ಭಾಜಪದಿಂದ ಹರಿಯಾಣಾದ ಪದಾಧಿಕಾರಿ ಅಮಾನತ್ತು

೨೦೧೭ರಲ್ಲಿ ಮಹಮ್ಮದ್ ಪೈಗಂಬರ್ ವಿರುದ್ಧ ಟ್ವೀಟ್

ಹೊಸದೆಹಲಿ – ೨೦೧೭ ರಲ್ಲಿ ಮಹಮ್ಮದ್ ಪೈಗಂಬರ್ ಇವರ ವಿರುದ್ಧ ಟ್ವೀಟ್ ಮಾಡಿರುವ ಪ್ರಕರಣದಲ್ಲಿ ಭಾಜಪದಿಂದ ಹರಿಯಾಣಾದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಪ್ರಮುಖ ಅರುಣ ಯಾದವ ಇವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿದೆ. ಭಾಜಪದ ಹರಿಯಾಣ ಪ್ರದೇಶ ಅಧ್ಯಕ್ಷ ಒ.ಪಿ. ಧನಖಡ ಇವರು ಈ ಕ್ರಮ ಕೈಕೊಂಡರು. ಯಾದವ್ ಇವರ ೨೦೧೭ರ ಟ್ವೀಟ್ ಈಗ ಎಲ್ಲೆಡೆ ಪ್ರಸಾರವಾಗುತ್ತಿದೆ, ಆದ್ದರಿಂದ ಅವರನ್ನು ಬಂಧಿಸಲು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಲಾಗುತ್ತಿತ್ತು. ಕೆಲ ದಿನಗಳ ಹಿಂದೆ ಭಾಜಪದಿಂದ ಇದೇ ಕಾರಣಕ್ಕಾಗಿ ನೂಪುರ ಶರ್ಮಾ ಇವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿತ್ತು.

ಯಾದವ್ ಇವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಲಾಗಿಲ್ಲ. ಏನಾದರೂ ಒಂದು ಟ್ವೀಟನಿಂದ ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮಹಮ್ಮದ್ ಜುಬೇರ್ ಇವರನ್ನು ಬಂಧಿಸಬಹುದಾದರೆ ಅರುಣ ಯಾದವ ಮತ್ತು ನೂಪುರ ಶರ್ಮಾ ಇವರನ್ನು ಏಕೆ ಬಂಧಿಸಲಾಗಿಲ್ಲ ? ಎಂಬ ಪ್ರಶ್ನೆ ಟ್ವೀಟರ್ ಮೇಲೆ ಎತ್ತಲಾಗಿತ್ತು.