ಚೀನ ಸಂಸ್ಥೆಯಾದ ‘ವೀವೋ’ ಕರವನ್ನು ಕಟ್ಟದೇ ಚೀನಾದಲ್ಲಿ ಕಾನೂನು ಬಾಹಿರವಾಗಿ ೬೨ ಸಾವಿರದ ೭೪೬ ಕೋಟಿ ರೂಪಾಯಿಗಳನ್ನು ಕಳುಹಿಸಿದೆ !

ನವದೆಹಲಿ – ಚೀನಾದ ಸಂಚಾರವಾಣಿ ಸಂಸ್ಥೆಯಾದ ‘ವೀವೋ’ ಕರವನ್ನು ತೆರದೇ ಕಾನೂನುಬಾಹಿರವಾಗಿ ೬೨ ಸಾವಿರದ ೭೪೬ ಕೋಟಿ ರೂಪಾಯಿಗಳನ್ನು ಚೀನಾಗೆ ಕಳುಹಿಸಿರುವ ಮಾಹಿತಿಯು ಬೆಳಕಿಗೆ ಬಂದಿದೆ. ಜ್ಯಾರಿ ನಿರ್ದೇಶನಾಲಯವು (ಇಡಿಯು) ಈ ಮಾಹಿತಿಯನ್ನು ನೀಡಿದೆ. ‘ವೀವೋ’ ಚೀನಾಗೆ ಕಳುಹಿಸಿರುವ ಹಣವು ಅದರ ಭಾರತದಲ್ಲಿನ ಒಟ್ಟೂ ನಾನಾ ಬಗೆಯ ಹಂಚು ಹಾಕುವ ಅಂದರೆ ೧ ಲಕ್ಷ ೨೫ ಸಾವಿರದ ೧೮೫ ಕೋಟಿ ರೂಪಾಯಿಗಳ ಅರ್ಧದಷ್ಟಿದೆ. ೨೦೧೮ ರಿಂದ ೨೦೨೧ರ ಕಾಲಾವಧಿಯಲ್ಲಿ ಭಾರತವನ್ನು ಬಿಟ್ಟು ಚೀನಾಗೆ ತೆರಳಿದ ೩ ಚೀನಿ ನಾಗರೀಕರು ಹಾಗೂ ಇನ್ನೂ ೧ ಚೀನಿ ನಾಗರೀಕರ ತನಿಖೆಯ ಸಮಯದಲ್ಲಿ ‘ವೀವೋ’ನ ಕರ ಕಳ್ಳತನ ಬಹಿರಂಗವಾಗಿದೆ. ಈ ಎಲ್ಲರ ಹೆಸರಿನಲ್ಲಿ ಭಾರತದಲ್ಲಿ ೨೩ ಸಂಸ್ಥೆಗಳಿವೆ. ಈ ನಾಲ್ಕೂ ಚೀನಿಯರಿಗೆ ನಿತೀನ ಗರ್ಗ ಎಂಬ ಹೆಸರಿನ ಲೆಕ್ಕ ಪರಿಶೋಧಕನು ಸಹಾಯ ಮಾಡಿದ್ದನು.

ಸಂಪಾದಕೀಯ ನಿಲುವು

ಸಾವಿರಾರು ಕೋಟಿ ರೂಪಾಯಿಗಳ ಕರವನ್ನು ತೆರದಿರುವ ವರೆಗೆ ಹಾಗೂ ಆ ಹಣವನ್ನು ಚೀನಾಗೆ ಕಳುಹಿಸುವ ವರೆಗೆ ಭಾರತೀಯ ವ್ಯವಸ್ಥೆಯು ಮಲಗಿತ್ತೇ ? ಇನ್ನೂ ಎಷ್ಟು ವಿದೇಶಿ ಸಂಸ್ಥೆಗಳು ಹೀಗೆ ಮಾಡುತ್ತಿರಬಹುದು, ಎಂಬುದರ ಮಾಹಿತಿಯನ್ನು ಈ ವ್ಯವಸ್ಥೆಯು ತೆಗೆದುಕೊಳ್ಳುತ್ತಿದೆಯೇ ?