HR & CE Ministry BJP Tamilnadu : ತಮಿಳುನಾಡಿನಲ್ಲಿ ಚುನಾಯಿತರಾದರೆ ಹಿಂದೂ ಧಾರ್ಮಿಕ ಮತ್ತು ದತ್ತಿ ದೇಣಿಗೆ ಸಚಿವಾಲಯವನ್ನು ಮುಚ್ಚುತ್ತೇವೆ ! – ಭಾಜಪ

  • ಈ ಸಚಿವಾಲಯವು ದೇವಸ್ಥಾನಗಳ ಸರಕಾರಿಕರಣಕ್ಕೆ ಹೊಣೆ !

  • ದೇವಾಲಯದ ಹೊರಗಿನ ಪೆರಿಯಾರ್ ಪ್ರತಿಮೆಗಳನ್ನು ತೆಗೆಯುವ ಆಶ್ವಾಸನೆ !


ಚೆನ್ನೈ (ತಮಿಳುನಾಡು) – ರಾಜ್ಯದ ಭಾಜಪ ಅಧ್ಯಕ್ಷ ಕೆ. ಅಣ್ಣಾಮಲೈ ಇವರು, ಭಾಜಪ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎಂಬುದರ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಶ್ರೀರಂಗಂನಲ್ಲಿ ನಡೆದ ಮೆರವಣಿಗೆಯಲ್ಲಿ, ನಾವು ಅಧಿಕಾರಕ್ಕೆ ಬಂದ ತಕ್ಷಣ ‘ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವಾಲಯ’ವನ್ನು ತೆಗೆದುಹಾಕುತ್ತೇವೆ ಎಂದು ಘೋಷಿಸಿದರು. ಈ ಸಚಿವಾಲಯದ ಮೂಲಕವೇ ತಮಿಳುನಾಡಿನ ಸಾವಿರಾರು ಪುರಾತನ ಹಿಂದೂ ದೇವಾಲಯಗಳನ್ನು ಸರಕಾರಿಕರಣಗೊಳಿಸಲಾಗಿದೆ. ನಾವು ಅಧಿಕಾರಕ್ಕೆ ಬಂದರೆ ಈ ಸಚಿವಾಲಯ ಇರುವುದಿಲ್ಲ. ಎಂದು ಹೇಳಿದ್ದಾರೆ

ಅಣ್ಣಾಮಲೈ ಅವರು ಮಾತು ಮುಂದುವರೆಸಿ,

1. ರಾಜ್ಯದಲ್ಲಿ ಭಾಜಪ ಅಧಿಕಾರಕ್ಕೆ ಬಂದ ತಕ್ಷಣ ದೇವಾಲಯದ ಹೊರಗೆ ಸ್ಥಾಪಿಸಿರುವ ಪೆರಿಯಾರ್ ಪುತ್ತಳಿಗಳನ್ನು ತೆಗೆಯಲಾಗುವುದು. 1967ರಲ್ಲಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿದ ಅಣ್ಣಾಮಲೈ ಇವರು, ಡಿಎಂಕೆ ಅಧಿಕಾರಕ್ಕೆ ಬಂದಾಗ ಅವರು, ‘ದೇವರನ್ನು ಅನುಸರಿಸುವವರು ಮೂರ್ಖರು. ದೇವರನ್ನು ನಂಬಿದವರು ಮೋಸ ಹೋಗುತ್ತಾರೆ. ಹಾಗಾಗಿ ದೇವರ ಪೂಜೆ ಬೇಡ!’ ಎಂಬ ಬೋರ್ಡ್ ಗಳನ್ನು ದೇವಸ್ಥಾನಗಳ ಹೊರಗೆ ಹಾಕಲಾಗಿತ್ತು. (ಡಿಎಂಕೆ ಪಕ್ಷದ ಹಿಂದೂ ದ್ವೇಷದ ಮನಸ್ಥಿತಿಯನ್ನು ತಿಳಿದುಕೊಳ್ಳಿ – ಸಂಪಾದಕರು)

2. ಶ್ರೀರಂಗ ಭೂಮಿಯಲ್ಲಿ, ನಾವು ಅಧಿಕಾರಕ್ಕೆ ಬಂದ ಮೇಲೆ ಇಂತಹ ಧ್ವಜಸ್ತಂಭಗಳನ್ನು ನೆಲಸಮಗೊಳಿಸುವುದು ನಮ್ಮ ಮೊದಲ ಕೆಲಸ ಎಂದು ನಿಮಗೆ ಭರವಸೆ ನೀಡುತ್ತೇವೆ. ಬದಲಾಗಿ ತಮಿಳು ಹಿಂದೂ ಸಂತರಾದ ಆಳ್ವಾರ್ ಮತ್ತು ನಾಯನಾರ್ ಅವರ ಪುತ್ತಳಿಗಳನ್ನು ಸ್ಥಾಪಿಸುತ್ತೇವೆ. ತಮಿಳಿನ ಮಹಾನ್ ಸಂತ ತಿರುವಳ್ಳುವರ್ ಅವರ ಪುತ್ತಳಿಯನ್ನೂ ಸ್ಥಾಪಿಸಲಾಗುವುದು.

ಅಣ್ಣಾಮಲೈ ರೂಪದಲ್ಲಿ ನಿಜವಾದ ರಾಷ್ಟ್ರನಾಯಕ ಹೊರಹೊಮ್ಮುತ್ತಾನೆ ! – ಟಿ.ಆರ್. ರಮೇಶ್

ಅಣ್ಣಾಮಲೈ ಹೇಳಿಕೆ ಕುರಿತು ಮಾತನಾಡಿದ ತಮಿಳುನಾಡಿನ ‘ಟೆಂಪಲ್ ವರ್ಶಿಪರ್ಸ್ ಸೊಸೈಟಿ’ ಅಧ್ಯಕ್ಷ ಹಾಗೂ ಹಿಂದುತ್ವನಿಷ್ಠ ಟಿ.ಆರ್. ರಮೇಶ್ ಮಾತನಾಡಿ, ಇಲ್ಲಿನ ದತ್ತಿ ಇಲಾಖೆ ರಾಜ್ಯದ ದೇವಸ್ಥಾನಗಳ ಹಣ ದುರ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದೆ. ಅಣ್ಣಾಮಲೈ ಅವರ ಪಾತ್ರವನ್ನು ನಾನು ಸ್ವಾಗತಿಸುತ್ತೇನೆ. ಇ.ವಿ. ರಾಮಸ್ವಾಮಿಯನ್ನು ನಾನು ‘ಪೆರಿಯಾರ್’ (ಮಹಾನ್) ಎಂದು ಪರಿಗಣಿಸುವುದಿಲ್ಲ. ರಾಮಸ್ವಾಮಿಯವರು ಭಾರತೀಯ ವ್ಯವಸ್ಥೆ, ತಮಿಳು ಭಾಷೆ ಮತ್ತು ತಮಿಳು ಸಂಸ್ಕೃತಿಯ ಪ್ರತೀಕಗಳನ್ನು ವಿರೋಧಿಸುತ್ತಿದ್ದರು. ಅವರು ದಲಿತರು ಮತ್ತು ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನೂ ನೀಡಿದ್ದಾರೆ. ಅವರ ಪುತ್ತಳಿಗಳನ್ನು ತೆಗೆಯಬೇಕು. ಅಣ್ಣಾಮಲೈ ಅವರ ರೂಪದಲ್ಲಿ ನಿಜವಾದ ರಾಷ್ಟ್ರೀಯ ನಾಯಕ ಹೊರಹೊಮ್ಮುತ್ತಿದ್ದಾರೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದರು ಅಣ್ಣಮಲೈ ಇವರು ಈ ಭೂಮಿಯ ಮೇಲೆ ದೃಢವಾಗಿ ನಿಂತು ಕಾರ್ಯ ಮಾಡಿ ತೋರಿಸುವರು, ಎಂದೂ ಸಹ ರಮೇಶ ಇವರು ‘ದೈನಿಕ ಸನಾತನ ಪ್ರಭಾತ’ ದಿನಪತ್ರಿಕೆಯ ವರದಿಗಾರರೊಂದಿಗೆ ಮಾತನಾಡುತ್ತಾ ಭರವಸೆಯನ್ನು ವ್ಯಕ್ತಪಡಿಸಿದರು.