ರಾಜ್ಯಗಳು ಪ್ರಾಣವಾಯುವಿನ ಕೊರತೆಯಿಂದಾಗಿ ಘಟಿಸಿದ ಸಾವುಗಳ ಸಂಖ್ಯೆಯನ್ನು ನೀಡಿಲ್ಲ ! – ಕೇಂದ್ರ ಸರಕಾರ

ಕೇಂದ್ರೀಯ ಆರೋಗ್ಯ ಮತ್ತು ಕುಟುಂಬಕಲ್ಯಾಣ ರಾಜ್ಯ ಮಂತ್ರಿಗಳಾದ ಭಾರತೀ ಪವಾರ

ನವದೆಹಲಿ – ಕೊರೋನಾದ ಸಮಯದಲ್ಲಿ ಯಾವುದೇ ರಾಜ್ಯ ಸರಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಪ್ರಾಣವಾಯುವಿನ (ಆಕ್ಸಿಜನಿನ) ಕೊರತೆಯಿಂದಾಗಿ ಸಂಭವಿಸಿರುವ ಸಾವಿನ ಮಾಹಿತಿಯನ್ನು ಇಂದಿಗೂ ನೀಡಿಲ್ಲ, ಎಂಬ ಮಾಹಿತಿಯನ್ನು ಕೇಂದ್ರೀಯ ಆರೋಗ್ಯ ಮತ್ತು ಕುಟುಂಬಕಲ್ಯಾಣ ರಾಜ್ಯ ಮಂತ್ರಿಗಳಾದ ಭಾರತೀ ಪವಾರರವರು ಏಪ್ರಿಲ್‌ ೫ರಂದು ಸಂಸತ್ತಿನ ಪ್ರಶ್ನೋತ್ತರದ ಅವಧಿಯಲ್ಲಿ ನೀಡಿದರು. ಕೇಂದ್ರ ಸರಕಾರವು ಪ್ರಾಣವಾಯುವಿನ ಕೊರತೆಯಿಂದ ಸಂಭವಿಸಿದ ಸಾವುಗಳ ಮಾಹಿತಿಯನ್ನು ಕೇಳಿತ್ತು, ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಏಪ್ರಿಲ್‌ ೪, ೨೦೨೨ರ ವರೆಗೆ ಕೊರೋನಾದಿಂದಾಗಿ ದೇಶದಲ್ಲಿ ಒಟ್ಟೂ ೫ ಲಕ್ಷದ ೨೧ ಸಾವಿರದ ೩೫೮ ಜನರ ಸಾವು ಸಂಭವಿಸಿರುವ ಮಾಹಿತಿಯನ್ನೂ ಅವರು ನೀಡಿದ್ದಾರೆ.