ಕೇವಲ ಭಾರತದಲ್ಲಿಯಷ್ಟೇ ಧ್ವನಿವರ್ಧಕದ ಮೇಲೆ ಅಜಾನ್ ಕೂಗು ಏಕೆ ಕೇಳಿಸುತ್ತದೆ ? – ಜನಪ್ರಿಯ ಗಾಯಕಿ ಅನುರಾಧಾ ಪೌಡವಾಲ

ಮುಸಲ್ಮಾನ ದೇಶದಲ್ಲಿ ಧ್ವನಿವರ್ಧಕದ ಮೇಲೆ ಅಜಾನ ಕೂಗುವುದಿಲ್ಲವೆಂದು ತಿಳಿಸಿದರು

ನವದೆಹಲಿ – ನಾನು ಜಗತ್ತಿನ ಅನೇಕ ಸ್ಥಳಗಳಿಗೆ ಹೋಗಿದ್ದೇನೆ. ಕೊಲ್ಲೀ ರಾಷ್ಟ್ರಗಳಿಗೂ ಹೋಗಿದ್ದೇನೆ. ಅಲ್ಲಿ ಧ್ವನಿವರ್ಧಕ ನಿಷೇಧವಿದೆ. ಮುಸಲ್ಮಾನ ದೇಶಗಳಲ್ಲಿ ಧ್ವನಿವರ್ಧಕದ ಮೂಲಕ ಅಜಾನ್‌ನ ಕೂಗು ಕೇಳಿಸುವುದಿಲ್ಲ. ಹೀಗಿರುವಾಗ ಕೇವಲ ಭಾರತದಲ್ಲಿಯಷ್ಟೇ ಅದು ಏಕೆ ಕೇಳಿಸುತ್ತದೆ ?, ಎಂದು ಸುಪ್ರಸಿದ್ಧ ಗಾಯಕಿ ಅನುರಾಧಾ ಪೌಡವಾಲ ಇವರು ಪ್ರಶ್ನಿಸಿದರು. ‘ಝೀ ನ್ಯೂಸ’ ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.

ಅನುರಾಧಾ ಪೌಡವಾಲ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, “ನಾನು ಯಾವುದೇ ಧರ್ಮದ ವಿರುದ್ಧವಿಲ್ಲ; ಆದರೆ ದೇಶದಲ್ಲಿ ಇದೇ ರೀತಿ ಅಜಾನ ನೀಡಲು ತೊಡಗಿದರೆ, ಇತತ ಜನರೂ ಧ್ವನಿವರ್ಧಕದ ಮೂಲಕ ಹನುಮಾನ ಚಾಲೀಸಾ ಹಾಕುವರು. ಇದರಿಂದ ಮುಂದೆ ವಿವಾದ ನಿರ್ಮಾಣವಾಗಬಹುದು. ಇದು ಬಹಳ ದುರದೃಷ್ಟಕರವಾಗಿದೆ”. ಎಂದು ಹೇಳಿದರು.

ಹಿಂದೂಗಳು ೪ ವೇದ, ೧೮ ಪುರಾಣಗಳು ಮತ್ತು ೪ ಮಠ ಇವುಗಳ ವಿಷಯದಲ್ಲಿ ತಿಳಿದುಕೊಳ್ಳಬೇಕು !

ಅನುರಾಧಾ ಪೌಡವಾಲ ತಮ್ಮ ಮಾತನ್ನು ಮುಂದುವರಿಸುತ್ತಾ, “ನಮ್ಮ ಮಕ್ಕಳಿಗೆ ದೇಶದ ಸುಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ‘ಆದಿ ಶಂಕರಾಚಾರ್ಯರು ನಮ್ಮ ಧರ್ಮಗುರುಗಳಾಗಿದ್ದಾರೆ’, ಇದು ಅವರಿಗೆ ತಿಳಿಯಬೇಕು. ಹಿಂದೂಗಳು ೪ ವೇದ, ೧೮ ಪುರಾಣಗಳು ಮತ್ತು ೪ ಮಠಗಳ ವಿಷಯದಲ್ಲಿ ತಿಳಿದುಕೊಳ್ಳಬೇಕು.” ಎಂದು ಹೇಳಿದರು.