ಕಾರವಾರದ ಪಂಚಶಿಲ್ಪಕಾರ ಪೂ. ನಂದಾ ಆಚಾರಿ (ಗುರುಜಿ) ಇವರ ಸಂತಪದವಿಯಲ್ಲಿ ವಿರಾಜಮಾನರಾಗುವ ಸಮಾರಂಭದಲ್ಲಿ ಶ್ರೀ. ನಿಷಾದ ದೇಶಮುಖ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ಪೂ. ನಂದಾ ಆಚಾರಿ (ಗುರೂಜಿ)

ಕಾರವಾರದಲ್ಲಿನ ಪಂಚಶಿಲ್ಪಕಾರರಾದ ಪೂ. ನಂದಾ ಆಚಾರಿ (ಗುರುಜಿ) ೩.೧೧.೨೦೨೨ ರಂದು ಸಂತಪದವಿಯಲ್ಲಿ ವಿರಾಜಮಾನರಾದರು. ಸನಾತನದ ಸೂಕ್ಷ್ಮ ಜ್ಞಾನಪ್ರಾಪ್ತವನ್ನು ಮಾಡಿಕೊಳ್ಳುವ ಸಾಧಕರಾದ ಶ್ರೀ. ನಿಷಾದ ದೇಶಮುಖ (ಆಧ್ಯಾತ್ಮಿಕ ಮಟ್ಟ ಶೇ. ೬೨ ರಷ್ಟು) ಇವರು ಪೂ. ನಂದಾ ಆಚಾರಿ ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳ ಕುರಿತು ಶ್ರೀ. ನಿಷಾದ ಇವರಿಗೆ ಲಭಿಸಿದ ಈಶ್ವರೀ ಜ್ಞಾನದ ಸಂಬಂಧಿತ ಅಂಶಗಳನ್ನು ೨೪/೨೧ ರಲ್ಲಿ ನೋಡಿದೆವು ಇಂದು ಅದರ ಮುಂದಿನ ಭಾಗ ನೋಡೋಣ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/80044.html
ಶ್ರೀ. ನಿಷಾದ ದೇಶಮುಖ

೨. ಪೂ. ನಂದಾ ಆಚಾರಿ (ಗುರುಜಿ) ಇವರ ಸಾಧನಾ ಪ್ರವಾಸಕ್ಕೆ ಸಂಬಂಧಿಸಿದಂತೆ ಈಶ್ವರನು ನೀಡಿದ ಜ್ಞಾನ !

೨ ಅ. ಗುರುಕೃಪೆಯಿಂದ ಸಾಧನೆಗಾಗಿ ಜನ್ಮವನ್ನು ಪಡೆಯುವ ಜೀವ : ಪೂ. ಆಚಾರಿ ಇವರ ಆಧ್ಯಾತ್ಮಿಕ ಮಟ್ಟವು ಜನ್ಮದಿಂದಲೇ ಶೇ. ೫೫ ಕ್ಕಿಂತ ಹೆಚ್ಚಿತ್ತು. ಪೂರ್ವಜನ್ಮದ ಸಾಧನೆಯಿಂದಾಗಿ ಅವರು ಶಿಷ್ಯ ಮಟ್ಟದ್ದಲ್ಲಿದ್ದರು. ಆದುದರಿಂದ ಅವರ ಮೇಲೆ ಭೌತಿಕ ಮಾಯೆಯ ಪರಿಣಾಮವಾಗದೇ ಅವರು ೧೪ ನೇ ವಯಸ್ಸಿನಿಂದ ಮೂರ್ತಿಕಲೆಯನ್ನು ಕಲಿಯುವ ಮಾಧ್ಯಮದಿಂದ ಸಾಧನೆ ಮಾಡಲು ಆರಂಭಿಸಿದರು.

