೧೩ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲತ್ಕಾರ : ಹುಡುಗಿಯ ಸ್ತನಗಳು, ಗುಪ್ತಾಂಗ ಮತ್ತು ನಾಲಿಗೆ ಕತ್ತರಿಸಲಾಯಿತು

ಇಲ್ಲಿಯ ಓರ್ವ ೧೩ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಸಿ ಆಕೆಯ ಗುಪ್ತಂಗ, ಸ್ತನಗಳು ಮತ್ತು ನಾಲಿಗೆ ಕತ್ತರಿಸಲಾಯಿತು. ನಂತರ ಆಕೆಯನ್ನು ಮೃತಪಟ್ಟಳೆಂದು ಎಂದು ತಿಳಿದು ಉದ್ಯಾನವನದಲ್ಲಿ ಎಸೆದು ಆರೋಪಿಗಳು ಹೋಗಿದ್ದಾರೆ.

ನರಾಧಮ ‘ಲವ್-ಜಿಹಾದಿ’ಗಳನ್ನು ತಡೆಯಲು ರಾಜ್ಯದಲ್ಲಿ ಕಟ್ಟುನಿಟ್ಟಿನ ಮತ್ತು ಪ್ರತ್ಯೇಕ ಕಾನೂನು ರೂಪಿಸಿ !

ಮುಂಬಯಿನ ಹಿಂದೂ ಯುವತಿ ಶ್ರದ್ಧಾ ವಾಲಕರ್ ಅನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ‘ಲಿವ್-ಇನ್’ನಲ್ಲಿರಲು ಮತ್ತು ಮದುವೆಯ ಬಗ್ಗೆ ಕೇಳಿದಾಗ ಅವಳನ್ನು ಥಳಿಸಿ ಬರ್ಬರವಾಗಿ ಸಾಯಿಸಿದ ಲವ್-ಜಿಹಾದಿ ಆಫ್ತಾಬ್ ಈತ ಕ್ರೂರ, ನರಾಧಮನಾಗಿದ್ದಾನೆ. ಯಾರನ್ನು ಪ್ರೀತಿಸುತ್ತೇವೆಯೋ ಆ ವ್ಯಕ್ತಿಯನ್ನು ಯಾರೂ ಹೀಗೆ ಬರ್ಬರವಾಗಿ ಕೊಲ್ಲುವುದಿಲ್ಲ. ಹೀಗಾಗಿ ಈ ಕೊಲೆಯ ತನಿಖೆ ನಡೆಸುವಾಗ ಹತ್ಯೆಯ ಉದ್ದೇಶ ತಿಳಿಯಬೇಕಿದೆ.

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ‘ವಂದೇ ಭಾರತ ರೈಲಿ’ಗೆ ಪ್ರಧಾನಿಯವರಿಂದ ಹಸಿರು ನಿಶಾನೆ !

ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಭಾರತದ ಎರಡು ದಿನದ ಪ್ರವಾಸ ಮಾಡುತ್ತಿದ್ದಾರೆ. ಅವರು ಬೆಂಗಳೂರು ರೈಲು ನಿಲ್ದಾಣದಲ್ಲಿ ಮೈಸೂರು-ಚೆನ್ನೈ ವಂದೇ ಭಾರತ ರೈಲನ್ನು ನವೆಂಬರ್ ೧೧ ರಂದು ಹಸಿರು ನಿಶಾನೆ ತೋರಿಸಿದರು.

‘ಜನ ಗಣ ಮನ’ ಮತ್ತು ‘ವಂದೇ ಮಾತರಂ’ ಇವುಗಳಿಗೆ ಸಮಾನ ಸ್ಥಾನ ಇರುವುದರಿಂದ ಅದನ್ನು ಗೌರವಿಸಿ ! – ಕೇಂದ್ರ ಸರಕಾರ

ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಇವೆರಡಕ್ಕೂ ಸಮಾನ ಸ್ಥಾನ ಇರುವುದರಿಂದ ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನು ಎರಡನ್ನೂ ಗೌರವಿಸಬೇಕೆಂದು, ಕೇಂದ್ರ ಸರಕಾರ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಹೇಳಿದೆ.

