ಕಾರವಾರದ ಪಂಚಶಿಲ್ಪಕಾರ ಪೂ. ನಂದಾ ಆಚಾರಿ (ಗುರುಜಿ) ಇವರ ಸಂತಪದವಿಯಲ್ಲಿ ವಿರಾಜಮಾನರಾಗುವ ಸಮಾರಂಭದಲ್ಲಿ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಪೂ. ನಂದಾ ಆಚಾರಿ (ಗುರುಜಿ)

ಕಾರವಾರದ ಪಂಚಶಿಲ್ಪಕಾರರಾದ ಪೂ. ನಂದಾ ಆಚಾರಿ (ಗುರುಜಿ) ೩.೧೧.೨೦೨೨ ರಂದು ಸಂತಪದವಿಯಲ್ಲಿ ವಿರಾಜಮಾನರಾದರು. ಸನಾತನದ ಸೂಕ್ಷ್ಮಜ್ಞಾನಪ್ರಾಪ್ತವನ್ನು ಮಾಡಿಕೊಳ್ಳುವ ಸಾಧಕರಾದ ಶ್ರೀ. ನಿಷಾದ ದೇಶಮುಖ (ಆಧ್ಯಾತ್ಮಿಕ ಮಟ್ಟ ಶೇ. ೬೨ ರಷ್ಟು) ಇವರು ಈ ಸಮಾರಂಭದಲ್ಲಿ ಮಾಡಿದ ಸೂಕ್ಷ್ಮ ಪರೀಕ್ಷಣೆ ಮತ್ತು ಪೂ. ನಂದಾ ಆಚಾರಿ ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳ ಕುರಿತು ಶ್ರೀ. ನಿಷಾದ ದೇಶಮುಖ ಇವರಿಗೆ ಲಭಿಸಿದ ಈಶ್ವರೀ ಜ್ಞಾನದ ಸಂದರ್ಭದಲ್ಲಿನ ಅಂಶಗಳನ್ನು ಇಲ್ಲಿ ಕೊಡಲಾಗಿದೆ.

ಶ್ರೀ. ನಿಷಾದ ದೇಶಮುಖ

೧. ಪೂ. ನಂದಾ ಆಚಾರಿ (ಗುರುಜಿ) ಇವರು ಸಂತಪದವಿಯನ್ನು ಪ್ರಾಪ್ತ ಮಾಡಿಕೊಂಡ ಸಮಾರಂಭದಲ್ಲಿ ಮಾಡಿದ ಸೂಕ್ಷ್ಮ ಪರೀಕ್ಷಣೆ ಮತ್ತು ಅದರಿಂದ ಗಮನಕ್ಕೆ ಬಂದ ಅವರ ಆಧ್ಯಾತ್ಮಿಕ ವೈಶಿಷ್ಟ್ಯಗಳು

೧ ಅ. ಸನ್ಮಾನ ಸಮಾರಂಭವು ಪ್ರಾರಂಭವಾದ ತಕ್ಷಣ ವಾಯುಮಂಡಲದಲ್ಲಿ ಮಂಗಲಮಯ ಮತ್ತು ವಿಷ್ಣುತತ್ತ್ವದ ಸ್ಪಂದನಗಳ ಅರಿವಾಗುವುದು : ‘ಪೂ. ಆಚಾರಿಯವರ ಸಂತಪದವಿಯನ್ನು ಘೋಷಿಸುವ ಸಮಾರಂಭವು ಪ್ರಾರಂಭವಾದ ತಕ್ಷಣ ನನಗೆ ವಾತಾವರಣದಲ್ಲಿ ಮಂಗಲಮಯ (ಭಾವ + ಆನಂದ ಇವುಗಳ) ಸ್ಪಂದನಗಳು ಶೇ. ೭೦ ರಷ್ಟು ಮತ್ತು ವಿಷ್ಣುತತ್ತ್ವದ ಸ್ಪಂದನಗಳು ಶೇ. ೫೦ ರಷ್ಟು ಪ್ರಮಾಣದಲ್ಲಿ ಅರಿವಾಗತೊಡಗಿತು.

