ಶ್ರೀಲಂಕಾಗೆ ಅರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ೨೨ ಸಾವಿರ ಕೋಟಿ ರೂಪಾಯಿಗಳು ಬೇಕಾಗಿದೆ !

ಹಣಕಾಸು ಸಚಿವ ಅಲಿ ಸಾಬರಿ

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾ ದಿವಾಳಿಯಾಗಿದೆ. ದೇಶದಲ್ಲಿ ಕೇವಲ ೫ ಸಾವಿರ ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಸಂಗ್ರಹದಲ್ಲಿ ಬಾಕಿ ಉಳಿದಿರುವುದು. ಈ ಪರಿಸ್ಥಿತಿಯಿಂದ ಹೊರಬರಲು ಶ್ರೀಲಂಕಾಗೆ ಸುಮಾರು ೨೨ ಸಾವಿರ ಕೋಟಿ ರೂಪಾಯಿಗಳ ಅವಶ್ಯಕತೆ ಇದೆ.

ಒಂದು ವೇಳೆ ಈ ಆರ್ಥಿಕ ನೆರವು ಸಿಕ್ಕರೆ ಮಾತ್ರ ಶ್ರೀಲಂಕಾ ಈ ಬಿಕ್ಕಟ್ಟಿನಿಂದ ಹೊರಬರಬಹುದು, ಎಂದು ಹಣಕಾಸು ಸಚಿವ ಅಲಿ ಸಾಬರಿ ಇವರು ಹೇಳಿದ್ದಾರೆ. ಭಾರತ ೪ ಸಾವಿರ ಕೋಟಿ ನೆರವು ನೀಡಿದೆ.