಅದರ ಹಿಂದಿನ ಜನ್ಮದ ಪಾಪಕರ್ಮದ ಫಲಗಳು ನಾಶವಾಗುವ ಪ್ರಕ್ರಿಯೆಯು ಆರಂಭವಾಯಿತು. ಕೆಲವು ದಿನಗಳ ನಂತರ ಯಾವಾಗ ಅದರ ಪಾಪದ ಫಲವು ಸಂಪೂರ್ಣವಾಗಿ ನಾಶವಾಗುವುದೋ, ಆಗ ಈ ಸಿಂಹದ ಮೃತ್ಯುವಾಗಿ ಅದಕ್ಕೆ ಪ್ರಾಣಿಗಳ ಭೋಗಯೋನಿಯಿಂದ ಮುಕ್ತಿ ದೊರಕಿ ಮುಂದಿನ ಜನ್ಮದಲ್ಲಿ ಯೋಗಯೋನಿಯಲ್ಲಿ, ಅಂದರೆ ಮನುಷ್ಯಜನ್ಮವು ದೊರಕಿ ಅವನು ಸಾಧನೆಯನ್ನು ಮಾಡುವನು. (ಪ್ರತ್ಯಕ್ಷದಲ್ಲಿಯೂ ಪ್ರಾಣಿ ಸಂಗ್ರಹಾಲಯದಲ್ಲಿ ವಯೋವೃದ್ಧ ಸಿಂಹವು ಕಾಣಿಸಿತು. – ಶ್ರೀ. ವಿನಾಯಕ ಶಾನಭಾಗ, ತಮಿಳುನಾಡು)

೩ ಆ. ಶ್ರೀಮಹಾಲಕ್ಷ್ಮೀಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಂದ ಪ್ರಕ್ಷೇಪಿತವಾದ ದೈವೀ ಶಕ್ತಿಯಿಂದ ಪ್ರಾಣಿಸಂಗ್ರಹಾಲಯದಲ್ಲಿನ ಸರ್ಪದ ಉದ್ಧಾರವಾಗುವುದು : ಯಾವಾಗ ಸರ್ಪವು ತನ್ನ ಹಳೆಯ ಪೊರೆಯನ್ನು ಕಳಚುತ್ತದೋ, ಆಗ ಅದು ತರುಣ ಮತ್ತು ದೀರ್ಘಾಯುಷಿಯಾಗುತ್ತದೆ. ಯಾವಾಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಸರ್ಪಸಂಗ್ರಹಾಲಯಕ್ಕೆ ಭೇಟಿ ನೀಡಿದರೋ, ಆಗ ಅವರು ದೇವರಲ್ಲಿ ‘ಸರ್ಪಯೋನಿಯಿಂದ ಈ ಜೀವಗಳಿಗೆ ಮುಕ್ತಿಯು ದೊರಕಲಿ’, ಎಂದು ಪ್ರಾರ್ಥಿಸಿದರು. ಇದರಿಂದ ಭಕ್ತಸ್ವರೂಪರಾಗಿರುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಹೃದಯದಲ್ಲಿನ ಭಾವಪೂರ್ಣ ಪ್ರಾರ್ಥನೆಯನ್ನು ಭಗವಂತನು ಕೇಳಿ ‘ತಥಾಸ್ತು’ ಎಂದನು. ಅನಂತರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಹೃದಯದಲ್ಲಿ ಸರ್ಪಗಳ ಬಗ್ಗೆಯೂ ಕರುಣಾಭಾವವು ಜಾಗೃತವಾಯಿತು ಮತ್ತು ಅವರ ಅನಾಹತಚಕ್ರದಿಂದ ಸರ್ಪಗಳ ದಿಕ್ಕಿಗೆ ಕೆಂಪು ಬಣ್ಣದ ದೈವೀ ಶಕ್ತಿಯ ಪ್ರವಾಹವು ಪ್ರಕ್ಷೇಪಿತವಾಯಿತು. ಆದುದರಿಂದ ಅಲ್ಲಿನ ಒಂದು ಸರ್ಪಕ್ಕೆ ಅವರಿಂದ ದೈವೀ ಊರ್ಜೆಯು ದೊರಕಿದುದರಿಂದ ಅದು ಹಳೆಯ ಪೊರೆಯನ್ನು ಕಳಚಿ ಹೊಸ ಪೊರೆಯನ್ನು ಧರಿಸಿತು. (ಸಂತಕೃಪೆಯಿಂದ ಹಾವಿನ ಪೊರೆ ಕಳಚುವ ಪ್ರಕ್ರಿಯೆಯು ಇಲ್ಲಿ ವೇಗದಿಂದಾಗುತ್ತದೆ. ಸರ್ವಸಾಮಾನ್ಯ ಸ್ಥಿತಿಯಲ್ಲಿ ಪೊರೆಯನ್ನು ಕಳಚುವ ಪ್ರಕ್ರಿಯೆಗೆ ಹಲವು ದಿನಗಳು ಬೇಕಾಗುತ್ತವೆ. – ಆಧುನಿಕ ಪಶುವೈದ್ಯ ಅಜಯ ಜೋಶಿ) ಈ ರೀತಿ ಈ ಸರ್ಪಕ್ಕೆ ದೈವೀ ಊರ್ಜೆಯು ದೊರಕಿ ನವತಾರುಣ್ಯವು ಪ್ರಾಪ್ತವಾಯಿತು.

