ಇಸ್ಲಾಮಿಕ್ ಕಾನೂನಿನ ಪ್ರಕಾರ, ಮುಸ್ಲಿಂ ಪುರುಷರಿಗೆ ಬಹುಪತ್ನಿತ್ವದ ಹಕ್ಕಿದೆ !
ಚೆನ್ನೈ – ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಮುಸ್ಲಿಂ ಪುರುಷರು ಬಹುಪತ್ನಿತ್ವದ ಹಕ್ಕನ್ನು ಹೊಂದಿದ್ದಾರೆ; ಆದರೆ ಮುಸ್ಲಿಂ ಪುರುಷನು ತನ್ನ ಹೆಂಡತಿಯರನ್ನು ಸಮಾನವಾಗಿ ಕಾಣಲು ಕಡ್ಡಾಯವಾಗಿದೆ. ಹಾಗೆ ಮಾಡದಿದ್ದರೆ, ಅದು ಕ್ರೂರವಾಗಿರುತ್ತದೆ. ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುವುದು ಗಂಡನ ಕರ್ತವ್ಯ ಎಂದು ಮದ್ರಾಸ್ ಹೈಕೋರ್ಟ್ ಒಂದು ತೀರ್ಪಿನಲ್ಲಿ ತಿಳಿಸಿದೆ.
ಕೆಳ ನ್ಯಾಯಾಲಯದ ತೀರ್ಪು ಮಾನ್ಯವಾಗಿದೆ !
ಒಂದು ಪ್ರಕರಣದಲ್ಲಿ ನೊಂದ ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಗೆ ಅನುಮತಿ ನೀಡಿದ ಕೆಳ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಮೊದಲ ಸಂತ್ರಸ್ತ ಪತ್ನಿಗೆ ಪತಿ ಮತ್ತು ಆತನ ಕುಟುಂಬ ಕಿರುಕುಳ ನೀಡಿರುವುದನ್ನು ಹೈಕೋರ್ಟ್ ಗಮನಿಸಿದೆ. ಗರ್ಭಾವಸ್ಥೆಯಲ್ಲಿಯೂ ಆಕೆಯನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿತ್ತು. ಇದರಿಂದ ಬೇಸತ್ತ ಪತ್ನಿ ಮಾವ ಮನೆ ಬಿಟ್ಟು ಹೋಗಿದ್ದರು. ನಂತರ ಆಕೆಯ ಪತಿ ಮರುಮದುವೆಯಾಗಿ ಬೇರೊಬ್ಬ ಹೆಂಡತಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದನು.
ಕ್ರೌರ್ಯದ ಆಧಾರದಲ್ಲಿ ಪತ್ನಿ ವಿಚ್ಛೇದನ ಕೇಳಬಹುದು !
ಮತ್ತೊಂದು ಪ್ರಕರಣದಲ್ಲಿ, ಅಲಹಾಬಾದ್ ಹೈಕೋರ್ಟ್, ಕ್ರೌರ್ಯದ ಪ್ರಕರಣಗಳಲ್ಲಿ, ವೈವಾಹಿಕ ಸಂಬಂಧಗಳನ್ನು ಮರುಸ್ಥಾಪಿಸಲು ಆದೇಶಿಸುವ ಮೊದಲು ನ್ಯಾಯಾಲಯವು ಇತರ ಸಂದರ್ಭಗಳನ್ನು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಕ್ರೌರ್ಯದ ಆಧಾರದ ಮೇಲೆ ಹೆಂಡತಿ ವಿಚ್ಛೇದನವನ್ನು ಪಡೆಯಬಹುದು ಎಂದು ಹೇಳಿದೆ.
ಸಂಪಾದಕೀಯ ನಿಲುವು‘ಜಾತ್ಯತೀತ ದೇಶದಲ್ಲಿ ಧರ್ಮದ ಆಧಾರದ ಮೇಲೆ ಮುಸ್ಲಿಂ ಪುರುಷರಿಗೆ ಮಾತ್ರ ನೀಡಲಾದ ಬಹುಪತ್ನಿತ್ವದ ಹಕ್ಕನ್ನು ಸರಕಾರ ರದ್ದುಪಡಿಸಬೇಕು’ ಎಂದು ಜನರು ಒತ್ತಾಯಿಸಬೇಕು ! |