ನೂಪುರ ಶರ್ಮಾರವರ ಶಿರಚ್ಛೇದನ ಮಾಡುವ ಬೆದರಿಕೆ ಹಾಕಿರುವ ನಾಸಿರನ ಬಂಧನ

ಬರೇಲಿ (ಉತ್ತರಪ್ರದೇಶ) – ನೂಪುರ ಶರ್ಮಾರವರ ಶಿರಚ್ಛೇದನ ಮಾಡಿ ಹತ್ಯೆ ಮಾಡುವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಪೊಲೀಸರು ನಾಸೀರ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದಾರೆ. ಒಂದು ವಿಡಿಯೋದ ಮೂಲಕ ನಾಸೀರನು ಈ ಬೆದರಿಕೆಯನ್ನು ಹಾಕಿದ್ದನು. ನಾಸೀರನು ದರ್ಜಿಯ ಕೆಲಸ ಮಾಡುತ್ತಾನೆ. ಕೆಲವು ದಿನಗಳ ಹಿಂದೆ ಕೆಲವರು ಅವನ ಬಳಿ ಬಟ್ಟೆ ಹೊಲಿಸಲು ಹೋಗಿರುವಾಗ ಅವರೊಂದಿಗೆ ನೂಪುರ ಶರ್ಮಾರವರ ಪ್ರಕರಣದಲ್ಲಿ ವಾದ ನಡೆಯಿತು. ಆಗ ನಾಸೀರನು ‘ನೂಪುರ ಶರ್ಮಾರವರನ್ನು ನನ್ನ ಎದುರಿಗೆ ತಂದರೆ ನಾನು ಆಕೆಯ ಶಿರಚ್ಛೇದನ ಮಾಡುವೆನು’ ಎಂದು ಬೆದರಿಕೆ ಹಾಕಿದ್ದನು. ಕೆಲವರು ಇದರ ಚಿತ್ರೀಕರಣ ಮಾಡಿ ವಿಡಿಯೋ ಮಾಡಿದ್ದರು ಹಾಗೂ ಅದನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಿದ್ದರು. ಅದನ್ನು ನೋಡಿ ಪೊಲೀಸರು ಸ್ವತಃ ದೂರನ್ನು ದಾಖಲಿಸಿ ನಾಸೀರನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಕಾನೂನು ಇರುವಾಗ ಇಂತಹ ಬೆದರಿಕೆಗಳನ್ನು ನೀಡುವವರಿಗೆ ಅತ್ಯಂತ ಕಠೋರ ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು, ಒಟ್ಟಿನಲ್ಲಿ ಪುನಃ ಯಾರಿಗೂ ಇಂತಹ ಬೆದರಿಕೆ ಹಾಕುವ ಧೈರ್ಯ ಬರಬಾರದು !