ಶ್ರೀ. ವಿನಾಯಕ ಶಾನಭಾಗ ಇವರು ನನಗೆ ಈ ಸರ್ಪದ ಛಾಯಾಚಿತ್ರವನ್ನು ಕಳುಹಿಸಿದಾಗ, ಅದರ ಪೊರೆಯನ್ನು ನೋಡಿದಾಗ ಅದರ ಮೇಲೆ ತೊಂದರೆದಾಯಕ ಶಕ್ತಿಯ ಆವರಣವಿರುವುದು ಅರಿವಾಯಿತು ಮತ್ತು ಪೊರೆಯನ್ನು ಕಳಚಿದ ಹಾವಿನ ಕಡೆಗೆ ನೋಡಿ ಸಾತ್ತ್ವಿಕ ಸ್ಪಂದನಗಳ ಅರಿವಾಯಿತು ಮತ್ತು ನನಗೆ ಭಗವಾನ ಶಿವನ ಸ್ಮರಣೆಯಾಯಿತು. ಈ ಸರ್ಪದಲ್ಲಿಯೂ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ದೈವೀ ಊರ್ಜೆಯು ಕಾರ್ಯನಿರತವಾದುದರಿಂದ ಅದರ ಸಾತ್ತ್ವಿಕ ಬುದ್ಧಿಯು ಕಾರ್ಯನಿರತವಾಗಿ ಅದಕ್ಕೆ ಶಿವನ ನಾಮಜಪ ಮಾಡುವ ಪ್ರೇರಣೆಯು ದೊರಕಿ ಅದರ ‘ಓಂ ನಮಃ ಶಿವಾಯ |’, ಈ ನಾಮಜಪವು ಆರಂಭವಾಯಿತು. ಶಿವನ ನಾಮಜಪ ಮಾಡಿದುದರಿಂದ ಆ ಸರ್ಪಕ್ಕೆ ಈ ಜನ್ಮದಲ್ಲಿ ಮುಕ್ತಿ ದೊರಕಿ ಅದು ಶಿವಲೋಕಕ್ಕೆ ದೈವೀ ಸರ್ಪವಾಗಿ ಹೋಗಲಿದೆ.

೩ ಇ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಪ್ರಕ್ಷೇಪಿತವಾಗುವ ದೈವೀ ಶಕ್ತಿಯಿಂದ ಪ್ರಾಣಿಗಳಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವುದು

೪. ಮಹರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಪ್ರಾಣಿಸಂಗ್ರಹಾಲಯಕ್ಕೆ ಹೋಗಲು ಹೇಳಿದುದರ ಹಿಂದಿನ ಕಾರ್ಯಕಾರಣಭಾವ

‘ತಮಿಳುನಾಡಿನ ಕೆಲವು ಪ್ರಾಣಿಗಳು ಶಾಪಗ್ರಸ್ತವಾಗಿದ್ದು ಅವುಗಳಿಗೆ ತಮ್ಮ ಹಿಂದಿನ ಜನ್ಮಗಳ ಸ್ಮೃತಿಯಾದ ನಂತರ ತಾವು  ಪಾಪಕರ್ಮಗಳ ಪಶ್ಚಾತ್ತಾಪವಾಗಿ ಅವು ಭಗವಂತನ ಬಳಿ ತಮ್ಮ ಮುಕ್ತಿಗಾಗಿ ಪ್ರಾರ್ಥನೆಯನ್ನು ಮಾಡಲಿರುವವು. ಈ ಪ್ರಾಣಿಗಳು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಂತಹ ಉನ್ನತರು ಬರುವ ದಾರಿಯನ್ನು ಕಾಯುತ್ತಿವೆ, ಎಂದು ಮಹರ್ಷಿಗಳಿಗೆ ಗೊತ್ತಿತ್ತು. ಆದುದರಿಂದ ಮಹರ್ಷಿಗಳು ‘ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಂದ ಪ್ರಕ್ಷೇಪಿತವಾಗುವ ದೈವೀ ಶಕ್ತಿಯ ಲಾಭವು ಪ್ರಾಣಿಗಳಿಗೆ ದೊರಕಿ ಅವುಗಳ ಉದ್ಧಾರವಾಗಬೇಕು’, ಎಂಬುದಕ್ಕಾಗಿ ಅವರಿಗೆ ಪ್ರಾಣಿಸಂಗ್ರಹಾಲಯಕ್ಕೆ ಹೋಗಲು ಹೇಳಿದ್ದರು. ಆದುದರಿಂದ ಯಾವಾಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಪ್ರಾಣಿಸಂಗ್ರಹಾಲಯಕ್ಕೆ ಹೋದರೋ, ಆಗ ಅಲ್ಲಿನ ಪ್ರಾಣಿಗಳಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಯಿತು.

೫. ಕೃತಜ್ಞತೆ

‘ದೇವರ ಕೃಪೆಯಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡಿದುದರಿಂದ ಸೂಕ್ಷ್ಮ ಸ್ತರದಲ್ಲಿ ಪ್ರಾಣಿಗಳಿಗೆ ಎಷ್ಟು ಪ್ರಮಾಣದಲ್ಲಿ ಲಾಭವಾಯಿತು’, ಎಂದು ಕಲಿಯಲು ಸಿಕ್ಕಿತು, ಇದಕ್ಕಾಗಿ ನಾನು ದೇವರ ಚರಣಗಳಲ್ಲಿ ಕೋಟಿಶಃ ಕೃತಜ್ಞಳಾಗಿದ್ದೇನೆ.

– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೩, ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ (೨೪.೧೨.೨೦೨೧)