‘ನನಗೆ ರಾಮ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ !’ (ಅಂತೆ)

ತಮಿಳುನಾಡಿನಲ್ಲಿರುವ ಕಾಂಗ್ರೆಸ್ಸಿನ ಮಹಿಳಾ ಶಾಸಕಿಯಾದ ಜ್ಯೋತಿಮಣಿಯವರು ‘ನನಗೆ ಭಗವಾನ ರಾಮನ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ’ ಎಂಬಂತಹ ಹೇಳಿಕೆಯನ್ನು ನೀಡಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗಿದೆ.

ದೇಶದಿಂದ ೫ ಕೋಟಿ ನುಸುಳುಕೋರರನ್ನು ಹೊರಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ೫ ವರ್ಷಗಳಿಂದ ಬಾಕಿ

೫ ಕೋಟಿ ನುಸುಳುಕೋರರನ್ನು ದೇಶದಿಂದ ಗಡಿಪಾರು ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ೨೦೧೭ರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಅರ್ಜಿಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಪ್ರತಿಕ್ರಿಯೆ ಕೋರಿ ನ್ಯಾಯಾಲಯ ನೋಟಿಸ ಜಾರಿ ಮಾಡಿತ್ತು.

ಪಾಕಿಸ್ತಾನದಲ್ಲಿ ೬ ಜನರಿಗೆ ಗಲ್ಲು ಶಿಕ್ಷೆ ಹಾಗೂ ೭ ಜನರಿಗೆ ಜೀವಾವಧಿ ಶಿಕ್ಷೆ !

ಮಹಮ್ಮದ ಪೈಗಂಬರ ಅವರನ್ನು ಅವಮಾನಸಿದ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯಾದ ಪ್ರಿಯಂತಾ ಕುಮಾರ ಅವರನ್ನು ಪಾಕಿಸ್ತಾನದ ಸಿಯಾಲಕೋಟ ನಗರದಲ್ಲಿ ಡಿಸೆಂಬರ ೩, ೨೦೨೧ ರಂದು ಜನಸಮೂಹವೊಂದು ಸಜೀವ ದಹನ ಮಾಡಿತ್ತು. ಪ್ರಕರಣದಲ್ಲಿ ನ್ಯಾಯಾಲಯವು ೮೯ ಜನರನ್ನು ತಪ್ಪಿತಸ್ಥೆರೆಂದು ತೀರ್ಪು ನೀಡಿದೆ.

ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಸಾರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಭೇಟಿ ನೀಡಿರುವ ಆರೋಪ

ಪಂಜಾಬಿನ ಮುಖ್ಯಮಂತ್ರಿ ಭಗವಂತ ಮಾನರವರ ಮೇಲೆ ಬೈಸಾಖಿಯ (ವೈಶಾಖ ಮಾಸದ ಮೊದಲನೇ ದಿನ ಉತ್ತರ ಭಾರತದಲ್ಲಿ ಆಚರಿಸಲಾಗುವ ಉತ್ಸವ) ದಿನ ಸರಾಯಿ ಕುಡಿದು ತಖ್ತ ಶ್ರೀ ದಮದಮಾ ಸಾಹಿಬಕ್ಕೆ ಹೋಗಿರುವ ಆರೋಪವನ್ನು ಹೊರಿಸಲಾಗಿದೆ.

ನಗರಗಳಲ್ಲಿ ಪ್ರತಿ ಕುಟುಂಬಕ್ಕೆ ಒಂದು ಹಸು ಅಥವಾ ಎಮ್ಮೆಯನ್ನು ಮಾತ್ರ ಸಾಕಲು ಅವಕಾಶ

ರಾಜಸ್ಥಾನದ ಕಾಂಗ್ರೆಸ್ ಸರಕಾರವು ಪಶುಸಂಗೋಪನೆಗಾಗಿ ಹೊಸ ಕಾನೂನನ್ನು ಜಾರಿಗೆ ತಂದಿದೆ. ಅದರಂತೆ ನಗರ ಪ್ರದೇಶಗಳಲ್ಲಿ ಒಂದು ಕುಟುಂಬಕ್ಕೆ ಕೇವಲ ಒಂದು ಹಸು ಅಥವಾ ಎಮ್ಮೆ ಸಾಕಲು ಅವಕಾಶವಿದೆ. ಅಲ್ಲದೆ ಇದಕ್ಕಾಗಿ ಸರಕಾರಕ್ಕೆ ವಾರ್ಷಿಕ ೧೦೦೦ ರೂಪಾಯಿ ಶುಲ್ಕ ಪಾವತಿಸಿ ವಾರ್ಷಿಕ ಪರವಾನಗಿ ಪಡೆಯಬೇಕು.

ಪಾಕಿಸ್ತಾನದ ಪ್ರಧಾನಿ ಶಾಹಬಾಝ ಶರೀಫರವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಿಂದ ಪಾಕಿಸ್ತಾನದಲ್ಲಿ ಅವರ ಮೇಲೆ ಟೀಕೆ

ಪಾಕಿಸ್ತಾನದ ಪ್ರಧಾನಿ ಶಾಹಬಾಜ ಶರೀಫರವರು ಏಪ್ರಿಲ ೧೭ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭಾಷಯ ನೀಡುವ ಕುರಿತು ಪತ್ರ ಬರೆದಿದ್ದರು. ‘ಎರಡೂ ದೇಶಗಳೂ ಶಾಂತಿಯುತವಾಗಿ ಜಮ್ಮೂ-ಕಾಶ್ಮೀರ ಹಾಗೂ ಇತರ ವಿವಾದಿತ ಅಂಶಗಳನ್ನು ಬಗೆಹರಿಸಬೇಕು’, ಎಂದು ಶರೀಫರವರು ಬರೆದಿರುವ ಪತ್ರದಲ್ಲಿ ಹೇಳಿದ್ದರು.

ದೇಶದಲ್ಲಿನ ೮ ನಗರಗಳಲ್ಲಿ ೨೦೦೫ರಿಂದ ೨೦೧೮ರ ಸಮಯದಲ್ಲಿ ವಾಯುಮಾಲಿನ್ಯದಿಂದಾಗಿ ೧ ಲಕ್ಷ ಜನರ ಮೃತ್ಯು !

ಒಂದು ಅಂತರಾಷ್ಟ್ರೀಯ ಅಧ್ಯಯನದ ಅನುಸಾರ ಭಾರತದಲ್ಲಿ ೨೦೦೫ ರಿಂದ ೨೦೧೮ರ ವರೆಗೆ ೮ ನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ ೧ ಲಕ್ಷ ಜನರು ಅಕಾಲಿಕ ಮರಣವಾಗಿದೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ನಾಸಾ’ ಮತ್ತು ಯುರೋಪಿನ ಬಾಹ್ಯಾಕಾಶ ವ್ಯವಸ್ಥೆಯಿಂದ ದೊರೆತ ಮಾಹಿತಿಯಿಂದಾಗಿ ಈ ಅಧ್ಯಯನವನ್ನು ಮಾಡಲಾಗಿದೆ.

೧೦ನೇ ತರಗತಿಯವರೆಗೆ ‘ಹಿಂದಿ’ ವಿಷಯವನ್ನು ಕಡ್ಡಾಯಗೊಳಿಸಿದ್ದರಿಂದ ಈಶಾನ್ಯ ರಾಜ್ಯಗಳ ವಿರೋಧ !

ಈಶಾನ್ಯ ರಾಜ್ಯಗಳಲ್ಲಿ ೧೦ನೇ ತರಗತಿಯಲ್ಲಿ ‘ಹಿಂದಿ’ಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಆಸ್ಸಾಂ ಸಾಹಿತ್ಯ ಸಭೆ ಸೇರಿದಂತೆ ಈಶಾನ್ಯದ ಹಲವಾರು ಸಂಘಟನೆಗಳು ವಿರೋಧಿಸಿವೆ. ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು ಎಂದು ಅಗ್ರಹಿಸಿದರು.

ಹಲ್ದಾನಿ(ಉತ್ತರಾಖಂಡ)ಯಲ್ಲಿ ರಾಷ್ಟ್ರಧ್ವಜದಿಂದ ಸೈಕಲ ಸ್ವಚ್ಛ ಮಾಡುತ್ತಿದ್ದ ರಫಿಕನ ಬಂಧನ !

ರಾಷ್ಟ್ರಧ್ವಜವನ್ನು ಸುಡುವ ಅಥವಾ ಹರಿದು ಹಾಕುವ ಅಥವಾ ಇನ್ಯಾವುದೇ ರೀತಿಯಲ್ಲಿ ಅದರ ಅವಹೇಳನ ಮಾಡುವವರು ಮತಾಂಧರೇ ಆಗಿರುತ್ತಾರೆ, ಇದು ಬಹಿರಂಗ ಸತ್ಯವಿದೆ. ಇಂತಹ ರಾಷ್ಟ್ರವಿರೋಧಿ ವಿಕೃತಿಗಳ ವಿರುದ್ಧದ ಆಯಾ ಸಮಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !

ಕುತುಬಮಿನಾರ ಪ್ರಾಚೀನ ವಿಷ್ಣು ದೇವಸ್ಥಾನದ ‘ಗರುಡ ಸ್ಥಂಭ’ವಾಗಿದ್ದರಿಂದ ಅದನ್ನು ಹಿಂದೂಗಳಿಗೆ ಒಪ್ಪಿಸಬೇಕು !- ವಿಶ್ವ ಹಿಂದೂ ಪರಿಷತ್ತು

ಇಲ್ಲಿನ ಕುತುಬಮಿನಾರಿನ ಪರಿಸರದಲ್ಲಿರುವ ಶ್ರೀ ಗಣೇಶನ ಮೂರ್ತಿಯನ್ನು ಸ್ಥಳಾಂತರಿಸಿ ಅಲ್ಲಿ ಸಂಗ್ರಹಾಲಯವನ್ನು ಇಡುವ ಬಗ್ಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೆಲವು ಪದಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿದರು.