ಕೆನಡಾದ ಕ್ಯಾಥೋಲಿಕ್ ಚರ್ಚ್‌ನಿಂದ ನಡೆಸಲಾಗುತ್ತಿರುವ ವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಲೈಂಗಿಕ ಶೋಷಣೆ ಪ್ರಕರಣ

ಪೋಪ್ ಫ್ರಾನ್ಸಿಸ್ ಇವರಿಂದ ಕ್ಷಮಾಯಾಚನೆ

ಕೇವಲ ಕ್ಷಮಾಯಾಚನೆ ಮಾಡಿ ಪ್ರಯೋಜನವಿಲ್ಲ, ಇದಕ್ಕೆ ಕಾರಣಕರ್ತರಾಗಿರುವವರನ್ನು ಪ್ರಪಂಚದ ಮುಂದೆ ಬಹಿರಂಗ ಪಡಿಸಬೇಕು. ಯಾರು ಬದುಕಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು ಮತ್ತು ಈ ರೀತಿಯ ಘಟನೆಗಳು ಭವಿಷ್ಯದಲ್ಲಿ ನಡೆಯಬಾರದೆಂದು, ‘ವ್ಯಾಟಿಕನ್ ಚರ್ಚ್ ಏನು ಮಾಡಲಿದೆ ?’, ಎಂದನ್ನು ಘೋಷಿಸಬೇಕು !

ಕಳೆದ ಅನೇಕ ದಶಕಗಳಿಂದ ಚರ್ಚ್‌ನ ಪಾದ್ರಿಗಳಿಂದ ಮಕ್ಕಳು, ಮಹಿಳೆಯರು ಮತ್ತು ನನ್‌ಗಳ ಲೈಂಗಿಕ ಶೋಷಣೆಯ ನೂರಾರು ಘಟನೆಗಳು ಜಗತ್ತಿನಲ್ಲಿ ಬಹಿರಂಗವಾಗಿದೆ. ಇದಕ್ಕಾಗಿ ಹಿಂದಿನ ಪೋಪ್‌ರಿಂದ ಕ್ಷಮಾಯಾಚನೆ ಮಾಡಲಾಗಿತ್ತು. ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಲಾಗಿತ್ತು; ಆದರೆ ಇಂತಹ ಘಟನೆಗಳು ಈಗಲೂ ನಿಂತಿಲ್ಲ. ಇದರಲ್ಲಿ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗುವಂತಹ ಕಠಿಣ ಶಿಕ್ಷೆ ನೀಡಲು ವ್ಯಾಟಿಕನ್ ಪೋಲಿಸ್ ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕು !

ವ್ಯಾಟಿಕನ್ ಸಿಟಿ – ಪೋಪ್ ಫ್ರಾನ್ಸಿಸ್ ಇವರು ಕೆನಡಾದಲ್ಲಿ ಕ್ಯಾಥೋಲಿಕ್ ಚರ್ಚ್‌ನಿಂದ ನಡೆಸಲಾಗುತ್ತಿರುವ ವಿದ್ಯಾಲಯದ ವಸತಿಗೃಹದಲ್ಲಿ ಚಿಕ್ಕಮಕ್ಕಳ ಲೈಂಗಿಕ ಶೋಷಣೆಯ ಬಗ್ಗೆ ಕೆನಡಾದ ಸ್ಥಳೀಯ ಜನರ ಕ್ಷಮೆಯಾಚಿಸಿದ್ದಾರೆ. ಅವರು. ‘ಕ್ಯಾಥೋಲಿಕ್ ನಾಯಕರಿಂದ ಏನೆಲ್ಲಾ ಸಹಿಸ ಬೇಕಾಗಿದೆ, ಅದಕ್ಕಾಗಿ ನನಗೆ ನಾಚಿಕೆ ಆಗುತ್ತದೆ ಮತ್ತು ಸಿಟ್ಟು ಸಹ ಬರುತ್ತಿದೆ.’ ಕೆನಡಾದ ಸ್ಥಳೀಯ ನಾಯಕ ಮತ್ತು ಇತರ ಪ್ರತಿನಿಧಿ ಇವರು ಇಲ್ಲಿಯ ಬೈಠಕನಲ್ಲಿ ಮಾತನಾಡುವಾಗ, ಆದಷ್ಟು ಬೇಗನೆ ಕೆನಡಾಗೆ ಹೋಗುವುದಾಗಿ ಹೇಳಿದರು. ಕೆನಡಾದ ಸ್ಥಳೀಯ ನಾಯಕರು, ಪೋಪ್ ಇವರು ಕೆನಡಾಗೆ ಬಂದು ಕ್ಷಮೆಯಾಚಿಸಬೇಕು ಎಂದು ಬೇಡಿಕೆ ಇತ್ತು.

ಕೆನಡಾದ ಒಂದು ಆಯೋಗ ೨೦೧೫ ನೇ ವರ್ಷದ ವರದಿಯಲ್ಲಿ, ಕೆನಡಾದಲ್ಲಿ ಕೆಲವು ದಶಕಗಳ ಹಿಂದೆ ನಡೆದಿದ್ದ ವಿದ್ಯಾಲಯದಲ್ಲಿ ಸ್ಥಳೀಯ ಮಕ್ಕಳ ಲೈಂಗಿಕ ಶೋಷಣೆ ನಡೆಸುವುದರ ಜೊತೆಗೆ ಉಪವಾಸವಿಟ್ಟು ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದರಲ್ಲಿ ಅನೇಕ ಮಕ್ಕಳು ಸಾವನ್ನಪ್ಪಿದ್ದು ಅವರನ್ನು ಈ ವಿದ್ಯಾಲಯದ ಪರಿಸರದಲ್ಲಿ ಹುಳಲಾಗಿದೆ.