೧ ಅ ೧. ಪೂ. ಆಚಾರಿಯವರ ತಪಸಾಧನೆ ಪೂರ್ಣವಾಗಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾವ ಮತ್ತು ಆನಂದದ, ಅಂದರೆ ಮಂಗಲಮಯ ಸ್ಪಂದನಗಳು ಪ್ರಕ್ಷೇಪಿಸುವುದು : ಸಾಮಾನ್ಯವಾಗಿ ಉಪಾಸಕನು ತನ್ನ ಆನಂದಕ್ಕಾಗಿ ಸಾಧನೆಯನ್ನು ಮಾಡುತ್ತಿರುತ್ತಾನೆ. ಯಾವಾಗ ‘ಕೇವಲ ನನಗೆ ಆನಂದ ದೊರಕಬೇಕು’, ಎಂಬ ಸಕಾಮ ಉದ್ದೇಶದಿಂದ ಉಪಾಸಕನ ಸಾಧನೆಯಾಗುತ್ತದೆಯೋ, ಆ ಸಮಯದಲ್ಲಿ ಅದು ಶಕ್ತಿ ಮತ್ತು ಭಾವದ ಸ್ತರದಲ್ಲಿರುತ್ತದೆ. ಅನೇಕ ತಪಗಳು (ಒಂದು ತಪ, ಎಂದರೆ ಹನ್ನೆರಡು ವರ್ಷ) ಉರುಳಿದ ನಂತರ ಭಕ್ತನ ಸಾಧನೆಯು ‘ಸ್ವ’ ಆನಂದಕ್ಕಾಗಿರದೇ ನಿಷ್ಕಾಮದ ಕಡೆಗೆ ಹೊರಳುತ್ತದೆ. ಆ ಸಮಯದಲ್ಲಿ ‘ಸಾಧನೆಯಿಂದ ಏನಾದರೂ ಸಿಗಬೇಕು’, ಎಂಬ ಅಪೇಕ್ಷೆಯನ್ನಿಡದೇ ‘ಸಾಧನೆ ಮಾಡುವುದು’, ಇದು ಆ ಸಾಧಕನ ವೃತ್ತಿಯಾಗುತ್ತದೆ. ಇದರಿಂದ ಅವನ ಸಾಧನೆಯೂ ‘ತಪಸಾಧನೆ’ ಆಗುತ್ತದೆ. ಇದನ್ನೇ ‘ತಪಸ್ಸು ಸಾರ್ಥಕವಾಯಿತು’, ಎನ್ನುತ್ತಾರೆ.

ಪೂ. ನಂದಾ ಆಚಾರಿ (ಗುರುಜಿ) ಇವರು ತಮ್ಮ ೧೪ ನೇ ವಯಸ್ಸಿನಿಂದ ಮೂರ್ತಿಕಲೆಯ ಮಾಧ್ಯಮದಿಂದ ಸಾಧನೆಯನ್ನು ಮಾಡುತ್ತಿದ್ದು ಈಗ ಅವರ ಸಾಧನೆ ನಿಷ್ಕಾಮ ಭಾವದಲ್ಲಿ ಸ್ಥಿರವಾಗಿದೆ. ತಪಸಾಧನೆ ಪೂರ್ಣವಾದ ನಂತರ ಉಪಾಸಕನಿಂದ ಕೃತಜ್ಞತಾಭಾವ ಮತ್ತು ಆನಂದ ಇವುಗಳ ಪ್ರಕ್ಷೇಪಣೆಯಾಗಲು ಪ್ರಾರಂಭವಾಗುತ್ತದೆ. ಇದರಿಂದ ಪೂ. ಆಚಾರಿಯವರ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಭಾವ ಮತ್ತು ಆನಂದ ಇವುಗಳ ಅಂದರೆ ಮಂಗಲಮಯದ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿದ್ದವು.

