ಕಟನಿ (ಮಧ್ಯಪ್ರದೇಶ) ಇಲ್ಲಿ ರೈಲು ನಿಲ್ದಾಣ ಪ್ರದೇಶದಲ್ಲಿನ ಹಳೆಯ ಶ್ರೀರಾಮ ಮಂದಿರದ ಮುಂಭಾಗದ ಗೋಡೆಯನ್ನು ಹಿಂದೂ ಸಂಘಟನೆಗಳು ಕೆಡವಿದವು !

ಕೆಲವು ವರ್ಷಗಳ ಹಿಂದೆ ರೈಲ್ವೇ ಆಡಳಿತವು ಕಟನಿಯ ರೈಲು ನಿಲ್ದಾಣದ ಪ್ರದೇಶದ ಹಳೆಯ ಶ್ರೀ ರಾಮ ಮಂದಿರದ ಮುಂಭಾಗದಲ್ಲಿ ಗೋಡೆಯೊಂದನ್ನು ನಿರ್ಮಿಸಿತ್ತು. ಇದರಿಂದ ದೇವಸ್ಥಾನಕ್ಕೆ ತೆರಳಲು ಭಕ್ತರು ಪರದಾಡುವಂತಾಗಿತ್ತು. ರೈಲ್ವೇ ಆಡಳಿತದ ಈ ಕ್ರಮಕ್ಕೆ ಹಿಂದೂ ಸಂಘಟನೆಗಳು ಆಗಾಗ್ಗೆ ವಿರೋಧ ವ್ಯಕ್ತಪಡಿಸಿದ್ದವು.

ಶ್ರೀಲಂಕಾಗೆ ಅರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ೨೨ ಸಾವಿರ ಕೋಟಿ ರೂಪಾಯಿಗಳು ಬೇಕಾಗಿದೆ !

ಶ್ರೀಲಂಕಾ ದಿವಾಳಿಯಾಗಿದೆ. ದೇಶದಲ್ಲಿ ಕೇವಲ ೫ ಸಾವಿರ ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಸಂಗ್ರಹದಲ್ಲಿ ಬಾಕಿ ಉಳಿದಿರುವುದು. ಈ ಪರಿಸ್ಥಿತಿಯಿಂದ ಹೊರಬರಲು ಶ್ರೀಲಂಕಾಗೆ ಸುಮಾರು ೨೨ ಸಾವಿರ ಕೋಟಿ ರೂಪಾಯಿಗಳ ಅವಶ್ಯಕತೆ ಇದೆ.

ಮಸೀದಿಗಳ ಮೇಲಿನ ಭೋಂಗಾಗಗಳ ಶಬ್ಧವನ್ನು ಅಳೆಯಲು ಧ್ವನಿಮಾಪನ ಯಂತ್ರವನ್ನು ಅಳವಡಿಸಿ !

ಕರ್ನಾಟಕ ರಾಜ್ಯದಲ್ಲಿನ ಮಸೀದಿಗಳ ಮೇಲಿನ ಭೋಂಗಾಗಳನ್ನು ತೆಗೆಯುವ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳು ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯದಲ್ಲಿನ ಮಸೀದಿಗಳಿಗೆ ನೊಟೀಸನ್ನು ಕಳುಹಿಸಿದೆ. ಅವರು ಭೋಂಗಾದ ಶಬ್ದವನ್ನು ನಿಶ್ಚಯಿಸಿದ ಡೆಸಿಬಲ್‌ನಷ್ಟೇ ಇಡಲು ಹೇಳಿದ್ದಾರೆ. ಹಾಗೆಯೇ ಧ್ವನಿಮಾಪಕ ಯಂತ್ರವನ್ನು ಅಳವಡಿಸಲು ಹೇಳಲಾಗಿದೆ.

