ಪೂಜೆಯಲ್ಲಿನ ನಿರ್ಮಾಲ್ಯದ ಮಹತ್ವ ಮತ್ತು ಅದರಲ್ಲಿ ಚೈತನ್ಯ ಉಳಿಯುವ ಕಾಲಾವಧಿ

ವರ್ಷ ೨೦೦೨ ರಲ್ಲಿ ಪ.ಪೂ. ಡಾ. ಆಠವಲೆಯವರ ಚರಣಗಳ ಮೇಲೆ ಅರ್ಪಿಸಿದ ಮತ್ತು ಪೂ. ಫಡಕೆ ಅಜ್ಜಿಯವರು ಜೋಪಾನಮಾಡಿಟ್ಟ ಹೂವುಗಳು (ಹೂವುಗಳು ಈಗಲೂ ತಾಜಾ ಕಾಣಿಸುತ್ತವೆ.)

‘ಪೂಜೆಯಲ್ಲಿ ದೇವತೆಗೆ ಅರ್ಪಿಸಿದ ಹೂವುಗಳಲ್ಲಿ ದೇವತೆಯ ಚಿತ್ರ ಅಥವಾ ಪ್ರತಿಮೆಯಿಂದ ಪ್ರಕ್ಷೇಪಿಸುವ ಚೈತನ್ಯ ಆಕರ್ಷಿಸುತ್ತದೆ. ಆದ್ದರಿಂದ ಉತ್ತರಪೂಜೆಯ ನಂತರ ದೇವತೆಗೆ ಅರ್ಪಿಸಿದ ಹೂವುಗಳನ್ನು ಪೂಜಕರು ವಾಸನೆ ತೆಗೆದುಕೊಂಡು (ಮೂಸಿ ನೋಡಿ) ನಂತರ ಬದಿಗೆ ಇಡಬೇಕೆಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡಿದರೆ ಪೂಜಕನಿಗೆ ನಿರ್ಮಾಲ್ಯದಲ್ಲಿನ ಚೈತನ್ಯವನ್ನು ಅದರ ಪರಿಮಳದ ಮೂಲಕ ಗ್ರಹಿಸಲು ಸಾಧ್ಯವಾಗುತ್ತದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ದೇವರ ಪೂಜೆಯನ್ನು ಮಾಡಿದರು. ಅವರು ದೇವರಿಗೆ ಅರ್ಪಿಸಿದ ಹೂವುಗಳು ನಿರ್ಮಾಲ್ಯದಲ್ಲಿ ರೂಪಾಂತರವಾದವು. ಪೂಜೆಯ ನಂತರ ಕ್ರಮೇಣ ಹೂವುಗಳು ಬಾಡುತ್ತವೆ; ಆದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳರು ಮಾಡಿದ ಪೂಜೆಯಲ್ಲಿನ ನಿರ್ಮಾಲ್ಯದಲ್ಲಿ ಕೋಷ್ಟಕದಲ್ಲಿ ತೋರಿಸಿದಂತೆ ಸಗುಣ ಚೈತನ್ಯದ ಪ್ರಮಾಣ ಐದು ದಿನಗಳವರೆಗೆ ಹೆಚ್ಚಾಗುತ್ತಾ ಹೋಯಿತು. ಇದು ಹೇಗೆ ? ನಿರ್ಮಾಲ್ಯದಲ್ಲಿ ಆಕರ್ಷಿಸಲ್ಪಟ್ಟ ಸಗುಣ ಚೈತನ್ಯದ

ಪ್ರಮಾಣ ಮತ್ತು ಚೈತನ್ಯ ಉಳಿದುಕೊಳ್ಳುವ ಕಾಲಾವಧಿ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸನಾತನದ ರಾಮನಾಥಿ ಆಶ್ರಮದಲ್ಲಿ ಮಾಡಿದ ಭಾವಪೂರ್ಣ ಪೂಜೆಯಿಂದ ನಿರ್ಮಾಲ್ಯದಲ್ಲಿ ಆಕರ್ಷಿಸಲ್ಪಟ್ಟ ಸಗುಣ ಚೈತನ್ಯದ ಪ್ರಮಾಣ ಹೆಚ್ಚಾಗುತ್ತಾ ಹೋಯಿತು. ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿನ ಅಪಾರ ಭಕ್ತಿಭಾವದಿಂದ ಪೂಜೆಯ ನಿರ್ಮಾಲ್ಯದಲ್ಲಿನ ಚೈತನ್ಯವು ೫ ದಿನಗಳವರೆಗೆ ಉಳಿದು ಕೊಂಡಿತು, ಎಂದು ನನಗೆ ಅರಿವಾಯಿತು. ಸಾಮಾನ್ಯ ವ್ಯಕ್ತಿ ಮಾಡಿದ ಪೂಜೆಯ ನಿರ್ಮಾಲ್ಯದಲ್ಲಿನ ಸಗುಣ ಚೈತನ್ಯ ಕಡಿಮೆಯಾಗುತ್ತಾ ಹೋಗುತ್ತದೆ.

