ಕೆಲವು ದೇಶಗಳು ಇಸ್ಲಾಂ ಅಥವಾ ಕ್ರೈಸ್ತ ದೇಶ ಎಂದು ಘೋಷಿಸಬಹುದಾದರೆ, ನೇಪಾಳ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಏಕೆ ಸಾಧ್ಯವಿಲ್ಲ ?

ನೇಪಾಳದ ಪ್ರವಾಸೋದ್ಯಮ ಸಚಿವ ಪ್ರೇಮ ಅಲೆ ಇವರ ಪ್ರಶ್ನೆ

ಕಾಠ್ಮಂಡೂ (ನೇಪಾಳ) – ಕೆಲವು ದೇಶಗಳು ಇಸ್ಲಾಂ ಅಥವಾ ಕ್ರೈಸ್ತ ದೇಶ ಎಂದು ಘೋಷಿಸಲಾಗುತ್ತಿದ್ದರೆ ಮತ್ತು ಅಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯು ಹಾಗೆ ಇರುವುದಾದರೆ, ನೇಪಾಳ ಸಹ ಪ್ರಜಾಪ್ರಭುತ್ವ ಪ್ರಧಾನ ‘ಹಿಂದೂ ರಾಷ್ಟ್ರ’ ಎಂದು ಏಕೆ ಘೋಷಿಸಲು ಸಾಧ್ಯವಿಲ್ಲ ? ಎಂದು ನೇಪಾಳದ ಪ್ರವಾಸೋದ್ಯಮ ಸಚಿವ ಪ್ರೇಮ ಅಲೆಯುವರು ಇಲ್ಲಿಯ ‘ವರ್ಲ್ಡ್ ಹಿಂದೂ ಫೆಡರೇಷನ್’ನ ಕಾರ್ಯಕಾರಿಣಿಯ ಎರಡು ದಿನದ ಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಸಭೆಯಲ್ಲಿ ನೇಪಾಳ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಮಲೇಶಿಯಾ, ಅಮೇರಿಕಾ, ಜರ್ಮನಿ, ಬ್ರಿಟನ್ ಸಹಿತ ೧೨ ದೇಶಗಳ ೧೫೦ ಪ್ರತಿನಿಧಿಗಳು ಉಪಸ್ಥಿತರಿದ್ದರು. ‘ನಾನು ನೇಪಾಳಿ ಕಾಂಗ್ರೆಸ್, ಸಿಪಿಎನ್-ಮಾವೋಯಿಸ್ಟ್ ಸೆಂಟರ್, ಸಿಪಿಎನ್-ಯು.ಎಂ.ಎಲ್. ಮತ್ತು ಮಧೆಸಿ ದಳ, ಇವರು ನೇಪಾಳವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಮುಂದೆ ಬರಬೇಕು, ಎಂದು ಈ ಸಮಯದಲ್ಲಿ ಅಲೆ ಅವರು ಕರೆ ನೀಡಿದರು. ಜಗತ್ತಿನಲ್ಲಿ ಏಕೈಕ ಹಿಂದೂರಾಷ್ಟ್ರವಾಗಿರುವ ನೇಪಾಳ ೨೦೦೮ ರಲ್ಲಿ ‘ಜಾತ್ಯಾತೀತ ರಾಷ್ಟ್ರ’ ಎಂದು ಘೋಷಿಸಲಾಯಿತು.

ಪ್ರೇಮ ಅಲೆ ತಮ್ಮ ಮಾತನ್ನು ಮುಂದುವರಿಸುತ್ತಾ, ನೇಪಾಳವನ್ನು ಹಿಂದೂ ರಾಷ್ಟ್ರ ಘೋಷಿಸಲು ಒತ್ತಾಯಿಸಲು ಆರಂಭವಾದರೆ ನಾನು ಸಹಾಯ ಮಾಡುವೆನು. ಪ್ರಸ್ತುತ ೫ ಪಕ್ಷಗಳ ಒಕ್ಕೂಟದ ಸರಕಾರದಲ್ಲಿ ಮೂರನೇ ಎರಡರಷ್ಟು ಬಹುಮತ ಸಿಕ್ಕಿದೆ. ಆದ್ದರಿಂದ ಸರಕಾರ ನೇಪಾಳವನ್ನು ಹಿಂದೂ ರಾಷ್ಟ್ರ ಘೋಷಿಸಲು ಜನಾಭಿಪ್ರಾಯ ಸಂಗ್ರಹ ಮಾಡುವ ಪ್ರಯತ್ನ ಮಾಡಬಹುದು. ದೇಶದಲ್ಲಿ ಬಹುಸಂಖ್ಯಾತ ಜನಸಂಖ್ಯೆ ಹಿಂದೂಗಳಾಗಿರುವುದರಿಂದ ಜನಾಭಿಪ್ರಾಯ ಸಂಗ್ರಹದ ಮೂಲಕ ನೇಪಾಳ ಈವರೆಗೆ ಹಿಂದೂ ರಾಷ್ಟ್ರ ಎಂದು ಘೋಷಿಸಬಹುದಾಗಿತ್ತು ಎಂದು ಹೇಳಿದರು.