೧೦ ಸಾವಿರದ ೮೮೯ ಮಸೀದಿಗಳಿಗೆ ಧ್ವನಿವರ್ಧಕ ಬಳಸಲು ಅನುಮತಿಸಿದ ರಾಜ್ಯ ಸರಕಾರ

ಕೇವಲ ೩ ಸಾವಿರ ದೇವಸ್ಥಾನಗಳಿಗೆ ಧ್ವನಿವರ್ಧಕದ ಅನುಮತಿ

ಬೆಂಗಳೂರು : ರಾಜ್ಯದ ಭಾಜಪ ಸರಕಾರವು ೧೦ ಸಾವಿರದ ೮೮೯ ಮಸೀದಿಗಳಿಗೆ ಧ್ವನಿವರ್ಧಕ ಅಳವಡಿಸಲು ಪುನಃ ಅನುಪತಿಯನ್ನು ನೀಡಿದೆ. ರಾಜ್ಯದಲ್ಲಿ ಪೊಲೀಸರ ಬಳಿ ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿಗಳಿಂದ ೧೭ ಸಾವಿರದ ೮೫೦ ಅರ್ಜಿಗಳು ಬಂದಿತ್ತು. ಅದರಲ್ಲಿ ೧೦ ಸಾವಿರದ ೮೮೯ ಮಸೀದಿ ಮತ್ತು ೩ ಸಾವಿರ ದೇವಸ್ಥಾನ ಹಾಗೂ ೧ ಸಾವಿರದ ೪೦೦ ಚರ್ಚ್‌ಗಳಿಗೆ ಧ್ವನಿ ವರ್ಧಕಗಳನ್ನು ಅಳವಡಿಸಲು ಅನುಮತಿ ನೀಡಲಾಗಿದೆ. ಈ ಅನುಮತಿಯನ್ನು ಕೇವಲ ೨ ವರ್ಷಗಳಿಗಾಗಿ ಮಾತ್ರ ನೀಡಲಾಗಿದೆ.

(ಸೌಜನ್ಯ : Dighvijay 24X7 News)

ಮುಂಜಾನೆ ಮಸೀದಿಗಳ ಮೇಲೆ ಜೋರಾಗಿ ಅಜಾನ್ ಕೂಗುವ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳು ಈ ವರ್ಷದ ಆರಂಭದಲ್ಲಿ ಪ್ರತಿಭಟನೆ ನಡೆಸಿದ್ದವು. ಮಸೀದಿಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಹೇಳಿ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಲು ಒತ್ತಾಯಿಸಲಾಯಿತು. ಅಲ್ಲದೆ, ಬೆಳಗ್ಗೆ ೫ ಗಂಟೆಯಿಂದಲೇ ಹಿಂದೂ ದೇವಾಲಯಗಳಲ್ಲಿ ಧ್ವನಿವರ್ಧಕಗಳಿಂದ ಮಂತ್ರಜಪ, ಆರತಿ ಇತ್ಯಾದಿ ಹಾಕುವಂತೆ ಕರೆ ನೀಡಲಾಗಿತ್ತು. ಇದಾದ ಬಳಿಕ ರಾಜ್ಯ ಸರಕಾರ ಎಲ್ಲ ಧಾರ್ಮಿಕ ಸ್ಥಳಗಳಿಗೆ ಅನುಮತಿ ನೀಡುವಂತೆ ಆದೇಶ ನೀಡಿತ್ತು. ಆ ಬಳಿಕ ಪೊಲೀಸರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದವು. ಬಳಿಕ ಪೊಲೀಸರು ಅವರಿಗೆ ಅನುಮತಿ ನೀಡಿದ್ದಾರೆ. ಬೆಳಗ್ಗೆ ೬ ರಿಂದ ರಾತ್ರಿ ೧೦ ರ ವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿರುತ್ತದೆ. ಅಲ್ಲದೆ, ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ, ಧ್ವನಿಯ ಮಿತಿಯನ್ನು ಇಡಬೇಕಿದೆ.

ಧ್ವನಿಯ ಮಟ್ಟದ ವಿಷಯಲ್ಲಿ ಕ್ರಮ ಕೈಗೊಳ್ಳಬೇಕು ! – ಭಾಜಪ

ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇವರು, ನಿಯಮಗಳನ್ನು ಪಾಲಿಸಬೇಕು. ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಮಾರ್ಗಸೂಚಿಗಳನ್ನು ನೀಡಿದೆ. ಅನುಮತಿ ನೀಡಿದರೂ, ಡೆಸಿಬಲ್ (ಧ್ವನಿ ಮಾಪನದ ಘಟಕ) ಮಟ್ಟ ಎಷ್ಟಿದೆ ? ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ನಾವು ಬಯಸುತ್ತೇವೆ, ಎಂದಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳಿರುವಾಗ, ಅವರ ಧಾರ್ಮಿಕ ಸ್ಥಳಗಳೂ ಹೆಚ್ಚಿರುವಾಗ ಅಲ್ಪಸಂಖ್ಯಾತ ಮುಸಲ್ಮಾನರ ಮಸೀದಿಯ ತುಲನೆಯಲ್ಲಿ ದೇವಸ್ಥಾನಗಳ ಧ್ವನಿವರ್ಧಕಗಳು ಏಕೆ ಕಡಿಮೆ ಇದೆ ? ಎಂದು ಹಿಂದೂಗಳಲ್ಲಿ ಪ್ರಶ್ನೆ ಮೂಡುತ್ತದೆ !

ಪರವಾನಗಿ ನೀಡಿದ ನಂತರ ಮಸೀದಿಗಳಿಂದ ಆ ಕುರಿತಾದ ನಿಯಮಗಳ ಪಾಲನೆಯಾಗುತ್ತದೆಯೋ ಇಲ್ಲವೋ ಇದರತ್ತ ಪೊಲೀಸರು ನಿಗಾ ವಹಿಸುವರೇ ?, ಎಂಬ ಪ್ರಶ್ನೆ ಉದ್ಭವಿಸುತ್ತದೆ ! ನಿಗಾ ವಹಿಸದಿದ್ದರೆ ಹಿಂದೂ ಸಂಘಟನೆಗಳು ಇದರತ್ತ ಗಮನ ಹರಿಸುವುದು ಅನಿವಾರ್ಯವಾಗಬಹುದು !