ಚೆನ್ನೈ (ತಮಿಳುನಾಡು) – ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ‘ಮೈಚಾಂಗ್’ ಚಂಡಮಾರುತವು ತಮಿಳುನಾಡಿನ ರಾಜಧಾನಿ ಚೆನ್ನೈ ಮತ್ತು ಕೆಲವು ಜಿಲ್ಲೆಗಳಲ್ಲಿ ತೀವ್ರ ಹವಾಮಾನದಿಂದ ಪೆಟ್ಟು ಬಿದ್ದಿದೆ. ಈ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ‘ಮೈಚಾಂಗ್’ ಚಂಡಮಾರುತವು ಚೆನ್ನೈ, ಕಾಂಚೀಪುರಂ, ಚೆಂಗಲ್‌ಪೇಟ್, ತಿರುವಳ್ಳೂರು ಮುಂತಾದ ಜಿಲ್ಲೆಗಳಲ್ಲಿ ಭಾರೀ ಮಳೆಯನ್ನು ಉಂಟುಮಾಡುತ್ತಿದೆ.
(ಸೌಜನ್ಯ : TOI)
ಆಂಧ್ರಪ್ರದೇಶಕ್ಕೂ ‘ಮಿಚಾಂಗ್’ ಚಂಡಮಾರುತ ಅಪ್ಪಳಿಸಿತು !
ಬಂಗಾಳಕೊಲ್ಲಿಯಲ್ಲಿ ಹುಟ್ಟಿಕೊಂಡ ‘ಮಿಚಾಂಗ್’ ಚಂಡಮಾರುತ ಆಂಧ್ರಪ್ರದೇಶಕ್ಕೂ ಅಪ್ಪಳಿಸಿದೆ. ಈ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯ ಸರಕಾರವು, ತಿರುಪತಿ, ನೆಲ್ಲೂರು, ಪ್ರಕಾಶಂ, ಬಾಪಟ್ಲಾ, ಕೃಷ್ಣಾ, ಪಶ್ಚಿಮ ಗೋದಾವರಿ ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಿದೆ.