ಪ್ರಬಂಧದ ಕೊನೆಯಲ್ಲಿ ‘ಜೈ ಹಿಂದ’ ಎಂದು ಬರೆದಿದ್ದಕ್ಕೆ ಉತ್ತರ ಪತ್ರಿಕೆಯನ್ನು ತಮಿಳುನಾಡು ಲೋಕಸೇವಾ ಆಯೋಗ ಅಮಾನ್ಯಗೊಳಿಸಿತ್ತು!
ಮಧುರೈ – ತಮಿಳುನಾಡು ಲೋಕಸೇವಾ ಆಯೋಗದ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪ್ರಬಂಧದ ಕೊನೆಯಲ್ಲಿ ‘ಜೈ ಹಿಂದ’ ಎಂದು ಬರೆದಿದ್ದ ಮಹಿಳಾ ಅಭ್ಯರ್ಥಿಗೆ ಮದ್ರಾಸ್ ಉಚ್ಚನ್ಯಾಯಾಲಯದ ಮಧುರೈ ಪೀಠ ಸಾಂತ್ವನ ನೀಡಿದೆ. ಮಹಿಳಾ ಅಭ್ಯರ್ಥಿಯು ಪ್ರಬಂಧದ ಕೊನೆಯಲ್ಲಿ ‘ಜೈ ಹಿಂದ’ ಎಂದು ಬರೆದ ಕಾರಣ ತಮಿಳುನಾಡು ಲೋಕಸೇವಾ ಆಯೋಗ ಆಕೆಯ ಉತ್ತರ ಪತ್ರಿಕೆಯನ್ನು ಅಮಾನ್ಯಗೊಳಿಸಿತ್ತು. ನ್ಯಾಯಮೂರ್ತಿ ಬಟ್ಟು ದೇವಾನಂದರು ಮಾತನಾಡಿ, ‘ನೈಸರ್ಗಿಕ ಸಂಪನ್ಮೂಲಗಳ ಸಂಧಾನದ ಮಹತ್ವ’ ವಿಷಯದ ಕುರಿತು ಪ್ರಬಂಧ ಬರೆಯುವಾಗ ಯುವ ಜನತೆ ಸ್ಫೂರ್ತಿಭರಿತರಾಗಿ ಭಾವುಕರಾಗುವುದು ಮತ್ತು ದೇಶಭಕ್ತಿ ಅನುಭವಿಸುವುದು ಸಹಜವಾಗಿದೆ. ಆದುದರಿಂದ ಅಭ್ಯರ್ಥಿಯು ಉತ್ತರ ಪತ್ರಿಕೆಯ ಕೊನೆಯಲ್ಲಿ ‘ಜೈ ಹಿಂದ’ ಎಂದು ಬರೆದಿರುವುದರಿಂದ, ಆಕೆಯ ಉತ್ತರ ಪತ್ರಿಕೆಯನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ. ‘ಜೈ ಹಿಂದ’ ಎಂದರೆ ‘ಭಾರತಕ್ಕೆ ವಿಜಯ’ ಎಂದರ್ಥವಾಗಿದ್ದು ಮತ್ತು ಇದು ಸಾಮಾನ್ಯ ಘೋಷಣೆಯಾಗಿದೆ. ಶಾಲಾ ಮಕ್ಕಳ ಪ್ರಾರ್ಥನೆಯ ಕೊನೆಯಲ್ಲಿ ಅಥವಾ ಗಣ್ಯರ ಭಾಷಣದ ಕೊನೆಯಲ್ಲಿ ‘ಜೈ ಹಿಂದ’ ಎಂಬ ಘೋಷಣೆಯನ್ನು ಸ್ವಯಂಪ್ರೇರಿತವಾಗಿ ನೀಡಲಾಗುತ್ತದೆ ಎಂದು ಹೇಳಿದರು.
ಉತ್ತರ ಪತ್ರಿಕೆ ಅಮಾನ್ಯವೆಂದು ನಿರ್ಧರಿಸಿದ್ದ ನಿರ್ಣಯವನ್ನು ಹಿಂಪಡೆದು ಪ್ರಬಂಧದ ಮೌಲ್ಯಮಾಪನ ಮಾಡುವಂತೆ ಆದೇಶ!
ನ್ಯಾಯಾಲಯ ತನ್ನ ಹೇಳಿಕೆಯನ್ನು ಮುಂದುವರಿಸಿ, “ಇಂತಹ ಚಿಂತನೆಯ ಮತ್ತು ಆತ್ಮಾವಲೋಕನದ ಕ್ಷಣದಲ್ಲಿ, ಕೆಲವು ಯುವಕರಿಗಾಗಿ ‘ಜೈ ಹಿಂದ’ ನಂತಹ ವಿಷಯದ ಸಾರಾಂಶವನ್ನು ನೀಡಿ ನಿಬಂಧ ಅಥವಾ ಭಾಷಣವನ್ನು ಮುಕ್ತಾಯಗೊಳಿಸುವುದು ಅಭಿವ್ಯಕ್ತಿಯ ಸ್ವಾಭಾವಿಕ ಮಾರ್ಗವಾಗಿದೆ. ಆದುದರಿಂದ ಈ ಪ್ರಕರಣದಲ್ಲಿ `ಜಯ ಹಿಂದ್ ! ನಡೆಯಿರಿ, ನಿಸರ್ಗದೊಂದಿಗೆ ಏಕರೂಪವಾಗಿ ಜೀವಿಸೋಣ’ ಈ ಘೋಷವಾಕ್ಯವು ಪ್ರಬಂಧದ ನೈಸರ್ಗಿಕ ಮತ್ತು ಸ್ಫೂರ್ತಿದಾಯಕ ಪ್ರತಿಕ್ರಿಯೆಯಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರದ ಪ್ರಯತ್ನದ ಸಂಕೇತ ಕಾಣಿಸುವುದಿಲ್ಲ. ಅನೇಕ ಸಂವಹನಗಳಲ್ಲಿ ‘ಜೈ ಹಿಂದ್’ ಎಂಬುದು ಕೊನೆಯ ಪದವಾಗಿದೆ, ಅಲ್ಲಿ ಮಾತೃಭೂಮಿಯ ಬಗ್ಗೆ ಅಂದರೆ ಭಾರತದ ಬಗ್ಗೆ ದೇಶಭಕ್ತಿಯ ಭಾವನೆಗಳನ್ನು ವ್ಯಕ್ತಪಡಿಸಲಾಗುತ್ತದೆ.
ಖಂಡಪೀಠವು ತಮಿಳುನಾಡು ಲೋಕಸೇವಾ ಆಯೋಗಕ್ಕೆ ಈ ಪ್ರಕರಣದಲ್ಲಿ ಮಹಿಳಾ ಅಭ್ಯರ್ಥಿಯ ಉತ್ತರ ಪತ್ರಿಕೆಯನ್ನು ಅಮಾನ್ಯಗೊಳಿಸುವ ನಿರ್ಣಯವನ್ನು ಹಿಂಪಡೆದು, ಆಕೆಯ ಪ್ರಬಂಧದ ಮೌಲ್ಯಮಾಪನ ಮಾಡುವಂತೆ ಆದೇಶಿಸಿದೆ.