ಜಮ್ಮೂ-ಕಾಶ್ಮೀರದಲ್ಲಿನ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರ ಸಂದರ್ಭದಲ್ಲಿ ಘನವಾದ ಧೋರಣೆಯಿರಲಿ !

ಜಮ್ಮೂ-ಕಾಶ್ಮೀರ ಉಚ್ಚ ನ್ಯಾಯಾಲಯದಿಂದ ರಾಜ್ಯ ಗೃಹಸಚಿವರಿಗೆ ಆದೇಶ

ಇದನ್ನು ನ್ಯಾಯಾಲಯವು ಏಕೆ ಹೇಳಬೇಕಾಗುತ್ತದೆ ? ನುಸುಳುಕೋರರ ಸಮಸ್ಯೆಯು ಅನೇಕ ವರ್ಷಗಳಿಂದ ಇರುವಾಗಲೂ ರಾಜ್ಯ ಸರಕಾರವು ಇಂತಹ ಧೋರಣೆಯಿಂದ ಅವರನ್ನು ದೇಶದಿಂದ ಏಕೆ ಹೊರಗೆ ಹಾಕಲಿಲ್ಲ ?

ಜಮ್ಮೂ – ಮುಂಬರುವ ೬ ವಾರಗಳಲ್ಲಿ ಜಮ್ಮೂ-ಕಾಶ್ಮೀರ ರಾಜ್ಯದಲ್ಲಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಹುಡುಕಿ ಅವರ ಸೂಚಿಯನ್ನು ತಯಾರಿಸುವ, ಹಾಗೆಯೇ ಈ ಸಂದರ್ಭದಲ್ಲಿ ಘನವಾದ ಧೊರಣೆಯನ್ನು ಇಟ್ಟುಕೊಳ್ಳುವ ಆದೇಶವನ್ನು ಜಮ್ಮೂ-ಕಾಶ್ಮೀರದ ಉಚ್ಚ ನ್ಯಾಯಾಲಯವು ಒಂದು ಜನಹಿತ ಅರ್ಜಿಯ ಆಲಿಕೆಯ ಸಮಯದಲ್ಲಿ ರಾಜ್ಯದ ಗೃಹಸಚಿವರಿಗೆ ನೀಡಿದೆ. ನ್ಯಾಯವಾದಿ ಹುನರ ಗುಪ್ತಾರವರು ಈ ಅರ್ಜಿಯನ್ನು ದಾಖಲಿಸಿದ್ದಾರೆ. ಈ ಅರ್ಜಿಯಲ್ಲಿ ‘ಸೇವಾನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖೆಯನ್ನು ನಡೆಸಿ ರಾಜ್ಯದಲ್ಲಿ ನುಸುಳಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಗೆ ತೆಗೆಯಬೇಕು’, ಎಂದು ಮನವಿ ಮಾಡಲಾಗಿತ್ತು. ನ್ಯಾಯವಾದಿ ಗುಪ್ತಾರವರು ಇದರಲ್ಲಿ, ಸರಕಾರವು ಅವರಿಗಾಗಿ ಯಾವುದೇ ‘ಶರಣಾರ್ಥಿ ಕೇಂದ್ರ’ವನ್ನು ನಿರ್ಮಿಸಿಲ್ಲ ಅಥವಾ ಸಂಯುಕ್ತ ರಾಷ್ಟ್ರಗಳೂ ರಾಜ್ಯ ಸರಕಾರಕ್ಕೆ ಈ ಬಗ್ಗೆ ಆದೇ ನೀಡಿಲ್ಲ. ಈ ನುಸುಳುಕೋರರು ರಾಜ್ಯದ ನಾಗರೀಕರಿಗಾಗಿ ಇರುವ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಸರಕಾರವು ನೀಡಿರುವ ಮಾಹಿತಿಯ ಅನುಸಾರ ರಾಜ್ಯದಲ್ಲಿ ೧೩ ಸಾವಿರದ ೪೦೦ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರು ಇದ್ದಾರೆ; ಆದರೆ ಈ ಸಂಖ್ಯೆಯು ಇನ್ನೂ ಹಚ್ಚಿರುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.