ಗ್ರಾಹಕರಿಗೆ ೧೦ ಲಕ್ಷ ಪರಿಹಾರ ನೀಡಬೇಕೆಂದು ಇಬ್ಬರು ಅಂಗಡಿ ಮಾಲೀಕರಿಗೆ ಶಿಕ್ಷೆ

ನ್ಯಾಯಾಲಯವು ಹರಿದ್ವಾರದಲ್ಲಿ ಸಾರಾಯಿ ಮಾರಾಟ ಮಾಡುವ ೨ ಅಂಗಡಿಗಳಿಗೆ ಸಾರಾಯಿ ಮಾರಾಟ ಮಾಡುವಾಗ ಹೆಚ್ಚು ಬೆಲೆ ತೆಗೆದುಕೊಂಡಿರುವ ಪ್ರಕರಣದಲ್ಲಿ ೧೦ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ಅದರ ಜೊತೆಗೆ ಮೊಕದ್ದಮೆಯ ಖರ್ಚಿಗಾಗಿ ೧೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ ಅವರಿಗೆ ಬೆದರಿಕೆ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ ರಹೀಮ ಅವರ ಭಕ್ತರಿಂದ ಬೆದರಿಕೆಗಳು ಬರುತ್ತಿವೆ ಎಂದು ಮಲಿವಾಲ ಅವರ ಆರೋಪ

೧೦ ಸಾವಿರದ ೮೮೯ ಮಸೀದಿಗಳಿಗೆ ಧ್ವನಿವರ್ಧಕ ಬಳಸಲು ಅನುಮತಿಸಿದ ರಾಜ್ಯ ಸರಕಾರ

ರಾಜ್ಯದ ಭಾಜಪ ಸರಕಾರವು ೧೦ ಸಾವಿರದ ೮೮೯ ಮಸೀದಿಗಳಿಗೆ ಧ್ವನಿವರ್ಧಕ ಅಳವಡಿಸಲು ಪುನಃ ಅನುಪತಿಯನ್ನು ನೀಡಿದೆ. ರಾಜ್ಯದಲ್ಲಿ ಪೊಲೀಸರ ಬಳಿ ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿಗಳಿಂದ ೧೭ ಸಾವಿರದ ೮೫೦ ಅರ್ಜಿಗಳು ಬಂದಿತ್ತು. ಅದರಲ್ಲಿ ೧೦ ಸಾವಿರದ ೮೮೯ ಮಸೀದಿ ಮತ್ತು ೩ ಸಾವಿರ ದೇವಸ್ಥಾನ ಹಾಗೂ ೧ ಸಾವಿರದ ೪೦೦ ಚರ್ಚ್‌ಗಳಿಗೆ ಧ್ವನಿ ವರ್ಧಕಗಳನ್ನು ಅಳವಡಿಸಲು ಅನುಮತಿ ನೀಡಲಾಗಿದೆ.

ಗುಜರಾತದಲ್ಲಿ ದೀಪಾವಳಿ ಕಾಲದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರೆ ಯಾವುದೇ ದಂಡವಿಲ್ಲ ! – ಗುಜರಾತ ಗೃಹ ಸಚಿವರ ಘೋಷಣೆ

ಅಕ್ಟೋಬರ್ ೨೧ ರಿಂದ ಅಕ್ಟೋಬರ್ ೨೭ ರವರೆಗೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ನಿಮ್ಮಿಂದ ಯಾವುದೇ ದಂಡವನ್ನೂ ವಸೂಲಿ ಮಾಡಲಾಗುವುದಿಲ್ಲ. ಸ್ವತಃ ಮುಖ್ಯಮಂತ್ರಿಯವರ ಒಪ್ಪಿಗೆ ಮೇರೆಗೆ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ

ತೆಲಂಗಾಣದಲ್ಲಿ ಹಿಂದೂ ಮಹಿಳೆಯರಿಗೆ ಪರೀಕ್ಷಾ ಕೇಂದ್ರದ ಪ್ರವೇಶಕ್ಕಾಗಿ’ ಮಂಗಳಸೂತ್ರ’ ತೆಗೆಯಲು ಹೇಳಲಾಯಿತು !

ಮುಸಲ್ಮಾನ ಮಹಿಳೆಯರು ಮಾತ್ರ ‘ಬುರ್ಖಾ’ ಸಹಿತ ಪ್ರವೇಶ
ಅಲ್ಪಸಂಖ್ಯಾತರನ್ನು ಒಲೈಸುವ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿದೆಯೋ, ಅಲ್ಲಿ ಈ ರೀತಿಯ ಘಟನೆಗಳಾಗುವುದರಲ್ಲಿ ಆಶ್ಚರ್ಯವೇನು ಇಲ್ಲ ?