೧ ಅ ೨. ಮೂರ್ತಿಕಲೆಯು ಭಗವಾನ ಶ್ರೀವಿಷ್ಣುವಿಗೆ ಸಂಬಂಧಿಸಿರುವುದರಿಂದ ಕಾರ್ಯಕ್ರಮದಲ್ಲಿ ವಿಷ್ಣುತತ್ತ್ವ ಕಾರ್ಯನಿರತವಾಗುವುದು : ‘ನೃತ್ಯ ಮತ್ತು ಸಂಗೀತ ಇವುಗಳ ಉತ್ಪತ್ತಿ ಭಗವಾನ ಶಿವನಿಂದ, ಮೂರ್ತಿಕಲೆ ಮತ್ತು ನೃತ್ಯಕಲೆಗಳ ಉತ್ಪತ್ತಿ ಭಗವಾನ ಶ್ರೀವಿಷ್ಣುವಿನಿಂದ ಆಗಿದೆ.’ ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಮೂರ್ತಿಕಲೆಯ ಮಾಧ್ಯಮದಿಂದ ಪೂ. ಆಚಾರಿಯವರು ಭಗವಾನ ಶ್ರೀವಿಷ್ಣುವಿನ ಉಪಾಸನೆಯನ್ನೇ ಮಾಡಿದ್ದಾರೆ. ಆದ್ದರಿಂದ ವಾಯುಮಂಡಲದಲ್ಲಿ ವಿಷ್ಣುತತ್ತ್ವದ ಅರಿವಾಗುತ್ತಿತ್ತು. ‘ನೃತ್ಯ ಮತ್ತು ಸಂಗೀತ ಇವುಗಳ ಉತ್ಪತ್ತಿ ಭಗವಾನ ಶಿವನಿಂದ, ಮೂರ್ತಿಕಲೆ ಮತ್ತು ನೃತ್ಯಕಲೆಗಳ ಉತ್ಪತ್ತಿ ಭಗವಾನ ಶ್ರೀವಿಷ್ಣುವಿನಿಂದ ಆಗಿದೆ.’ ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.

೧ ಆ. ಪೂ. ಆಚಾರಿಯವರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ನಂತರ ಅವರ ಸುತ್ತಲೂ ಹಳದಿ ಬಣ್ಣದ ದೊಡ್ಡ ಪ್ರಭಾವಲಯ ಕಾಣುವುದು : ಪೂ. ಆಚಾರಿಯವರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದಾಗ ನನಗೆ ಅವರ ಸುತ್ತಲೂ ಹಳದಿ ಬಣ್ಣದ ತುಂಬಾ ದೊಡ್ಡ ಪ್ರಭಾವಲಯ ಕಾಣಿಸಿತು. ಇತರ ಸಂತರ ಸುತ್ತಲಿರುವ ಪ್ರಭಾವಲಯದ ತುಲನೆಯಲ್ಲಿ ಈ ಪ್ರಭಾವಲಯವು ಮೂರುಪಟ್ಟು ಹೆಚ್ಚಾಗಿತ್ತು.

೧ ಆ ೧. ಪೂ. ಆಚಾರಿಯವರ ಮೂರ್ತಿಕಲೆಯ ಮಾಧ್ಯಮದಿಂದ ತಪಸಾಧನೆ (ತಪಸ್ಸು) ಆಗುತ್ತಿರುವುದರಿಂದ ಅವರ ಸುತ್ತಲೂ ಇತರ ಸಂತರ ತುಲನೆಯಲ್ಲಿ ದೊಡ್ಡ ಪ್ರಭಾವಲಯ ಕಾಣಿಸುವುದು : ಪರಿಪೂರ್ಣ, ಭಾವಪೂರ್ಣ ಮತ್ತು ಫಲನಿಷ್ಪತ್ತಿಯುಕ್ತ ಸಾಧನೆ, ಅಂದರೆ ತಪಸ್ಸು. ತಪಸ್ಸಿನ ಸ್ಥೂಲ ಕೃತಿಯ ಮಾಧ್ಯಮದಿಂದ ಜೀವದ ದೇಹ, ಮನಸ್ಸು ಮತ್ತು ಬುದ್ಧಿಯ ತ್ಯಾಗವಾಗುತ್ತಿರುತ್ತದೆ ಮತ್ತು ಸೂಕ್ಷ್ಮದಿಂದ ಮನೋಲಯ ಹಾಗೂ ಬುದ್ಧಿಲಯವಾಗುತ್ತಿರುತ್ತದೆ. ಆದ್ದರಿಂದ ತಪಸಾಧನೆಗೆ ಅತ್ಯಂತ ಮಹತ್ವವಿದೆ. ಪೂ. ಆಚಾರಿಯವರ ಮೂರ್ತಿಯನ್ನು ನಿರ್ಮಿಸುವ ಸಾಧನೆಯು ಇದೇ ರೀತಿಯಾಗಿರುವುದರಿಂದ, ಅಂದರೆ ಮೂರ್ತಿಕಲೆಯ ಮಾಧ್ಯಮದಿಂದ ಅವರು ತಪಸಾಧನೆಯನ್ನೇ ಮಾಡುತ್ತಿರುವುದರಿಂದ ಅವರ ಸುತ್ತಲೂ ಇತರ ಸಂತರ ತುಲನೆಯಲ್ಲಿ ಮೂರುಪಟ್ಟು ಹೆಚ್ಚು ದೊಡ್ಡ ಪ್ರಭಾವಲಯ ನಿರ್ಮಾಣವಾಗಿದೆ.

೧ ಇ. ಆಚಾರಿಯವರ ಸಂದರ್ಶನ ನಡೆಯುತ್ತಿರುವಾಗ ಅವರು ಶೂನ್ಯಾವಸ್ಥೆಯಲ್ಲಿರುವುದು ಅರಿವಾಗುವುದು ಮತ್ತು ಅವರ ಮುಖದ ಕಡೆಗೆ ನೋಡಿದ ನಂತರ ಧ್ಯಾನ ತಗಲುವುದು : ಸನಾತನದ ಸಾಧಕಿ ಸೌ. ವಿದ್ಯಾ ವಿನಾಯಕ ಶಾನಭಾಗ ಇವರು ಕನ್ನಡ ಭಾಷೆಯಲ್ಲಿ ಪೂ. ಆಚಾರಿಯವರ ಸಂದರ್ಶನವನ್ನು ತೆಗೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ನನಗೆ ವೇದಿಕೆಯ ಮೇಲೆ ಕುಳಿತಿರುವ ಪೂ. ಆಚಾರಿಯವರ ಮುಖದ ಮೇಲೆ ಯಾವ ಚಲನವಲನಗಳ ಅರಿವಾಗುತ್ತಿರಲಿಲ್ಲ. ನನಗೆ ‘ಅವರು ಶೂನ್ಯಾವಸ್ಥೆಯಲ್ಲಿದ್ದಾರೆ’, ಎಂದೆನಿಸುತ್ತಿತ್ತು. ಸೌ. ಶಾನಭಾಗ ಇವರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲು ಕೆಲವು ಕ್ಷಣಗಳಿಗಾಗಿ ಅವರು ಶೂನ್ಯಾವಸ್ಥೆಯಿಂದ ಸಗುಣದಲ್ಲಿ ಬಂದರು. ಆ ಸಮಯದಲ್ಲಿ ಅವರ ಮುಖದ ಕಡೆಗೆ ನೋಡಿದಾಗ ನನ್ನ ಧ್ಯಾನ ತಗಲುತ್ತಿತ್ತು.

