ಕಾಳಿಯಂತಹ ಚಿತ್ರ ತಯಾರಿಸುವವರ ಶಿರಚ್ಛೇದ ಮಾಡುವವರಿಗೆ ೨೦ ಲಕ್ಷ ರೂಪಾಯಿ ನೀಡುವೆ !

‘ಕಾಳಿ’ಯಂತಹ ಚಿತ್ರಗಳ ಮೂಲಕ ಹಿಂದೂ ಧರ್ಮಕ್ಕೆ ಅಪಕೀರ್ತಿ ತರುವ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆದಿದೆ. ಕಾಳಿಮಾತೆಯ ಅವಮಾನ ಮಾಡಿದ್ದಾರೆ. ನಿರಂಜನೀ ಆಖಾಡಾದ ಸಂತನಾಗಿರುವ ನಾನು ಘೋಷಿಸುವುದೇನೆಂದರೆ, ಇಂತಹ ಚಲನಚಿತ್ರ ತೆಗೆದಿರುವವರ ಶಿರಚ್ಛೇದ ಮಾಡುವವನಿಗೆ ನಾನು ೨೦ ಲಕ್ಷ ರೂಪಾಯಿ ನೀಡುವೇನು’

ಅಮರನಾಥದಲ್ಲಿ ಮೇಘಸ್ಫೋಟದಿಂದ ಸ್ವಲ್ಪದರಲ್ಲಿ ಪಾರಾದ ಶಾಸಕ ಟಿ. ರಾಜಾಸಿಂಗ ಮತ್ತು ಕುಟುಂಬದವರು !

ಅಮರನಾಥ ಗುಹೆಯ ತಪ್ಪಲಿನಲ್ಲಿರುವ ಯಾತ್ರಾಸ್ಥಳದ ಬಳಿ ಜುಲೈ ೮ ರಂದು ಸಂಭವಿಸಿದ ಮೇಘಸ್ಫೋಟದಲ್ಲಿ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ನೇತಾರ ಹಾಗೂ ಬಿಜೆಪಿ ಶಾಸಕ ಶ್ರೀ ಟಿ ರಾಜಾಸಿಂಗರವರ ಕುಟುಂಬ ಸಿಲುಕಿಕೊಂಡಿತ್ತು. ಅವರು ಬಿಕ್ಕಟ್ಟಿನಿಂದ ಸ್ವಲ್ಪದರಲ್ಲೇ ಪಾರಾದರು.

ಹಿಂದೂ ದೇವತೆಗಳಲ್ಲಿ ನಂಬಿಕೆಯಿರುವ ಹಿಂದೂಯೇತರರು ದೇವಸ್ಥಾನಗಳಿಗೆ ಹೋಗುವುದನ್ನು ತಡೆಯಲು ಸಾಧ್ಯವಿಲ್ಲ! – ಮದ್ರಾಸ ಉಚ್ಚ ನ್ಯಾಯಾಲಯ

ಇತರ ಧರ್ಮದ ವ್ಯಕ್ತಿಯೊಬ್ಬರು ಹಿಂದೂ ದೇವತೆಯ ಮೇಲೆ ನಂಬಿಕೆಯಿಟ್ಟು ದೇವತೆಯನ್ನು ಭೇಟಿ ಮಾಡಲು ಬಯಸಿದರೆ ಅವನನ್ನು ಆ ದೇವತೆಯ ದೇವಾಲಯಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲು ಅಥವಾ ನಿಷೇಧಿಸಲು ಆಗುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯ ಒಂದು ಮನವಿಯ ಬಗ್ಗೆ ಆಲಿಕೆ ನಡೆಸಿ ತೀರ್ಪು ನೀಡಿದೆ.

ದೆಹಲಿಯ ಫತೆಪುರಿ ಮಸೀದಿಯ ಶಾಹಿ ಇಮಾಮಗೆ ಕೊಲೆ ಬೆದರಿಕೆ

ಇಲ್ಲಿಯ ಫತೆಪುರಿ ಮಸೀದಿಯ ಶಾಹಿ ಇಮಾಮ ಮುಫ್ತಿ ಮುಕರ್ರಾಮ ಅವರಿಗೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ೪ ಬೆದರಿಕೆಗಳು ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಪ್ಪಿಗೆಯಿಂದ ಶಾರೀರಿಕ ಸಂಬಂಧವನ್ನಿಡುವುದು ಬಲಾತ್ಕಾರವಲ್ಲ ! – ಕೇರಳ ಉಚ್ಚ ನ್ಯಾಯಾಲಯ

ಆರೋಪಿ ನ್ಯಾಯವಾದಿ ನವನೀತ ನಾಥ (ವಯಸ್ಸು ೨೯)ಇವರು ಓರ್ವ ಮಹಿಳಾ ನ್ಯಾಯವಾದಿಗೆ ವಿವಾಹದ ಆಶ್ವಾಸನೆಯನ್ನು ನೀಡಿ ಆಕೆಯ ಮೇಲೆ ವಿವಿಧ ಕಡೆಗಳಲ್ಲಿ ಬಲಾತ್ಕಾರ ಮಾಡಿರುವ ಹಾಗೂ ಅನಂತರ ಇನ್ನೊಂದು ಮಹಿಳೆಯೊಂದಿಗೆ ವಿವಾಹವಾಗುವ ನಿರ್ಣಯ ತೆಗೆದುಕೊಂಡಿರುವುದು ಈ ಆರೋಪವಾಗಿದೆ.