ಪ.ಪೂ. ವಿಮಲ ಫಡಕೆಅಜ್ಜಿ

೨. ನಿರ್ಗುಣ ಚೈತನ್ಯ ಆಕರ್ಷಿಸುವುದರಿಂದ ನಿರ್ಮಾಲ್ಯವು ದೀರ್ಘಕಾಲದವರೆಗೆ ತಾಜಾ ಉಳಿಯುವುದು

ನಿರ್ಮಾಲ್ಯವು ಹೆಚ್ಚೆಂದರೆ ಶೇ. ೩೦ ರಷ್ಟು ಸಗುಣ ಚೈತನ್ಯವನ್ನು ಆಕರ್ಷಿಸುತ್ತದೆ ಮತ್ತು ಅದರ ಪರಿಣಾಮ ಪೂಜೆಯ ನಂತರ ಹೆಚ್ಚೆಂದರೆ ಐದು ದಿನಗಳವರೆಗೆ ಉಳಿಯುತ್ತದೆ. ಕೆಲವೊಮ್ಮೆ ಪೂಜೆಯಲ್ಲಿ ದೇವತೆಗೆ ಅರ್ಪಿಸಿದ ಅಥವಾ ಯಾರಾದರೊಬ್ಬ ಸಂತರಿಗೆ ಅರ್ಪಿಸಿದ ಹೂವುಗಳು ಅಥವಾ ಹೂವುಗಳ ಮಾಲೆಯಲ್ಲಿ ನಿರ್ಗುಣ ಚೈತನ್ಯ ಆಕರ್ಷಿತವಾಗುತ್ತದೆ. ಆಗ ಹೂವುಗಳಲ್ಲಿನ ಚೈತನ್ಯವು ಐದು ದಿನಗಳಿಗಿಂತ ಹೆಚ್ಚು ಕಾಲ ಉಳಿಯುತ್ತದೆ. ಉದಾ. ೨೦೦೨ ರಲ್ಲಿ ಪ.ಪೂ. ಡಾಕ್ಟರ ಆಠವಲೆಯವರ ಚರಣಗಳ ಮೇಲೆ ಅರ್ಪಿಸಿದ ಹೂವುಗಳನ್ನು ಪೂ. ಫಡಕೆಅಜ್ಜಿಯವರು ಆವಾಗಿನಿಂದ ಜೋಪಾನಮಾಡಿ ಇಟ್ಟಿದ್ದರು. ಅವು ಈಗಲೂ ತಾಜಾ ಆಗಿವೆ; ಏಕೆಂದರೆ ಅವರಲ್ಲಿನ ಭಾವದಿಂದ ಆ ಹೂವುಗಳಲ್ಲಿ ಶ್ರೀವಿಷ್ಣುವಿನ ನಿರ್ಗುಣ ಚೈತನ್ಯ ಕಾರ್ಯನಿರತವಾಗಿದೆ.

ಕು. ಮಧುರಾ ಭೋಸಲೆ

೩. ನಿರ್ಮಾಲ್ಯವನ್ನು ಆಧ್ಯಾತ್ಮಿಕ ಉಪಾಯಕ್ಕಾಗಿ ಉಪಯೋಗಿಸುವ ಕಾಲಾವಧಿ 

ನಿರ್ಮಾಲ್ಯದಲ್ಲಿ ಚೈತನ್ಯ ಉಳಿದಿರುವ ಸರ್ವೋತ್ತಮ ಲಕ್ಷಣವೆಂದರೆ ನಿರ್ಮಾಲ್ಯವು ತಾಜಾ ಆಗಿರುವುದು (ಹೂವುಗಳು ಬಾಡದಿರುವುದು). ಆದ್ದರಿಂದ ನಿರ್ಮಾಲ್ಯವು (ಹೂವು ಅಥವಾ ಮಾಲೆ) ಎಲ್ಲಿಯವರೆಗೆ ತಾಜಾ ಆಗಿರುತ್ತದೆಯೋ, ಅಲ್ಲಿಯವರೆಗೆ ಅದರಲ್ಲಿ ಚೈತನ್ಯ ಉಳಿದಿರುವುದರಿಂದ ಆ ನಿರ್ಮಾಲ್ಯವನ್ನು ಆಧ್ಯಾತ್ಮಿಕ ಉಪಾಯಕ್ಕಾಗಿ ಉಪಯೋಗಿಸಬಹುದು. ಸಾಮಾನ್ಯ ವ್ಯಕ್ತಿಯು ಮಾಡಿದ ಪೂಜೆಯಲ್ಲಿನ ಹೂವುಗಳು ಹೆಚ್ಚೆಂದರೆ ೧ ದಿನ ತಾಜಾ ಇರುವುದರಿಂದ ಅವನ ಪೂಜೆಯಲ್ಲಿನ ನಿರ್ಮಾಲ್ಯವನ್ನು ಆಧ್ಯಾತ್ಮಿಕ ಉಪಾಯಕ್ಕಾಗಿ ಕೇವಲ ೧ ದಿನ ಉಪಯೋಗಿಸಬಹುದು. ಸಂತರು ಅಥವಾ ಸದ್ಗುರುಗಳು ಪೂಜೆಯನ್ನು ಮಾಡಿದ ನಿರ್ಮಾಲ್ಯದಲ್ಲಿನ ಚೈತನ್ಯವು ಹೆಚ್ಚು ಸಮಯ ಉಳಿಯುವುದರಿಂದ ಅದನ್ನು ೧ ರಿಂದ ೫ ದಿನಗಳವರೆಗೆ, ಅಂದರೆ ಎಲ್ಲಿಯವರೆಗೆ ಆ ನಿರ್ಮಾಲ್ಯವು ತಾಜಾ ಉಳಿಯತ್ತದೆಯೋ, ಅಲ್ಲಿಯವರೆಗೆ ಉಪಯೋಗಿಸಬಹುದು.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಲಭಿಸಿದ ಜ್ಞಾನ), (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೪) ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೨.೨೦೨೦ ರಾತ್ರಿ ೧೦.೪೦)

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು