ಕರ್ನಾಟಕ ಸರಕಾರ ಪಠ್ಯಕ್ರಮದಲ್ಲಿರುವ ಬ್ರಾಹ್ಮಣ ಸಮಾಜದ ಭಾವನೆಯನ್ನು ನೋಯಿಸುವಂತಹ ಲೇಖನವನ್ನು ತೆಗೆದು ಹಾಕಲಿದೆ !

ಕರ್ನಾಟಕದ ಭಾಜಪ ಸರಕಾರದ ಶ್ಲಾಘನೀಯ ನಿರ್ಣಯ ! ಇಂತಹ ಬ್ರಾಹ್ಮಣದ್ವೇಷಿ ಲೇಖನವನ್ನು ತೆಗೆದುಹಾಕುವುದರೊಂದಿಗೆ ಲೇಖನ ಬರೆದಿರುವ ಬ್ರಾಹ್ಮಣದ್ವೇಷಿಗಳ ಮೇಲೆಯೂ ಕಠಿಣ ಕ್ರಮ ಜರುಗಿಸುವುದು ಆವಶ್ಯಕವಾಗಿದೆ !

ಬೆಂಗಳೂರು – ಪಠ್ಯಕ್ರಮದಲ್ಲಿರುವ ಬ್ರಾಹ್ಮಣ ಸಮಾಜದ ಭಾವನೆಗಳನ್ನು ನೋಯಿಸುವ ಲೇಖನವನ್ನು ತೆಗೆದುಹಾಕಬೇಕು ಮತ್ತು ಅಲ್ಲಿ ಸನಾತನ ಧರ್ಮದ ಮಾಹಿತಿಯನ್ನು ಸೇರಿಸಬೇಕು ಎಂದು ಕರ್ನಾಟಕ ಸರಕಾರ ಸ್ಥಾಪಿಸಿರುವ ಶಾಲೆಗಳ ಪಠ್ಯಕ್ರಮದ ಪುನರ್‌ವಿಚಾರ ಸಮಿತಿ ತಿಳಿಸಿದೆ.

೧. ೮ ನೇ ತರಗತಿಯ ಸಾಮಾಜ ಶಾಸ್ತ್ರದ ಪಠ್ಯಕ್ರಮದ ೬ನೇ ಅಧ್ಯಾಯದಲ್ಲಿರುವ ಪ್ರಾಸ್ತಾವಿಕ ಭಾಗದಲ್ಲಿ ‘ವೈದಿಕ ಕಾಲದಲ್ಲಿ ಹವನದ ಸಮಯದಲ್ಲಿ ಬ್ರಾಹ್ಮಣರು ತುಪ್ಪ ಮತ್ತು ಹಾಲನ್ನು ಉಪಯೋಗಿಸುತ್ತಿದ್ದುದರಿಂದ ಆಹಾರದ ಕೊರತೆ ನಿರ್ಮಾಣವಾಗಿತ್ತು. (ಬ್ರಾಹ್ಮಣ ದ್ವೇಷದ ಕುರಿತು ಎಷ್ಟು ಕೀಳುಮಟ್ಟಕ್ಕೆ ಇಳಿದು ತರ್ಕಬದ್ಧವಲ್ಲದ ಮಾಹಿತಿಯನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿತ್ತು, ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು) ಸಂಸ್ಕೃತ ಭಾಷೆಯ ಧಾರ್ಮಿಕ ವಿಧಿಗಳಲ್ಲಿ ಮಂತ್ರೋಚ್ಚಾರದಲ್ಲಿ ಉಪಯೋಗಿಸಲಾಗುತ್ತಿತ್ತು. ಅದು ಆಗಿನ ಕಾಲದ ಸಾಮಾನ್ಯ ಜನರಿಗೆ ತಿಳಿಯುತ್ತಿರಲಿಲ್ಲ. ಬೌದ್ಧ ಮತ್ತು ಜೈನ ಧರ್ಮ ಸುಲಭ ಮಾರ್ಗದಿಂದ ಕಲಿಸುತ್ತಿದುದರಿಂದ ಈ ಧರ್ಮಗಳ ಬೆಳವಣಿಗೆಯಾಯಿತು’, ಈ ಲೇಖನದಿಂದ ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಆದುದರಿಂದ ಈ ಲೇಖನವನ್ನು ತೆಗೆದುಹಾಕಲು ನಿರ್ಧರಿಸಲಾಯಿತು.

೨. ಫೆಬ್ರುವರಿ ೨೦೨೧ ರಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸದಸ್ಯರು ಆಗಿನ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು ಮತ್ತು ಸಾಮಾಜ ಶಾಸ್ತ್ರದ ಪಠ್ಯಕ್ರಮದಲ್ಲಿರುವ ಒಂದು ಪ್ರಕರಣದ ಕೆಲವು ಭಾಗಗಳ ಕುರಿತು ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ತದನಂತರ ಯಡಿಯೂರಪ್ಪ ಸರಕಾರವು ಫೆಬ್ರುವರಿ ೧೭, ೨೦೨೧ ರಂದು ಒಂದು ಆದೇಶವನ್ನು ಜಾರಿಗೊಳಿಸಿ ಈ ಪಾಠವನ್ನು ಕಲಿಸಬಾರದು ಅಥವಾ ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ಆದೇಶ ನೀಡಿತ್ತು.