೧ ಇ ೧. ಮನಸ್ಸಿನ ಅಂತರ್ಮುಖತೆ-ಬಹಿರ್ಮುಖತೆ ಈ ವೃತ್ತಿಯಿಂದ ಪೂ. ಆಚಾರಿಯವರು ಸತತವಾಗಿ ಶೂನ್ಯಾವಸ್ಥೆಯಲ್ಲಿರುವುದು : ಯಾವಾಗ ನಿಷ್ಕಾಮ ಭಾವ ಮತ್ತು ಭಕ್ತಿ ಇದೇ ಸಾಧಕನ ನಿರಂತರ ಅವಸ್ಥೆಯಾಗಿರುತ್ತದೆಯೋ, ಆಗ ಅವನು ಭೂತಕಾಲ ಅಥವಾ ಭವಿಷ್ಯಕಾಲದ ವಿಚಾರಗಳಲ್ಲಿ ಮಗ್ನನಾಗಿರದೇ ಸತತವಾಗಿ ವರ್ತಮಾನಕಾಲದಲ್ಲಿರುತ್ತಾನೆ. ಈ ಸ್ಥಿತಿಯಲ್ಲಿ ಅವನ ಮನಸ್ಸಿನ ಅವಸ್ಥೆ ಅಂತರ್ಮುಖ-ಬಹಿರ್ಮುಖ (ಅಂತರ್ಮುಖ ಶೇ. ೭೦ ರಷ್ಟು ಮತ್ತು ಬಹಿರ್ಮುಖ ಶೇ. ೩೦ ರಷ್ಟು) ಹೀಗೆ ಇರುತ್ತದೆ. ಈ ಅವಸ್ಥೆಯಲ್ಲಿ ಸಾಧಕನ ಮನಸ್ಸು ಸತತ ಅನುಸಂಧಾನದಲ್ಲಿರುವುದರಿಂದ ಅವನ ಮುಖವು ನಿರ್ವಿಕಾರವಾಗಿರುತ್ತದೆ. ಪೂ. ಆಚಾರಿಯವರೂ ಇದೇ ಅವಸ್ಥೆಯಲ್ಲಿರುವುದರಿಂದ ಅವರ ಕಡೆಗೆ ನೋಡಿದಾಗ ಅವರು ಶೂನ್ಯಾವಸ್ಥೆಯಲ್ಲಿರುವುದು ಅರಿವಾಗುತ್ತದೆ ಮತ್ತು ಆ ಸಮಯದಲ್ಲಿ ಮನಸ್ಸು ಏಕಾಗ್ರವಾಗುವುದು, ಧ್ಯಾನ ತಗಲುವುದು ಇತ್ಯಾದಿ ಅನುಭೂತಿಗಳು ಬರುತ್ತವೆ.

೧ ಈ. ಪೂ. ಆಚಾರಿಯವರ ವಾಣಿಯಲ್ಲಿ ಮಾಧುರ್ಯದ ಅರಿವಾಗಿ ಅವರ ಮಾತುಗಳು ತಿಳಿಯದಿದ್ದರು ‘ಅದನ್ನು ಕೇಳುತ್ತಿರಬೇಕು’, ಎಂದೆನಿಸುವುದು : ಕನ್ನಡ ಭಾಷೆಯಲ್ಲಿ ಸಂದರ್ಶನ ನಡೆಯುತ್ತಿತ್ತು ಮತ್ತು ನನಗೆ ಕನ್ನಡ ಭಾಷೆ ಬರದಿರುವುದರಿಂದ ಅವರ ಮಾತುಗಳು ಸ್ವಲ್ಪಮಟ್ಟಿಗೆ ತಿಳಿಯುತ್ತಿತ್ತು. ಆದರೂ ನನಗೆ ಪೂ. ಆಚಾರಿಯವರು ಮಾತನಾಡುವಾಗ ‘ಅವರ ಮಾತುಗಳನ್ನು ಕೇಳುತ್ತಲೇ ಇರಬೇಕು’, ಎಂದೆನಿಸುತ್ತಿತ್ತು. ‘ಅವರ ವಾಣಿಯಲ್ಲಿ ಮಾಧುರ್ಯವಿದೆ’, ಎಂದೆನಿಸಿತು.