‘ನನ್ನ ಕಾಳಿ ಮಾತೆಯು ಹಿಂದುತ್ವವನ್ನು ಧ್ವಂಸಗೊಳಿಸುತ್ತಾಳೆ !’

‘ಕಾಲೀ’ ಮಾಹಿತಿ ಚಿತ್ರದ ನಿರ್ಮಾಪಕರಾದ ಲೀನಾ ಮಣೀಮೇಕಲಯಿಯವರು ಹೊಸ ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಅವರು ‘ನನ್ನ ಕಾಲಿಯು ’ಕ್ವೀರ; (ವಿಚಿತ್ರ) ಇದ್ದಾಳೆ. ಆಕೆಯು ಒಂದು ಮುಕ್ತ ಆತ್ಮವಾಗಿದ್ದಾಳೆ. ಅದು ಪುರುಷಪ್ರಾಧಾನ್ಯತೆಯ ಮೇಲೆ ಉಗುಳುತ್ತಾಳೆ.

ಅಮರನಾಥ ಗೂಹೆಯ ಬಳಿ ಬಂದಿರುವ ನೆರೆಯಿಂದಾಗಿ ೧೬ ಜನರ ಮೃತ್ಯುವಾದರೆ ೪೦ ಜನರು ಕಾಣೆಯಾಗಿದ್ದಾರೆ

ಅಮರನಾಥ ಗೂಹೆಯ ಬಳಿ ಇರುವ ಯಾತ್ರಿಗಳ ತಂಗುದಾಣದ ಬಳಿ ಜುಲೈ ೮ರಂದು ಅಪಾರ ಮಳೆ ಬಂದಿತು. ಇದರಿಂದಾಗಿ ನೆರೆ ಬಂದು ಇಲ್ಲಿಯವರೆಗೆ ೧೬ ಜನರು ಮೃತಪಟ್ಟಿದ್ದರೆ, ೪೦ ಜನರು ಕಾಣೆಯಾಗಿದ್ದಾರೆ. ಈ ಮಳೆಯಲ್ಲಿ ಈ ತಂಗುದಾಣದಲ್ಲಿರುವ ಕೆಲವು ಡೆರೆಗಳು, ಪ್ರಸಾದಾಲಯಗಳಿಗೆ ಹಾನಿಯಾಗಿದೆ.

ಚೀನ ಸಂಸ್ಥೆಯಾದ ‘ವೀವೋ’ ಕರವನ್ನು ಕಟ್ಟದೇ ಚೀನಾದಲ್ಲಿ ಕಾನೂನು ಬಾಹಿರವಾಗಿ ೬೨ ಸಾವಿರದ ೭೪೬ ಕೋಟಿ ರೂಪಾಯಿಗಳನ್ನು ಕಳುಹಿಸಿದೆ !

ಚೀನಾದ ಸಂಚಾರವಾಣಿ ಸಂಸ್ಥೆಯಾದ ‘ವೀವೋ’ ಕರವನ್ನು ತೆರದೇ ಕಾನೂನುಬಾಹಿರವಾಗಿ ೬೨ ಸಾವಿರದ ೭೪೬ ಕೋಟಿ ರೂಪಾಯಿಗಳನ್ನು ಚೀನಾಗೆ ಕಳುಹಿಸಿರುವ ಮಾಹಿತಿಯು ಬೆಳಕಿಗೆ ಬಂದಿದೆ. ಜ್ಯಾರಿ ನಿರ್ದೇಶನಾಲಯವು (ಇಡಿಯು) ಈ ಮಾಹಿತಿಯನ್ನು ನೀಡಿದೆ.

ನೂಪುರ ಶರ್ಮಾರವರ ಶಿರಚ್ಛೇದನ ಮಾಡುವ ಬೆದರಿಕೆ ಹಾಕಿರುವ ನಾಸಿರನ ಬಂಧನ

ನೂಪುರ ಶರ್ಮಾರವರ ಶಿರಚ್ಛೇದನ ಮಾಡಿ ಹತ್ಯೆ ಮಾಡುವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಪೊಲೀಸರು ನಾಸೀರ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದಾರೆ. ಒಂದು ವಿಡಿಯೋದ ಮೂಲಕ ನಾಸೀರನು ಈ ಬೆದರಿಕೆಯನ್ನು ಹಾಕಿದ್ದನು.

ಭಾಜಪದಿಂದ ಹರಿಯಾಣಾದ ಪದಾಧಿಕಾರಿ ಅಮಾನತ್ತು

೨೦೧೭ ರಲ್ಲಿ ಮಹಮ್ಮದ್ ಪೈಗಂಬರ್ ಇವರ ವಿರುದ್ಧ ಟ್ವೀಟ್ ಮಾಡಿರುವ ಪ್ರಕರಣದಲ್ಲಿ ಭಾಜಪದಿಂದ ಹರಿಯಾಣಾದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಪ್ರಮುಖ ಅರುಣ ಯಾದವ ಇವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿದೆ. ಭಾಜಪದ ಹರಿಯಾಣ ಪ್ರದೇಶ ಅಧ್ಯಕ್ಷ ಒ.ಪಿ. ಧನಖಡ ಇವರು ಈ ಕ್ರಮ ಕೈಕೊಂಡರು.