ತಮಿಳುನಾಡಿನ ದ್ರಮುಕ ಸರಕಾರದಲ್ಲಿನ ಸಚಿವ ಉದಯನಿಧಿ ಸ್ಟಾಲಿನ್ ಇವರ ಹೇಳಿಕೆ !

ಚೆನ್ನೈ (ತಮಿಳುನಾಡು) – ದ್ರಮುಕ (ದ್ರವಿಡ ಮುನ್ನೆತ್ರಕಳಘಂ – ದ್ರವಿಡ ಪ್ರಗತಿ ಸಂಘ) ಪಕ್ಷ ಎಂದಿಗೂ ಧರ್ಮದ ವಿರುದ್ಧವಿಲ್ಲ; ಆದರೆ ಮಸೀದಿ ಕೆಡವಿ ಮಂದಿರ ಕಟ್ಟುವುದು, ಈ ವಿಷಯ ಸ್ವೀಕರಿಸಲು ಸಾಧ್ಯವಿಲ್ಲ, ಎಂದು ತಮಿಳುನಾಡಿನ ದ್ರಮುಕ ಪಕ್ಷದ ಸಚಿವ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಇವರ ಪುತ್ರ ಉದಯನಿಧಿ ಸ್ಟಾಲಿನ್ ಇವರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಭಿಪ್ರಾಯ ಮಂಡಿಸಿದರು. ಉದಯನಿಧಿ ಸ್ಟಾಲಿನ್ ಇವರು ಈ ಹಿಂದೆ ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂ ರೋಗಕ್ಕೆ ಹೋಲಿಸಿದ್ದರು. ‘ಸನಾತನ ಧರ್ಮವನ್ನು ನಾಶ ಮಾಡಬೇಕು’, ಈ ರೀತಿಯ ಹೇಳಿಕೆ ಅವರ ನಾಯಕರಿಂದ ಬರುತ್ತವೆ.
(ಸೌಜನ್ಯ – India Today)
ಸಂಪಾದಕೀಯ ನಿಲುವುಅಯೋಧ್ಯೆಯಲ್ಲಿನ ಶ್ರೀರಾಮಜನ್ಮಭೂಮಿಯಲ್ಲಿ ಹಿಂದೆ ಮಹಾರಾಜ ವಿಕ್ರಮಾದಿತ್ಯ ಇವರು ಕಟ್ಟಿಸಿರುವ ಭವ್ಯ ರಾಮ ಮಂದಿರ ಇತ್ತು ಮತ್ತು ಅದನ್ನು ಬಾಬರನೂ ದ್ವಂಸಗೊಳಿಸಿ ಅಲ್ಲಿ ಮಸೀದಿ ಕಟ್ಟಿದನು. ಇದು ಇತಿಹಾಸ ಆಗಿರುವಾಗ ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಉದಯನಿಧಿ ಮುಸಲ್ಮಾನರನ್ನು ಓಲೈಸುವುದಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ! ಮಂದಿರ ಕೆಡವಿ ಮಸೀದಿ ಕಟ್ಟಿರುವುದು, ಇದು ಉದಯನಿಧಿ ಇವರಿಗೆ ನಡೆಯುತ್ತದೆಯೇ ? ಇದನ್ನು ಅವರು ಸ್ಪಷ್ಟ ಪಡಿಸಬೇಕು ! ನಡೆಯುವುದಿಲ್ಲವಾದರೆ ದೇಶದಲ್ಲಿನ ಮೂರುವರೆ ಲಕ್ಷ ದೇವಸ್ಥಾನಗಳು ಕೆಡವಿ ಅಲ್ಲಿ ಮಸೀದಿಗಳು ಕಟ್ಟಿರುವುದನ್ನು ತೆರವುಗೊಳಿಸಲು ಹೇಳುವರೆ ? |
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ನ್ಯಾಯಾಲಯದ ಬೇಸಿಗೆ ರಜೆಗಳ ನಂತರ ವಿಚಾರಣೆಯಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ! : Supreme Court
ಶ್ರೀರಾಮ ಮಂದಿರದ ಕಾಣಿಕೆ ಕಳ್ಳತನ; 5 ಆರೋಪಿಗಳ ಮನೆಗಳು ಪರಸ್ಪರ ಹತ್ತಿರದಲ್ಲಿರುವುದು ಬಹಿರಂಗ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