ರಕ್ಷಣಾಕಾರ್ಯವು ಆರಂಭವಾಗಿದೆ
ಶ್ರೀನಗರ (ಜಮ್ಮೂ-ಕಾಶ್ಮೀರ) – ಅಮರನಾಥ ಗೂಹೆಯ ಬಳಿ ಇರುವ ಯಾತ್ರಿಗಳ ತಂಗುದಾಣದ ಬಳಿ ಜುಲೈ ೮ರಂದು ಅಪಾರ ಮಳೆ ಬಂದಿತು. ಇದರಿಂದಾಗಿ ನೆರೆ ಬಂದು ಇಲ್ಲಿಯವರೆಗೆ ೧೬ ಜನರು ಮೃತಪಟ್ಟಿದ್ದರೆ, ೪೦ ಜನರು ಕಾಣೆಯಾಗಿದ್ದಾರೆ. ಈ ಮಳೆಯಲ್ಲಿ ಈ ತಂಗುದಾಣದಲ್ಲಿರುವ ಕೆಲವು ಡೆರೆಗಳು, ಪ್ರಸಾದಾಲಯಗಳಿಗೆ ಹಾನಿಯಾಗಿದೆ. ಇಲ್ಲಿ ರಕ್ಷಣಾಕಾರ್ಯವು ನಡೆಯುತ್ತಲೇ ಇದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ಪೊಲೀಸರು ಹಾಗೂ ನಗರದ ಸರಕಾರಿ ಅಧಿಕಾರಿಗಳು ಮತ್ತು ಕೆಲಸಗಾರರು ಇದರಲ್ಲಿ ಸೇರಿದ್ದಾರೆ. ಇದರೊಂದಿಗೆ ಇಂಡೋ-ಟಿಬೇಟಿಯನ್ ಗಡಿಯ ಪೊಲೀಸರೂ ಇದರಲ್ಲಿ ಸಹಭಾಗಿಯಾಗಿದ್ದಾರೆ. ಗಡಿ ಭದ್ರತಾ ಪಡೆಯ ಹೆಲಿಕಾಪ್ಟರಗಳನ್ನೂ ಬಳಸಲಾಗುತ್ತಿದೆ. ಸದ್ಯ ಬಾಲತಾಲ ಹಾಗೂ ಪಹಲಗಾಮದಲ್ಲಿ ಯಾತ್ರಿಕರನ್ನು ತಡೆಯಲಾಗಿದೆ.
(ಸೌಜನ್ಯ : TV5 Kannada)