೧ ಈ ೧. ಪೂ. ಆಚಾರಿಯವರಲ್ಲಿನ ಪ್ರೀತಿ ಮತ್ತು ಅಲ್ಪ ಅಹಂ ಈ ಗುಣಗಳಿಂದ ಅವರ ವಾಣಿಯಲ್ಲಿ ಮಾಧುರ್ಯ ನಿರ್ಮಾಣವಾಗಿ ‘ಅವರ ಮಾತುಗಳನ್ನು ಕೇಳುತ್ತಿರಬೇಕು’, ಎಂದೆನಿಸುವುದು : ಯಾರಾದರೊಬ್ಬ ವಕ್ತಾರರು ಇತರರನ್ನು ಕಲಿಸುವ ದೃಷ್ಟಿಯಲ್ಲಿ ಅಥವಾ ಜನಪ್ರಿಯತೆಯಿಂದ ಮಾತನಾಡುತ್ತಿರುತ್ತಾನೆಯೋ, ಆ ಸಮಯದಲ್ಲಿ ಅವನ ಸ್ವಭಾವದೋಷ ಮತ್ತು ಅಹಂ ಜಾಗೃತವಾಗಿರುವುದರಿಂದ ‘ಅವನ ಮಾತುಗಳನ್ನು ಕೇಳಬಾರದು’, ಎಂದೆನಿಸುತ್ತದೆ. ತದ್ವಿರುದ್ಧ ಯಾವಾಗ ಜೀವದಲ್ಲಿ ಅಹಂ ಕಡಿಮೆ ಇರುತ್ತದೆಯೊ ಮತ್ತು ಇತರರ ಬಗ್ಗೆ ಪ್ರೀತಿ ಇರುತ್ತದೆಯೋ, ಆ ಸಮಯದಲ್ಲಿ ‘ದೇವರು ತೋರಿದ ಕೃಪೆ ಮತ್ತು ದೇವರ ಕೃಪೆಯಿಂದ ಬಂದ ಅನುಭೂತಿ’, ಎಂಬ ಭಾವದಿಂದ ಅವನು ತನ್ನ ನಿರೂಪಣೆಯನ್ನು ನಿರೂಪಿಸುತ್ತಿರುತ್ತಾನೆ. ಇಂತಹ ನಿರೂಪಣೆಯಲ್ಲಿ ಜೀವದ ಅಸ್ತಿತ್ವವು ಕಡಿಮೆಯಾಗಿರುವುದರಿಂದ ಅದರಲ್ಲಿ ಅಧ್ಯಾತ್ಮದ ಬೋಧನೆ ಅಡಗಿರುತ್ತದೆ. ಆದ್ದರಿಂದ ‘ಇಂತಹ ಜೀವಗಳ ನಿರೂಪಣೆಯನ್ನು ಕೇಳುತ್ತಿರಬೇಕು’, ಎಂದೆನಿಸುತ್ತದೆ. ಪೂ. ಆಚಾರಿಯವರ ಸಂದರ್ಶನದಲ್ಲಿಯೂ ಇಂತಹ ಪ್ರಕ್ರಿಯೆ ಘಟಿಸುತ್ತಿತ್ತು. ಅವರಲ್ಲಿ ಅಹಂ ಕಡಿಮೆ ಇರುವುದರಿಂದ ಮತ್ತು ಅವರು ತಮ್ಮ ಅನುಭವಗಳನ್ನು ಕೃತಜ್ಞತಾಭಾವದಿಂದ ಹೇಳುತ್ತಿರುವುದರಿಂದ ‘ಅವರ ಮಾತುಗಳನ್ನು ಕೇಳುತ್ತಿರಬೇಕು’, ಎಂದೆನಿಸುತ್ತಿತ್ತು. ಅವರಲ್ಲಿನ ಚೈತನ್ಯ ಮತ್ತು ಸಾಧಕರ ಬಗ್ಗೆ ಇರುವ ಪ್ರೀತಿಯಿಂದ ಅವರ ವಾಣಿಯಲ್ಲಿ ಮಾಧುರ್ಯ ಬಂದಿದೆ.

– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಿಂದ ದೊರಕಿದ ಜ್ಞಾನ, ಆಧ್ಯಾತ್ಮಿಕ ಮಟ್ಟ ಶೇ. ೬೨), ಸನಾತನ ಆಶ್ರಮ, ರಾಮನಾಥಿ, ಗೋವಾ. (ಮುಂದುವರಿಯುವುದು)

ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು