ಭಾರತ-ಶ್ರೀಲಂಕಾ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಹೆಜ್ಜೆ ! – ಪ್ರಧಾನಿ ಮೋದಿ

ತಮಿಳುನಾಡಿನ ನಾಗಪಟ್ಟಣಂ ಮತ್ತು ಶ್ರೀಲಂಕಾದ ಕಾಂಕೆಸಂತುರೈ ನಡುವೆ ಫೆರಿ (ಬೋಟ್) ಸೇವೆ ಆರಂಭಿಸಲಾಗಿದೆ. ಈ ಸೇವೆಯಡಿ ಪ್ರತಿ ವ್ಯಕ್ತಿಗೆ 7 ಸಾವಿರದ 670 ರೂಪಾಯಿ ದರ ನಿಗದಿಪಡಿಸಲಾಗಿದೆ.

ಚೆನ್ನೈ (ತಮಿಳುನಾಡು) ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮಸೀದಿಯ ನಾಮಫಲಕ ತೆರವು !

ಅನಧಿಕೃತವಾಗಿ ಮಸೀದಿ ನಿರ್ಮಾಣವಾಗುತ್ತಿರುವಾಗ ಪೊಲೀಸರು ಮತ್ತು ಆಡಳಿತ ಮಲಗಿತ್ತೇ ? ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರಮುಕ (ದ್ರವಿಡ ಮುನ್ನೇತ್ರ ಕಳಘಂ – ದ್ರವಿಡ ಪ್ರಗತಿ ಸಂಘ) ಸರಕಾರ ಈ ಕಡೆ ಗಮನಹರಿಸಿ, ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆಯಿದೆ ಎನ್ನುವುದೂ ಅಷ್ಟೇ ಸತ್ಯ !

ಸನಾತನ ಧರ್ಮವನ್ನು ನಾಶಗೊಳಿಸುವ ಬಗ್ಗೆ ಮಾತನಾಡುವ ಉದಯನಿಧಿಯ ಸಹೋದರಿಯಿಂದ ದೇವಸ್ಥಾನಕ್ಕೆ ಹೋಗಿ ದರ್ಶನ !

ತಮಿಳನಾಡುವಿನ ಮುಖ್ಯಮಂತ್ರಿ ಎಮ್.ಕೆ. ಸ್ಟ್ಯಾಲಿನ್‌ ಇವರ ಮಗಳು ಸೇಂಥಮರೈ ಸ್ಟ್ಯಾಲಿನ್ ಇವರು ಮಯಿಲಾದುಥುರೈ ಜಿಲ್ಲೆಯ ಸತ್ತೈನಾಥರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು.

ತಮಿಳುನಾಡಿನಲ್ಲಿ ಪಾದ್ರಿಯಿಂದ ಲೈಂಗಿಕ ದೌರ್ಜನ್ಯ ಮಹಿಳೆಯಿಂದ ಆತ್ಮಹತ್ಯೆಗೆ ಪ್ರಯತ್ನ !

ತಿರುನೇಲವೇಲಿ ಇಲ್ಲಿ ೪೦ ವರ್ಷದ ಮಹಿಳೆಯ ಮೇಲೆ ಜಗನ್ ಎಂಬ ಪಾದ್ರಿಯೂ ಲೈಂಗಿಕ ದೌರ್ಜನ್ಯ ಮಾಡಿದ್ದರಿಂದ ಆತ್ಮಹತ್ಯೆ ಮಾಡಲು ಪ್ರಯತ್ನ ಮಾಡಿರುವ ಘಟನೆ ನಡೆದಿದೆ. ಈ ಮಹಿಳೆ ನಿದ್ರೆಯ ೪೦ ಮಾತ್ರೆ ತೆಗೆದುಕೊಂಡಿದ್ದಳು.

31 ವರ್ಷಗಳ ಹಿಂದೆ ದಾಳಿಯ ಹೆಸರಿನಲ್ಲಿ ಅನ್ಯಾಯ ಮತ್ತು ಬಲಾತ್ಕಾರ ನಡೆಸಿದ ತಮಿಳುನಾಡಿನ 215 ಅಧಿಕಾರಿಗಳಿಗೆ ಶಿಕ್ಷೆ

ಶ್ರೀಗಂಧದ ಕಳ್ಳಸಾಗಣೆದಾರರ ವಿರುದ್ಧ ಕ್ರಮ ನಡೆಸುವ ಹೆಸರಿನಲ್ಲಿ ಒಂದು ವಸಾಹತುವಿನ ಮೇಲೆ ನಡೆದ ದಾಳಿಯ ಸಮಯದಲ್ಲಿ ಜನರ ಮೇಲೆ ಬಲಾತ್ಕಾರ ನಡೆಸಿರುವ ಮತ್ತು 18 ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿರುವ ಅಪರಾಧಕ್ಕಾಗಿ ಮದ್ರಾಸ್ ಉಚ್ಚನ್ಯಾಯಾಲಯವು 215 ಸರಕಾರಿ ಅಧಿಕಾರಿಗಳಿಗೆ ಶಿಕ್ಷೆಯನ್ನು ವಿಧಿಸಿದೆ.

ನನ್ನ ಚಲನಚಿತ್ರದ ಹಿಂದಿ ಆವೃತ್ತಿಯ ಪ್ರಮಾಣ ಪತ್ರಕ್ಕಾಗಿ ಆರೂವರೆ ಲಕ್ಷ ರೂಪಾಯಿ ಲಂಚ ನೀಡಬೇಕಾಯಿತು ! – ತಮಿಳ ನಟ ವಿಶಾಲ್

ತಮಿಳುನಾಡಿನ ನಟ ವಿಶಾಲ್ ಇವರು ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿಯ ಮುಂಬಯಿಯಲ್ಲಿನ ಅಧಿಕಾರಿಗಳ ಮೇಲೆ ಅವರ ಚಲನಚಿತ್ರದ ಹಿಂದಿ ಆವೃತ್ತಿಗೆ ಪ್ರಮಾಣ ಪತ್ರ ನೀಡುವುದಕ್ಕಾಗಿ ಆರುವರೆ ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪ ಮಾಡಿದ್ದಾರೆ.

ಪುದುಚೆರಿಯಲ್ಲಿ ಭಾಜಪದ ೨ ಶಾಸಕರು ಕಬಳಿಸಿದ್ದ ದೇವಸ್ಥಾನದ ಜಮೀನು ಹಿಂತಿರುಗಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ನ್ಯಾಯಾಲಯವು ಈ ಕುರಿತು ರಾಜ್ಯದ ತನಿಖಾ ಇಲಾಖೆಯಿಂದ ಈ ಪ್ರಕರಣದ ಮತ್ತು ಇದರಲ್ಲಿ ಸಹಭಾಗಿಯಾಗಿರುವ ಜನಪ್ರತಿನಿಧಿಗಳ ಭ್ರಷ್ಟಾಚಾರ ನಿರ್ಮೂಲನೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶ ಕೂಡ ನೀಡಿದೆ.

‘ಸನಾತನ ಧರ್ಮದ ಬಗ್ಗೆ ಮಾತನಾಡಿರುವುದರಿಂದ ಓರ್ವ ಹುಡುಗನನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ! (ಅಂತೆ) – ನಟ ಕಮಲ ಹಾಸನ

ಉದಯನಿಧಿ ಇವರು ಉದ್ದೇಶಪೂರ್ವಕವಾಗಿ ಸನಾತನ ಧರ್ಮವನ್ನು ನಾಶ ಮಾಡುವ ಮಾತನಾಡಿರುವುದರಿಂದ ಅವರನ್ನು ಟೀಕಿಸಲಾಗುತ್ತಿದೆ, ಇದನ್ನು ಕಮಲ ಹಾಸನ ಇವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ !

ತಮಿಳುನಾಡಿನಲ್ಲಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಶ್ರೀ ಗಣೇಶಮೂರ್ತಿಗಳ ತಯಾರಿಕೆಗೆ ನಿಷೇಧ ಖಾಯಂ !

ತಮಿಳುನಾಡುವಿನಲ್ಲಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಶ್ರೀ ಗಣೇಶಮೂರ್ತಿಗಳ ತಯಾರಿಕೆಯ ಮೇಲಿನ ನಿಷೇಧ ಮುಂದುವರೆಯಲಿದೆ, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿತು. ಮದ್ರಾಸ್ ಉಚ್ಚ ನ್ಯಾಯಾಲಯವು ಈ ಹಿಂದೆ ಇದನ್ನು ನಿಷೇಧಿಸಿತ್ತು.

ಸನಾತನ ಧರ್ಮವು ಶಾಶ್ವತ ಕರ್ತವ್ಯಗಳ ಸಮೂಹವಾಗಿದ್ದರಿಂದ ಅದರ ನಾಶ ಮಾಡುವುದೆಂದರೆ ಕರ್ತವ್ಯಗಳನ್ನು ನಾಶ ಮಾಡಿದಂತೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಸನಾತನ ಧರ್ಮವು ಶಾಶ್ವತ ಕರ್ತವ್ಯಗಳ ಸಮೂಹವಾಗಿದೆ. ಇದರಲ್ಲಿ ದೇಶ, ರಾಜ, ತಾಯಿ, ತಂದೆ ಮತ್ತು ಗುರುಗಳ ಬಗ್ಗೆ ಕರ್ತವ್ಯಗಳ ಜೊತೆಗೆ ಬಡವರ ಸೇವೆ ಸೇರಿದಂತೆ ಇತರ ಕರ್ತವ್ಯಗಳನ್ನು ಒಳಗೊಂಡಿದೆ.