ಕೇವಲ ಭಾರತದಲ್ಲಿಯಷ್ಟೇ ಧ್ವನಿವರ್ಧಕದ ಮೇಲೆ ಅಜಾನ್ ಕೂಗು ಏಕೆ ಕೇಳಿಸುತ್ತದೆ ? – ಜನಪ್ರಿಯ ಗಾಯಕಿ ಅನುರಾಧಾ ಪೌಡವಾಲ

ನಾನು ಜಗತ್ತಿನ ಅನೇಕ ಸ್ಥಳಗಳಿಗೆ ಹೋಗಿದ್ದೇನೆ. ಕೊಲ್ಲೀ ರಾಷ್ಟ್ರಗಳಿಗೂ ಹೋಗಿದ್ದೇನೆ. ಅಲ್ಲಿ ಧ್ವನಿವರ್ಧಕ ನಿಷೇಧವಿದೆ. ಮುಸಲ್ಮಾನ ದೇಶಗಳಲ್ಲಿ ಧ್ವನಿವರ್ಧಕದ ಮೂಲಕ ಅಜಾನ್‌ನ ಕೂಗು ಕೇಳಿಸುವುದಿಲ್ಲ. ಹೀಗಿರುವಾಗ ಕೇವಲ ಭಾರತದಲ್ಲಿಯಷ್ಟೇ ಅದು ಏಕೆ ಕೇಳಿಸುತ್ತದೆ ?, ಎಂದು ಸುಪ್ರಸಿದ್ಧ ಗಾಯಕಿ ಅನುರಾಧಾ ಪೌಡವಾಲ ಇವರು ಪ್ರಶ್ನಿಸಿದರು.

ರಾಜ್ಯಗಳು ಪ್ರಾಣವಾಯುವಿನ ಕೊರತೆಯಿಂದಾಗಿ ಘಟಿಸಿದ ಸಾವುಗಳ ಸಂಖ್ಯೆಯನ್ನು ನೀಡಿಲ್ಲ ! – ಕೇಂದ್ರ ಸರಕಾರ

ಕೊರೋನಾದ ಸಮಯದಲ್ಲಿ ಯಾವುದೇ ರಾಜ್ಯ ಸರಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಪ್ರಾಣವಾಯುವಿನ (ಆಕ್ಸಿಜನಿನ) ಕೊರತೆಯಿಂದಾಗಿ ಸಂಭವಿಸಿರುವ ಸಾವಿನ ಮಾಹಿತಿಯನ್ನು ಇಂದಿಗೂ ನೀಡಿಲ್ಲ, ಎಂಬ ಮಾಹಿತಿಯನ್ನು ಕೇಂದ್ರೀಯ ಆರೋಗ್ಯ ಮತ್ತು ಕುಟುಂಬಕಲ್ಯಾಣ ರಾಜ್ಯ ಮಂತ್ರಿಗಳಾದ ಭಾರತೀ ಪವಾರರವರು ಏಪ್ರಿಲ್‌ ೫ರಂದು ಸಂಸತ್ತಿನ ಪ್ರಶ್ನೋತ್ತರದ ಅವಧಿಯಲ್ಲಿ ನೀಡಿದರು.

ಜಮ್ಮೂ-ಕಾಶ್ಮೀರದಲ್ಲಿನ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರ ಸಂದರ್ಭದಲ್ಲಿ ಘನವಾದ ಧೋರಣೆಯಿರಲಿ !

ಮುಂಬರುವ ೬ ವಾರಗಳಲ್ಲಿ ಜಮ್ಮೂ-ಕಾಶ್ಮೀರ ರಾಜ್ಯದಲ್ಲಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಹುಡುಕಿ ಅವರ ಸೂಚಿಯನ್ನು ತಯಾರಿಸುವ, ಹಾಗೆಯೇ ಈ ಸಂದರ್ಭದಲ್ಲಿ ಘನವಾದ ಧೊರಣೆಯನ್ನು ಇಟ್ಟುಕೊಳ್ಳುವ ಆದೇಶವನ್ನು ಜಮ್ಮೂ-ಕಾಶ್ಮೀರದ ಉಚ್ಚ ನ್ಯಾಯಾಲಯವು ಒಂದು ಜನಹಿತ ಅರ್ಜಿಯ ಆಲಿಕೆಯ ಸಮಯದಲ್ಲಿ ರಾಜ್ಯದ ಗೃಹಸಚಿವರಿಗೆ ನೀಡಿದೆ.

ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ನಂತರ ಸಂಪೂರ್ಣ ದೇಶದಲ್ಲಿ ಸಂಚಾರ ನಿಷೇಧ ಹೇರಲಾಗಿದೆ. ಹಾಗೂ ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ ಹೇರಲಾಗಿದೆ.

ಕೆಲವು ದೇಶಗಳು ಇಸ್ಲಾಂ ಅಥವಾ ಕ್ರೈಸ್ತ ದೇಶ ಎಂದು ಘೋಷಿಸಬಹುದಾದರೆ, ನೇಪಾಳ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಏಕೆ ಸಾಧ್ಯವಿಲ್ಲ ?

ಕೆಲವು ದೇಶಗಳು ಇಸ್ಲಾಂ ಅಥವಾ ಕ್ರೈಸ್ತ ದೇಶ ಎಂದು ಘೋಷಿಸಲಾಗುತ್ತಿದ್ದರೆ ಮತ್ತು ಅಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯು ಹಾಗೆ ಇರುವುದಾದರೆ, ನೇಪಾಳ ಸಹ ಪ್ರಜಾಪ್ರಭುತ್ವ ಪ್ರಧಾನ ‘ಹಿಂದೂ ರಾಷ್ಟ್ರ’ ಎಂದು ಏಕೆ ಘೋಷಿಸಲು ಸಾಧ್ಯವಿಲ್ಲ ?

ಕೆನಡಾದ ಕ್ಯಾಥೋಲಿಕ್ ಚರ್ಚ್‌ನಿಂದ ನಡೆಸಲಾಗುತ್ತಿರುವ ವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಲೈಂಗಿಕ ಶೋಷಣೆ ಪ್ರಕರಣ

ಪೋಪ್ ಫ್ರಾನ್ಸಿಸ್ ಇವರು ಕೆನಡಾದಲ್ಲಿ ಕ್ಯಾಥೋಲಿಕ್ ಚರ್ಚ್‌ನಿಂದ ನಡೆಸಲಾಗುತ್ತಿರುವ ವಿದ್ಯಾಲಯದ ವಸತಿಗೃಹದಲ್ಲಿ ಚಿಕ್ಕಮಕ್ಕಳ ಲೈಂಗಿಕ ಶೋಷಣೆಯ ಬಗ್ಗೆ ಕೆನಡಾದ ಸ್ಥಳೀಯ ಜನರ ಕ್ಷಮೆಯಾಚಿಸಿದ್ದಾರೆ. ಅವರು. ‘ಕ್ಯಾಥೋಲಿಕ್ ನಾಯಕರಿಂದ ಏನೆಲ್ಲಾ ಸಹಿಸ ಬೇಕಾಗಿದೆ, ಅದಕ್ಕಾಗಿ ನನಗೆ ನಾಚಿಕೆ ಆಗುತ್ತದೆ ಮತ್ತು ಸಿಟ್ಟು ಸಹ ಬರುತ್ತಿದೆ.’

ಕರ್ನಾಟಕ ಸರಕಾರ ಪಠ್ಯಕ್ರಮದಲ್ಲಿರುವ ಬ್ರಾಹ್ಮಣ ಸಮಾಜದ ಭಾವನೆಯನ್ನು ನೋಯಿಸುವಂತಹ ಲೇಖನವನ್ನು ತೆಗೆದು ಹಾಕಲಿದೆ !

ಪಠ್ಯಕ್ರಮದಲ್ಲಿರುವ ಬ್ರಾಹ್ಮಣ ಸಮಾಜದ ಭಾವನೆಗಳನ್ನು ನೋಯಿಸುವ ಲೇಖನವನ್ನು ತೆಗೆದುಹಾಕಬೇಕು ಮತ್ತು ಅಲ್ಲಿ ಸನಾತನ ಧರ್ಮದ ಮಾಹಿತಿಯನ್ನು ಸೇರಿಸಬೇಕು ಎಂದು ಕರ್ನಾಟಕ ಸರಕಾರ ಸ್ಥಾಪಿಸಿರುವ ಶಾಲೆಗಳ ಪಠ್ಯಕ್ರಮದ ಪುನರ್‌ವಿಚಾರ ಸಮಿತಿ ತಿಳಿಸಿದೆ.