೨ ಆ. ಪೂ. ಆಚಾರಿ ಇವರ ಆಂತರಿಕ ಸಾಧನೆಯಿಂದ ಅವರ ಗುರುಗಳು ತಾವಾಗಿಯೇ ಅವರ ಜೀವನದಲ್ಲಿ ಬರುವುದು : ಜನ್ಮದಿಂದಲೇ ಪ್ರತಿಯೊಂದು ಜೀವಕ್ಕೆ ‘ಅವನು ಯಾವ ಮಾರ್ಗದಿಂದ ಸಾಧನೆಯನ್ನು ಮಾಡಿದರೆ, ಅವನ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ, ಎಂಬ ಅರಿವಿರುತ್ತದೆ. ಮಾಯೆಯ ಆವರಣದಿಂದ ಹೆಚ್ಚಿನ ಜನರಲ್ಲಿ ಈ ಅರಿವು ಸುಪ್ತವಾಗಿರುತ್ತದೆ ಮತ್ತು ಸಾಧನೆಯಿಂದಾಗಿ ಅತಿ ಕಡಿಮೆ ಜನರಲ್ಲಿ ಈ ಅರಿವು ಕಾರ್ಯನಿರತವಿರುತ್ತದೆ. ಪೂ. ಆಚಾರಿ ಇವರು ತಮ್ಮ ಜೀವನದ ಧ್ಯೇಯವನ್ನು ಸ್ಮರಣೆಯಲ್ಲಿಟ್ಟುಕೊಳ್ಳುವವರಾಗಿದ್ದರು. ‘ಕಲೆಯ ಮಾಧ್ಯಮದಿಂದ ಆಧ್ಯಾತ್ಮಿಕ ಉನ್ನತಿಯಾಗುವುದು, ಎಂಬ ಅರಿವು ಇರುವುದರಿಂದ ೧೪ ನೇ ವಯಸ್ಸಿನಿಂದ ಅವರು ಮೂರ್ತಿಕಲೆಯನ್ನು ಕಲಿಯಲು ಆರಂಭಿಸಿದರು. ಇದರಿಂದ ಅವರ ಆಂತರಿಕ ಸಾಧನೆ ನಡೆದುದರಿಂದ ಅಧ್ಯಾತ್ಮದಲ್ಲಿ ಅಪೇಕ್ಷಿತವಿದ್ದಂತೆ ಅವರು ತಾವಾಗಿಯೇ ಗುರುಗಳ ಕಡೆಗೆ ಹೋಗಲಿಲ್ಲ ಅಥವಾ ಅವರು ತಮ್ಮ ಮನಸ್ಸಿಗನುಸಾರ ಗುರುಗಳನ್ನು ಮಾಡಿಕೊಳ್ಳಲಿಲ್ಲ. ಪೂ. ಆಚಾರಿ ಇವರ ಆಂತರಿಕ ಸಾಧನೆ ಮತ್ತು ತಳಮಳಕ್ಕೆ ಪ್ರಸನ್ನಗೊಂಡು ಅವರಿಗೆ ಸ್ಥೂಲದಲ್ಲಿ ಮತ್ತು ಸೂಕ್ಷ್ಮದಲ್ಲಿ ಮಾರ್ಗದರ್ಶನ ಮಾಡಲು ಸಕ್ಷಮವಿರುವ ದತ್ತಸ್ವರೂಪ ಗುರು ಶ್ರೀ ಬಾಬಾ ಮಹಾರಾಜರು ತಾವಾಗಿಯೇ ಅವರ ಜೀವನದಲ್ಲಿ ಬಂದರು. ಇದರಿಂದ ಪೂ. ಆಚಾರಿ ಇವರ ಆಂತರಿಕ ತಳಮಳ ಮತ್ತು ಶಿಷ್ಯವೃತ್ತಿ ಗಮನಕ್ಕೆ ಬರುತ್ತದೆ.

೨ ಇ. ಜನ್ಮದಿಂದಲೇ ಭಾವವಿರುವುದರಿಂದಾಗಿ ಪೂ. ಆಚಾರಿ ಇವರು ಗುರುಗಳಿಂದ ಸೂಕ್ಷ್ಮ ಸ್ತರದ ಜ್ಞಾನ, ಅಂದರೆ ಅಧ್ಯಾತ್ಮವನ್ನು ಕಲಿಯುವುದು : ಶಿಷ್ಯನಿಗೆ ಲಭಿಸಿದ ಗುರುಗಳ ಆಧ್ಯಾತ್ಮಿಕ ಮಟ್ಟವು ಚೆನ್ನಾಗಿರುತ್ತದೆ; ಆದರೆ ಪ್ರತಿಯೊಬ್ಬ ಶಿಷ್ಯನ ಆಧ್ಯಾತ್ಮಿಕ ಸ್ಥಿತಿ ಚೆನ್ನಾಗಿಯೇ ಇರುತ್ತದೆ, ಎಂದೇನಿಲ್ಲ. ವಿಶೇಷವಾಗಿ ಕಲೆಯನ್ನು ಕಲಿತ ಹೆಚ್ಚಿನ ಸಾಧಕ-ಕಲಾವಿದರ ಒಲವು ಸ್ಥೂಲ ಸ್ತರದ ಕಲೆಯನ್ನು ಕಲಿಯುವ ಕಡೆಗೆ ಇರುತ್ತದೆ. ಕಲೆಯೊಂದಿಗೆ ಅಂತರಂಗದ ಸಾಧನೆ ಅಥವಾ ಸೂಕ್ಷ್ಮದಲ್ಲಿನ ಭಾಗವನ್ನು ಅವರು ಕಲಿಯುವುದಿಲ್ಲ. ಗುರುಗಳಿಗೆ ವಿವಿಧ ಲೀಲೆಗಳನ್ನು ಮಾಡಿ ಅನುಭೂತಿಗಳ ಮೂಲಕ ಇಂತಹ ಶಿಷ್ಯರಿಗೆ ಮನಸ್ಸು ಮತ್ತು ಬುದ್ಧಿಯ ಆಚೆಗಿನ ಅಧ್ಯಾತ್ಮದ ಪರಿಚಯ ಮಾಡಿಕೊಡಬೇಕಾಗುತ್ತದೆ. ಹೀಗಿದ್ದರೂ ತೀರಾ ಕಡಿಮೆ ಶಿಷ್ಯರು ಗುರುಗಳಿಂದ ಸೂಕ್ಷ್ಮದಲ್ಲಿನ ಜ್ಞಾನವನ್ನು ಕಲಿಯುತ್ತಾರೆ. ಇಂತಹ ಉತ್ತಮ ಶಿಷ್ಯರಲ್ಲಿ ಒಬ್ಬರೆಂದರೆ ಪೂ. ಆಚಾರಿ !

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.