ಮಧುರೈ (ತಮಿಳುನಾಡು) – ತಮಿಳುನಾಡಿನ ಭ್ರಷ್ಟಾಚಾರ ತಡೆ ಮತ್ತು ವಿಜಿಲೆನ್ಸ್ ಸ್ಕ್ವಾಡ್ ನವರು ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್ ತಿವಾರಿ ಅವರನ್ನು ದಿಂಡಿಗುಲ್‌ನಲ್ಲಿ ಸರಕಾರಿ ವೈದ್ಯನಿಂದ 51 ಲಕ್ಷ ರೂಪಾಯಿ ಲಂಚದ ಮೊದಲ ಕಂತಿನ 20 ಲಕ್ಷ ರೂಪಾಯಿಯನ್ನು ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಹಳೆ ಪ್ರಕರಣದಲ್ಲಿ ಪ್ರಧಾನಿ ಕಚೇರಿಯಿಂದ ಕ್ರಮ ಕೈಗೊಳ್ಳುವಂತೆ ಆದೇಶ ಬಂದಿದೆ ಎಂದು ಬೆದರಿಸಿ ಈ ವೈದ್ಯನಿಗೆ 51 ಲಕ್ಷ ರೂಪಾಯಿ ಲಂಚದ ಬೆದರಿಕೆ ಹಾಕಿದ್ದ. ಅಂಕಿತ್ ತಿವಾರಿಯನ್ನು ಮಧುರೈನಲ್ಲಿರುವ ಇಡಿ ಕಚೇರಿಯಲ್ಲಿ ನಿಯೋಜಿಸಲಾಗಿದೆ.
ಅಂಕಿತ್ ಈ ವೈದ್ಯರನ್ನು ಬೆದರಿಸಿ ಕಚೇರಿಗೆ ಕರೆಸಿದ್ದ. ಕ್ರಮ ಕೈಗೊಳ್ಳಲು ಅವರಿಂದ 3 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ. ಅಂತಿಮವಾಗಿ 51 ಲಕ್ಷ ರೂಪಾಯಿ ಪಾವತಿಸಲು ಹೇಳಿದ್ದ. ಇದಾದ ನಂತರ ಅಂಕಿತ್ ಮೇಲೆ ಅನುಮಾನಗೊಂಡ ವೈದ್ಯರು ದಿಂಡಿಗುಲ್‌ನಲ್ಲಿರುವ ಭ್ರಷ್ಟಾಚಾರ ತಡೆ ಮತ್ತು ವಿಜಿಲೆನ್ಸ್ ಸ್ಕ್ವಾಡ್ ಕಚೇರಿಗೆ ತೆರಳಿ ದೂರು ದಾಖಲಿಸಿದರು.
ಸಂಪಾದಕೀಯ ನಿಲುವುಹಗರಣಗಳ ಬಗ್ಗೆ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳೇ ಭ್ರಷ್ಟಾಚಾರ ಮಾಡುತ್ತಿದ್ದರೆ ಕಾನೂನಿನಲ್ಲಿ ಗಲ್ಲು ಶಿಕ್ಷೆ ನೀಡುವುದು ಅನಿವಾರ್ಯವಾಗಿದೆ ! |