ಚೆನ್ನೈ – ತಮಿಳುನಾಡು ರಾಜ್ಯದ ಎಲ್ಲಾ ಹಿಂದೂ ದೇವಸ್ಥಾನಗಳ ‘ಸ್ಥಳಪುರಾಣ’ವನ್ನು ಬದಲಾಯಿಸಿ, ಅದನ್ನು ಪುನಃ ಬರೆಯಲು ಸರಕಾರ ತೀರ್ಮಾನಿಸಿದೆ. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಿದೆ. “ಪ್ರಾಚೀನ ಕಾಲದ ಅತ್ಯುತ್ತಮ ವಾಸ್ತುಶಿಲ್ಪವನ್ನು ಹಿಂದೂಗಳು ನಿರ್ಮಿಸಿದ್ದರು. ವಿವಿಧ ದೇವಸ್ಥಾನಗಳ ರಚನೆಯು ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ವಾಸ್ತುಶಿಲ್ಪಕಲೆಯೊಂದಿಗೆ ಇರುವ ಹಿಂದೂಗಳ ಸಂಬಂಧವನ್ನು ನಷ್ಟಗೊಳಿಸುವ ಸರಕಾರದ ಯೋಜನೆಯಾಗಿದೆ’ ಎನ್ನುವುದು ಹಿಂದೂಗಳ ಹೇಳಿಕೆಯಾಗಿದೆ.
‘ಸ್ಥಳಪುರಾಣ’ ಎಂದರೇನು?‘ಸ್ಥಳಪುರಾಣ’ ಎಂಬುದು ಸಂಸ್ಕೃತ ಪದದ ಅರ್ಥ ‘ಪ್ರಾದೇಶಿಕ ಇತಿಹಾಸ’ ಎಂದು ಆಗುತ್ತದೆ. ಒಂದು ಪ್ರದೇಶ, ದೇವಾಲಯಗಳು ಅಥವಾ ಪ್ರದೇಶದ ಐತಿಹಾಸಿಕ ಮತ್ತು ಧಾರ್ಮಿಕ ಮಾಹಿತಿಯನ್ನು ಒಳಗೊಂಡಿರುತ್ತದೆ. ಸಂಬಂಧಿಸಿದ ದೇವಸ್ಥಾನಗಳು, ಪ್ರದೇಶಗಳು ಅಥವಾ ಕ್ಷೇತ್ರಗಳ ವಿಷಯದ ಮಾಹಿತಿಯು ಹಸ್ತಪ್ರತಿಗಳ ಸ್ವರೂಪದಲ್ಲಿ ಅಥವಾ ಸಂಬಂಧಿಸಿದ ಕ್ಷೇತ್ರಗಳೊಂದಿಗೆ ಧಾರ್ಮಿಕ ಗ್ರಂಥಗಳ ರೂಪದಲ್ಲಿ ಕಂಡುಬರುತ್ತದೆ. |
ಸಂಪಾದಕರ ನಿಲುವು* ದ್ರಮುಕ ಸರಕಾರವು ತಮಿಳುನಾಡಿನಲ್ಲಿರುವ ಹಿಂದೂ ಪರಂಪರೆ ಮತ್ತು ಸಂಸ್ಕೃತಿಯನ್ನು ನಷ್ಟಗೊಳಿಸಲು ಪ್ರಯತ್ನಿಸುತ್ತಿದೆ. ಹಿಂದೂಬಾಹುಳ್ಯವಿರುವ ಭಾರತದಲ್ಲಿ ಇಂತಹ ಪಕ್ಷವೊಂದು ರಾಜ್ಯದ ಉಸ್ತುವಾರಿಯನ್ನು ನೋಡಿಕೊಳ್ಳೂತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! |